HomeFresh Newsಬೈಂದೂರು : ರಾಷ್ಟ್ರಭಕ್ತರ ಬಳಗ ವತಿಯಿಂದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ

ಬೈಂದೂರು : ರಾಷ್ಟ್ರಭಕ್ತರ ಬಳಗ ವತಿಯಿಂದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ

ಬೈಂದೂರು : ರಾಷ್ಟ್ರಭಕ್ತರ ಬಳಗ ಬೈಂದೂರು ವತಿಯಿಂದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮ ಉಪ್ಪುಂದ ದೇವಕಿ ಬಿ ಆರ್ ಸಭಾಂಗಣದಲ್ಲಿ ನಡೆಯಿತು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ವಿಶ್ವನಾಯಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಲು ಬೆಂಬಲಿಸುತ್ತೇನೆ. ಬಿಜೆಪಿಯ ಹೊಂದಾಣಿಕೆ ರಾಜಕಾರಣಕ್ಕೆ ನೊಂದ ಕಾರ್ಯಕರ್ತರ ಧ್ವನಿಯಾಗಿ ಈ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಹೆಚ್ಚಿನ ಕಾರ್ಯಕರ್ತರು ನನಗೆ ಬೆಂಬಲ ವ್ಯಕ್ತಪಡಿಸಿದ್ದು ರಾಷ್ಟ್ರಭಕ್ತರ ಬಳಗದ ಸಂಘಟನೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಹೇಳಿದರು.

ಹೊಸದುರ್ಗ ಮಾಜಿ ಗುಳಿಹಟ್ಟಿ ಶೇಖರ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ನಾರಾಯಣ ಗುಜ್ಜಾಡಿ,  ಹಿಂದೂ ಜಾಗರಣೆಯ ಅಧ್ಯಕ್ಷ  ಯಶವಂತ ಗಂಗೊಳ್ಳಿ, ಉಪ್ಪುಂದ ಗ್ರಾ.ಪಂ ಮಾಜಿ ಸದಸ್ಯ ರಾಜು ದೇವಾಡಿಗ ಕಂಚಿಕಾನ್, ರಾಷ್ಟ್ರಭಕ್ತರ ಬಳಗ ಬೈಂದೂರು ಮುಖಂಡರಾದ  ಮಂಜುನಾಥ ರಾವ್ ಬೈಂದೂರು, ಗಣೇಶ್ ರಾವ್ ಬೈಂದೂರು, ರೇಣುಕಾ, ಚಂದ್ರಯ್ಯ ಆಚಾರ್ಯ, ವಿನೋದ್ ಹೆಬ್ಬಾರ್, ವಿಷ್ಣು, ವಿನಯ್ ನಾಯರಿ ನಾವುಂದ ,  ಇನ್ನಿತರರು ಉಪಸ್ಥಿತರಿದ್ದರು.

ಶ್ರೀಧರ್ ಬಿಜೂರು  ಸ್ವಾಗತಿಸಿ/ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಗೋಪಾಲಕೃಷ್ಣ ನಾಡ ಕಾರ್ಯಕ್ರಮ ನಿರೂಪಿಸಿದರು, ಶ್ರೀಧರ್ ದೇವಾಡಿಗ ಬಡಾಕೆರೆ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments