ಈಕೆ ಕಲಿತದ್ದು 7ನೇ ತರಗತಿಯವರೆಗೆ ಮಾತ್ರ.. ವಿದ್ಯಾಭ್ಯಾಸ ತೊರೆದು ಬರೋಬ್ಬರಿ 18 ವರ್ಷ ಕಳೆದರೂ ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಬೆಳ್ಳಾರೆ ಜ್ಞಾನದೀಪ ಸಂಸ್ಥೆಯ ವಿದ್ಯಾರ್ಥಿನಿ ಪುಷ್ಪವತಿ ಒಂದೇ ಪ್ರಯತ್ನದಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಡಬ ತಾಲ್ಲೂಕು ಕೊಂಬಾರು ಗ್ರಾಮದ ಕಟ್ಟೆ ಎಮರಡ್ಡ ಮುದ್ದಪ್ಪ ಗೌಡ ಮತ್ತು ಜಾನಕಿ ದಂಪತಿಯ
ಕಡಬ: ಧರ್ಮಸ್ಥಳ ಯೋಜನೆಯ ಕಡಬ ತಾಲೂಕಿನ ಕಾರ್ಯಕರ್ತರ ಪ್ರೇರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಕಡಬ ತಾಲೂಕಿನಲ್ಲಿ 2021-2022ನೇ ಸಾಲಿನ ಸಾಧಕ ಕಾರ್ಯಕರ್ತರ ಅಭಿನಂದನೆ ಹಾಗೂ ಪ್ರೇರಣಾ ಕಾರ್ಯಗಾರವನ್ನು ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ನಿರ್ಧೇಶಕರಾದ ವಸಂತ್ ಸಾಲಿಯಾನ್ ರವರು ಉದ್ಘಾಟಿಸಿ ಮಾತನಾಡಿ. ಗ್ರಾಮಾಭಿವೃಧ್ಧಿ ಯೋಜನೆಯ
ಚಲಿಸುತ್ತಿರುವಾಗಲೇಕಾರು ಬೆಂಕಿಗಾಹುತಿಯಾದ ಘಟನೆ ಕೊಂಬಾರು ಗ್ರಾಮದ ಪೆರುಂದೋಡಿ ಕಟ್ಟೆ ಎಂಬಲ್ಲಿ ಮೇ.14 ರ ರಾತ್ರಿ ನಡೆದಿದೆ.ಪಟ್ರಮೆ ನಿವಾಸಿ ಆನಂದ ಗೌಡ ಎಂಬವರು ತಮ್ಮವರೊಂದಿಗೆ ಕಾರಿನಲ್ಲಿ ಸಂಬಂಧಿಕರಾದ ಕೊಂಬಾರು ಕಟ್ಟೆ ಸೊಮಪ್ಪ ಗೌಡರ ಮನೆಗೆ ಬರುತ್ತಿದ್ದು ಈ ಸಂದರ್ಭದಲ್ಲಿ ಕಾರಿನಲ್ಲಿ ಅಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಕಾರಿನ ಬಹುತೇಕ ಭಾಗಗಳು ಸಂಪೂರ್ಣ ಭಸ್ಮವಾಗಿದೆ. ಕಾರಿನಲ್ಲಿ ಇಬ್ಬರು ಗಂಡಸರು, ಓರ್ವ ಮಹಿಳೆ ಹಾಗೂ ಮಗು ಇದ್ದರು ಎಂದು ತಿಳಿದು ಬಂದಿದೆ.
ಕಡಬ : ಕಡಬದಲ್ಲಿ ಸುನಿಲ್ ಎಂಬ ಯುವಕನ ಮೇಲೆ ಬೃಹತ್ ಮರದ ಕೊಂಬೆಯೊಂದು ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಸ್ತಿಕ್ ಪೈಪ್ ಅಂಗಡಿಯ ಮುಂಭಾಗದಲ್ಲಿ ನಿಂತಿದ್ದ ಲಾರಿಯ ಚಾಲಕನಿಗೆ ಹಿಂಬದಿಗೆ ಬರಲು ಹೇಳುತ್ತಿದ್ದ ವೇಳೆ ಅಲ್ಲೇ ಪಕ್ಕದಲ್ಲಿದ್ದ ಮರದ ಒಣಗಿದ ಕೊಂಬೆಯೊಂದು ಮುರಿದು ಸುನಿಲ್ ಮೇಲೆ ಬಿದ್ದಿದೆ. ಕೊಂಬೆ ಬಿದ್ದ ತಕ್ಷಣ ಸಣ್ಣ ಪ್ರಮಾಣದಲ್ಲಿ ಗಾಯಗೊಂಡ ಸುನಿಲ್ ಅವರನ್ನು ಸ್ಥಳೀಯರು ಉಪಚರಿಸಿ, ನಂತರದಲ್ಲಿ
ಮೂರು ತಿಂಗಳ ಹಿಂದೆ ಕಡಬದ ಬಂಟ್ರ ಗ್ರಾಮದ ಪಾಲೆತ್ತಡ್ಕ ಎಂಬಲ್ಲಿ ಮನೆಗೆ ನುಗ್ಗಿ ನಗದು ಕಳವುಗೈದಿರುವ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮರ್ದಾಳ ನಿವಾಸಿ ಹಕೀಂ (23) ಎಂದು ಗುರುತಿಸಲಾಗಿದ್ದು, ಹಕೀಂ ಗೆ ಕಳ್ಳತನಕ್ಕೆ ಸಹಕರಿಸಿದ ಇನ್ನೋರ್ವ ಆರೋಪಿ ಹಮೀದ್(25) ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ಪೊಲೀಸರು ಬಂಧಿಸಿದ್ದು, ಕಡಬ ಪೊಲೀಸರು ಇನ್ನಷ್ಟೇ ವಶಕ್ಕೆ ಪಡೆಯಬೇಕಿದೆ.ಪಾಲೆತಡ್ಕ ನಿವಾಸಿ ಬಾಲಕೃಷ್ಣ ರೈ ಎಂಬವರಿಗೆ ಮರ್ದಾಳದಲ್ಲಿ ಅಂಗಡಿ
ಕಡಬ: ಕುಂಡಾಜೆ ಸಮೀಪ ಸರಕಾರಿ ಗೇರುಬೀಜ ತೋಟದಲ್ಲಿರುವ ಬೃಹತ್ ಗುಹೆ ಶಿಲಾಯುಗದ ಸಮಾದಿ ಗುಹೆ ಎಂದು ಅಧ್ಯಯನಕಾರರು ಸ್ಪಷ್ಟಪಡಿಸಿದ್ದಾರೆ.ಕುಂಡಾಜೆಯಲ್ಲಿ ಗೇರುತೋಟದಲ್ಲಿ ಬೃಹತ್ ಗುಹೆಯೊಂದಿದ್ದು ಇದು ಪಾಂಡವರ ಗುಹೆ ಎಂದು ಸ್ಥಳೀಯವಾಗಿ ಪ್ರಚಲಿತದಲ್ಲಿತ್ತು. ಇದಕ್ಕೆ ಪುಷ್ಠಿ ಎಂಬಂತೆ ಈ ಪ್ರದೇಶ ಪಾಂಡ್ರಡ್ಕ ಎಂದೇ ಪ್ರಸಿದ್ಧಿಯೂ ಪಡೆದುಕೊಂಡಿತ್ತು. ಈ ಹಿನ್ನಲೆಯಲ್ಲಿ ಈ ಗುಹೆಯ ಕುರಿತು ಇರುವ ಕುತೂಹಲದಿಂದ ಹಾಗೂ ಇದರ ಬಗ್ಗೆ ಅಧ್ಯಯನಕ್ಕಾಗಿ ವೃತ್ತಿಯಲ್ಲಿ ಇಂಜಿನಿಯರ್
ಕಡಬ ಸಮೀಪದ ಪಿಜಕಳ ಪಾಲೋಳಿ ಎಂಬಲ್ಲಿ ಕುಮಾರಾಧಾರ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಪಾಲೋಳಿ ಸೇತುವ ನಿರ್ಮಾಣ ಕಾರ್ಯಕ್ಕೆ ಎಪ್ರಿಲ್ 25 ರಂದು ಶಿಲನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಕೃಷ್ಣ ಶೆಟ್ಟಿ ಕಡಬ ಹೇಳಿದರು. ಅವರು ಶುಕ್ರವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಂದರು ಹಾಗೂ ಮೀನುಗಾರಿಕೆ, ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರ ಶಿಫಾರಸ್ಸಿನ ಮೇರೆಗೆ ನಬಾರ್ಡನಿಂದ 19
ಜಾತ್ಯಾತೀತ ಜನತಾ ದಳ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮದ ರಥ ಎಪ್ರಿಲ್ 21 ನೇ ಗುರುವಾರ ಕಡಬ ತಾಲೂಕಿಗೆ ಆಗಮಿಸಲಿದ್ದು ರಥವನ್ನು ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದು ಜೆಡಿಎಸ್ ಕಡಬ ತಾಲೂಕು ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಹೇಳಿದರು. ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಡಬ ತಾಲೂಕಿನ ಜನತೆಗೆ ಕುಡಿಯಲು ಹಾಗೂ ಕೃಷಿ ಬಳಕೆಗೆ ಬರಪೂರ ನೀರುಣಿಸುವ ಮಹತ್ವಾಕ್ಷಂಕೆಯ ಯೋಜನಾ ಉದ್ದೇಶವನ್ನು ಹೊಂದಿರುವ ಈ
ಕಡಬ: ಶಾಲೆ ಮುಗಿಸಿ ಮನೆಗೆ ಬಂದ ಬಾಲಕನೊಬ್ಬ ಪೇರಳೆ ಮರ ಹತ್ತಲು ಹೋಗಿ ಉರುಳಿ ಬಿದ್ದು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ದೋಳ್ಪಾಡಿ ಬಳಿ ಮಾ.17ರ ಸಂಜೆ ನಡೆದಿದೆ. ದೋಳ್ಪಾಡಿ ಮರಕ್ಕಡ ಮನೆಯ ದಿವಾಕರ ಗೌಡರವರ ಪುತ್ರ ಉಲ್ಲಾಸ್ ಡಿ.ಎಂ (8 ವ.) ಮೃತ ಬಾಲಕ. ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ಉಲ್ಲಾಸ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ. ಉಲ್ಲಾಸ್ ಎಂದಿನಂತೆ ಇಂದು ಕೂಡ ಶಾಲೆಗೆ ಹೋಗಿದ್ದು ಸಂಜೆ ಮನೆಗೆ
ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಮರ್ಧಾಳ ಅಂಬೇಡ್ಕರ್ ಭವನದಲ್ಲಿ ಚಾಲನೆ ನೀಡಲಾಯಿತು. ಕಡಬ ತಾಲೂಕಿನ ಪ್ರತೀ ಗ್ರಾಮಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗಿದ್ದುಮರ್ಧಾಳದಲ್ಲಿ ಸಾಂಕೇತಿಕವಾಗಿ ದಾಖಲೆಗಳನ್ನು ರೈತರಿಗೆ (ಪಹಣಿ, ಜಮೀನಿನ ನಕ್ಷೆ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು) ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಡಬ ತಹಸೀಲ್ದಾರ್ ಅನಂತ ಶಂಕರ್ ಬಿ