HomeUncategorizedಬರ್ಮೀಸ್ ಗ್ರೇಪ್ ಎಂಬ ಗೊಂಚಲು ಹಣ್ಣು | ಮರದ ಕಾಂಡದಲ್ಲಿ ನೇರ ಆಗುವ ಹಣ್ಣು |...

ಬರ್ಮೀಸ್ ಗ್ರೇಪ್ ಎಂಬ ಗೊಂಚಲು ಹಣ್ಣು | ಮರದ ಕಾಂಡದಲ್ಲಿ ನೇರ ಆಗುವ ಹಣ್ಣು | ಲಟ್ಕಾ, ಲುಟ್ಕೊ, ಮಫಾಯಿ ಹಣ್ಣು

ಮ್ಯಾನ್ಮಾರ್ ಮೂಲದ ಉಷ್ಣವಲಯದ ಬರ್ಮೀಸ್ ಗ್ರೇಪ್ ದೊಡ್ಡ ಮರದ ಕಾಂಡದಲ್ಲಿ ಆಗುವ ಗೊಂಚಲು ಗೊಂಚಲು ಹಣ್ಣಾಗಿದೆ.

ತಾಯ್‌ಲ್ಯಾಂಡ್, ಭಾರತ, ಮ್ಯಾನ್ಮಾರ್‌ಗಳಲ್ಲಿ ಹೆಚ್ಚು ಆದರೂ ಚೀನಾ, ಲಾವೋಸ್, ಮಲೇಶಿಯಾ, ವಿಯೆಟ್ನಾಂ, ಬಾಂಗ್ಲಾದೇಶ ಎಂದು ತೆಂಕಣ ಏಶಿಯಾದಲ್ಲೆಲ್ಲ ಬೆಳೆಯುತ್ತದೆ. ಕಿತ್ತಳೆ ಹಳದಿ ಹೊರ ಸಿಪ್ಪೆಯ ಇದರ ಒಳತಿರುಳು ಬಿಳಿ ಪಾರದರ್ಶಕವಾಗಿರುತ್ತದೆ.

ಸಿಹಿ ಹುಳಿ ದ್ರಾಕ್ಷಿ ರುಚಿಯ ಹಣ್ಣು ಇದು. ನೇರ ತಿನ್ನುವುದಲ್ಲದೆ, ಜಾಮ್, ಜೆಲ್ಲಿ, ವೈನ್ ತಯಾರಿಕೆಯಲ್ಲಿ ಬಳಸುತ್ತಾರೆ. ವಿಟಮಿನ್ ಸಿ, ಲವಣಗಳು, ಆಂಟಿಆಕ್ಸಿಡೆಂಟ್ ಎಂದು ಆರೋಗ್ಯಕರ ಹಣ್ಣು ಇದು. ಲಟ್ಕಾ, ಲುಟ್ಕೋ, ಮಫಾಯಿ ಎಂದು ಹಲವು ಪ್ರಾದೇಶಿಕ ಹೆಸರುಗಳನ್ನು ಹೊಂದಿದೆ.

ಮಳೆಕಾಡುಗಳಲ್ಲಿ ಅಲ್ಲಲ್ಲಿ ಇವೆ; ನಾಡಲ್ಲೂ ಬೆಳೆಸುತ್ತಾರೆ. ಭಾರೀ ಮರವಾದ ಇದರ ತೊಗಟೆ, ಬೇರು ಒಣಗಿಸಿ, ಪುಡಿ ಮಾಡಿ ಇಟ್ಟುಕೊಂಡು ಕಷಾಯ ತಯಾರಿಸಿ ಕುಡಿಯುವುದೂ ಇದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments