HomeFresh Newsಆಭರಣ ಜ್ಯುವೆಲ್ಲರ್ಸ್‌ನ ಜಾಹೀರಾತುವಿನ ಮಾಡೆಲ್ ಆಗಿ ಕಂಬಳದ ಶ್ರೀನಿವಾಸ್ ಗೌಡ

ಆಭರಣ ಜ್ಯುವೆಲ್ಲರ್ಸ್‌ನ ಜಾಹೀರಾತುವಿನ ಮಾಡೆಲ್ ಆಗಿ ಕಂಬಳದ ಶ್ರೀನಿವಾಸ್ ಗೌಡ

ಕಂಬಳದ ದಾಖಲೆಯ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ್ ಗೌಡ ಚಿನ್ನಾಭರಣಗಳ ಜಾಹೀರಾತುವಿನ ಮಾಡೆಲ್ ಆಗಿ ಮಿಂಚಿದ್ದಾರೆ. ಚಿನ್ನಾಭರಣ ಕಂಪನಿ ತುಳುನಾಡಿನ ಜಾನಪದೀಯ ಆಚರಣೆ ಕಂಬಳ ಓಟಗಾರ ಶ್ರೀನಿವಾಸ್ ಗೌಡನನ್ನು ತಮ್ಮ ಬ್ರಾಂಡ್‌ನ ರಾಯಭಾರಿ ಆಗಿ ಗುರುತಿಸಿದ್ದು, ಕರಾವಳಿಯೆಲ್ಲೆಡೆ ಕಂಪೆನಿಯ ನೂತನ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಸಿರು ಕಾನನದ ನಡುವೆ ಕಟ್ಟುಮಸ್ತಾದ ದೇಹ ಹೊಂದಿರುವ ಕಂಬಳ ಓಟಗಾರ ಶ್ರೀನಿವಾಸ ಗೌಡ ಮೈ ತುಂಬಾ ಚಿನ್ನಾಭರಣ ಧರಿಸಿ ಕಂಬಳ ಕೋಣವನ್ನು ಹಿಡಿದಿರುವ ಫೋಟೋ ಇದೀಗ ಕರಾವಳಿಯೆಲ್ಲೆಡೆ ಜಾಹೀರಾತು ಫ್ಲೆಕ್ಸ್‌ಗಳಲ್ಲಿ ರಾರಾಜಿಸುತ್ತಿದೆ. ಸ್ಥಳೀಯ ಪ್ರತಿಭೆಗೆ ಅವಕಾಶ ನೀಡುವುದರ ಜೊತೆಗೆ ಕಂಪೆನಿಯ ವಿನೂತನ ಪ್ರಚಾರದ ಶೈಲಿಗೆ ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫ್ಲೆಕ್ಸ್‌ನಲ್ಲಿ ನಗುಮುಖದ ಮೂಲಕ ಶ್ರೀನಿವಾಸ ಗೌಡ ಫೋಟೋಗೆ ಫೋಸ್ ನೀಡಿದ್ದಾರೆ. ಕೈಬೆರಳುಗಳ ತುಂಬಾ ವೈವಿಧ್ಯಮಯ ಉಂಗುರಗಳು, ಕೈಗೊಂದು ಕಡಗ, ಬ್ರಾಸ್‌ಲೇಟ್‌, ಪೆಂಡೆಂಟ್ ಸಹಿತ ಚಿನ್ನದ ಹಾರ ಧರಿಸಿ ಪುರುಷರೂ ಸ್ವರ್ಣಾಲಂಕಾರ ಹೇಗೆ ಮಾಡಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಈ ಬಗ್ಗೆ ಸ್ವತಃ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿರುವ ಶ್ರೀನಿವಾಸ್ ಗೌಡ ‘ಆಭರಣ ಜ್ಯುವೆಲ್ಲರ್ಸ್‌ನವರು ಕಂಬಳ ಕ್ರಿಡೆಗೆ ಈ ಮುಖಾಂತರ ಪ್ರೋತ್ಸಾಹ ಕೊಟ್ಟಿದ್ದಾರೆ. ಇಲ್ಲಿಯವರೆಗೆ ಕೇವಲ ಸ್ತ್ರೀಯರಿಗೆ ಮಾತ್ರ ಅವಕಾಶ ಸಿಗುತ್ತಿತ್ತು. ಆದರೆ ಈಗ ಆ ಒಂದು ಅವಕಾಶ ಪುರುಷರಿಗೂ ಸಿಗುತ್ತಿದೆ. ಇಂತಹ ಅದೆಷ್ಟೇ ಅವಕಾಶಗಳು ಸಿಕ್ಕರೂ ಸದುಪಯೋಗಪಡಿಸಿಕೊಳ್ಳುತ್ತೇನೆ. ಹಾಗಂದ ಮಾತ್ರಕ್ಕೆ ಕಂಬಳವನ್ನು ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments