HomeFresh Newsಕಡಬ:ರಬ್ಬರ್ ತೋಟದ ಕಾರ್ಮಿಕರನ್ನು ಬೆನ್ನಟ್ಟಿದ ಕಾಡಾನೆಗಳು: ಮೂವರಿಗೆ ಗಾಯ

ಕಡಬ:ರಬ್ಬರ್ ತೋಟದ ಕಾರ್ಮಿಕರನ್ನು ಬೆನ್ನಟ್ಟಿದ ಕಾಡಾನೆಗಳು: ಮೂವರಿಗೆ ಗಾಯ

ಕಡಬ: ಕೊಣಾಜೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ (ಕೆ.ಎಫ್.ಡಿ.ಸಿ) ದ ರಬ್ಬರ್ ತೋಟದಲ್ಲಿ ರಬ್ಬರ್ ಟಾಪಿಂಗ್ ಮಾಡುತ್ತಿದ್ದ ಕಾರ್ಮಿಕರನ್ನು ಕಾಡಾನೆಗಳು ಬೆನ್ನಟ್ಟಿ ಮೂವರು ಗಾಯಗೊಂಡ ಘಟನೆ ಡಿ.16ರ ಶನಿವಾರ ಮುಂಜಾನೆ ಸಂಭವಿಸಿದೆ.

ನಿಗಮದ ಟಾಪಿಂಗ್ ಕಾರ್ಮಿಕ ರಾಜಗೋಪಾಲ್ (49), ಮೇಸ್ತ್ರಿಗಳಾದ ನಾಗಪ್ಪ (53) ಹಾಗೂ ಶಿವರಾಜ್ (43) ಗಾಯಗೊಂಡವರು.
ಗಾಯಾಳುಗಳನ್ನು ಕಡಬ ಸಮುದಾಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾಗ ಆನೆಗಳು ಕಾಣಿಸಿಕೊಂಡಿವೆ.

ಭಯಭೀತರಾದ ಅವರು ಓಡಿ ತಪ್ಪಿಸಿಕೊಳ್ಳುವ ವೇಳೆ ಬಿದ್ದು ತರಚಿದ ಗಾಯಗಳಾಗಿವೆ. ಓಡುವ ವೇಳೆ ಆನೆಗಳು ಅವರನ್ನು ಬೆನ್ನಟ್ಟಿವೆ ಎಂದು ಗಾಯಾಳುಗಳು ತಿಳಿಸಿದ್ದಾರೆ. ಸುದ್ದಿ ತಿಳಿದ ಅರಣ್ಯ ಸಿಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments