ಎಐಟಿಯುಸಿ ರಾಷ್ಟ್ರೀಯ ಮಂಡಳಿಗೆ ವಿ.ಎಸ್.ಬೇರಿಂಜ ಆಯ್ಕೆ

ಮಂಗಳೂರು. ಸ್ವಾತಂತ್ರ್ಯಾಪೂರ್ವದ 1920 ರಲ್ಲಿ ಸಂಘಟಿತಗೊಂಡ ದೇಶದ ಪ್ರಪ್ರಥಮ ಕಾರ್ಮಿಕ ಸಂಘಟನೆಯಾದ ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)ನ ರಾಷ್ಟ್ರೀಯ ಮಂಡಳಿಗೆ ಎಐಟಿಯುಸಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರೂ, ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಮಂಗಳೂರಿನ ವಿ.ಎಸ್. ಬೇರಿಂಜ ಆಯ್ಕೆಯಾಗಿದ್ದಾರೆ. 2022 ಡಿಸೆಂಬರ್ 16 ರಿಂದ 20 ರವರೆಗೆ ಕೇರಳದ ಅಳಪುಝದಲ್ಲಿ ಜರಗಿದ ಎಐಟಿಯುಸಿಯ 42ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ವಿ.ಎಸ್. ಬೇರಿಂಜರನ್ನು ರಾಷ್ಟ್ರೀಯ ಮಂಡಳಿಗೆ ಆಯ್ಕೆ ಮಾಡಲಾಯಿತು ಎಂದು ಎಐಟಿಯುಸಿ ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿ ತಿಳಿಸಿದೆ

Related Posts

Leave a Reply

Your email address will not be published.