HomeUncategorizedಹೊಳೆಯುವ ಕಡು ನೀಲಿ ಬಿಳಿ ಬಣ್ಣದ ಜೇಡ | ಆಂಧ್ರದ ಪೀಕಾಕ್ ಟಾರಂಟೂಲಾ ಜೇಡ |...

ಹೊಳೆಯುವ ಕಡು ನೀಲಿ ಬಿಳಿ ಬಣ್ಣದ ಜೇಡ | ಆಂಧ್ರದ ಪೀಕಾಕ್ ಟಾರಂಟೂಲಾ ಜೇಡ | ಪೂರ್ವ ಘಟ್ಟಗಳ ಆಭರಣ ಈ ಜೇಡ

ಪಶ್ಚಿಮ ಘಟ್ಟಗಳಂತೆ ಪೂರ್ವ ಘಟ್ಟಗಳು ಕೂಡ ಜೀವ ವೈವಿಧ್ಯತೆಯದಾಗಿದ್ದು ನವಿಲು ಟಾರಂಟೂಲಾ ಅವುಗಳಲ್ಲಿ ಒಂದು.

ಟಾರಂಟೂಲಾ ದೊಡ್ಡ ಜಾತಿಯ ಜೇಡ. ಯೂರೋಪಿನ ಟಾರಂಟೂಲಾ ವಿಷವಿರುವುದೂ ಆಗಿದೆ. ಆದರೆ ಕಡು ನೀಲಿ ಬಣ್ಣದ ನಡುವೆ ಬಿಳಿಯ ಚಿತ್ತಾರದ ಪೂರ್ವ ಘಟ್ಟಗಳ ಪೀಕಾಕ್ ಟಾರಂಟೂಲಾ ಜೇಡದಷ್ಟು ಸುಂದರ ಜೇಡ ಬೇರಿಲ್ಲ. ಇದನ್ನು ಪೂರ್ವ ಘಟ್ಟಗಳ ಆಭರಣ ಎಂದು ಕರೆಯಲಾಗಿದೆ.

೧೮೯೮ರಲ್ಲಿ ಎಚ್. ಆರ್. ಪಿ. ಕಾರ್ಟರ್ ಮೊದಲಿಗೆ ಇದನ್ನು ಬ್ರಿಟಿಷ್ ಮ್ಯೂಸಿಯಂಗೆ ಕಳುಹಿಸಿದ. ಅಂದಿನಿಂದ ಇದನ್ನು ಸಾಕುವವರೂ ಹೆಚ್ಚಿದ್ದಾರೆ. ಹಾಗಾಗಿ ಈ ಜೇಡ ಕಳ್ಳಸಾಗಣೆ ಆಗುತ್ತದೆ. ಅಲ್ಲದೆ ಅದರ ನೆಲೆಗಳು ನಾಶವಾದುದರಿಂದ ಈ ಸುಂದರ ಜೇಡ ನಿರ್ವಂಶದಂಚಿನದೆನಿಸಿದೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರವರನ್ನು ಮುಂದಿಟ್ಟುಕೊಂಡು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಇದರ ಉಳಿವಿಗೆ ಹೋರಾಡುತ್ತಿದ್ದಾರೆ.

ಆಂಧ್ರ ಪ್ರದೇಶದ ಅರಣ್ಯ ಇಲಾಖೆ ಮತ್ತು ಪೂರ್ವ ಘಟ್ಟಗಳ ವೈಲ್ಡ್ ಲೈಫ್ ಸೊಸೈಟಿ ಸೇರಿ ನವಿಲು ಜೇಡ ಉಳಿಸಲು ಯೋಜಿಸಿವೆ. ನಾಗಾರ್ಜುನ ಸಾಗರ ಶ್ರೀಶೈಲಂ ಟೈಗರ್ ರಿಸರ್ವ್ ಮುಂದೆ ಪೀಕಾಕ್ ಟಾರಂಟೂಲಾ ರಿಸರ್ವ್ ಕೂಡ ಆಗಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments