ಪರಿಶಿಷ್ಟ ಜಾತಿ ಮುಂಡಾಳ ಸಮಾಜದ ನೂತನ ಕಟ್ಟಡ ಸಮಿತಿಯ ಅಧ್ಯಕ್ಷರಾಗಿ ಶ್ರೀ ಸದಾಶಿವ ಕುಂದರ್ ಆಯ್ಕೆ

ಪರಿಶಿಷ್ಟ ಜಾತಿ ಮುಂಡಾಳ ಸಮಾಜ ಬಾಂಧವರ ಸಾಮಾಜಿಕ,ಶೈಕ್ಷಣಿಕ ಮತ್ತು ಔದ್ಯೋಗಿಕ ವಿಚಾರಧಾರೆಗಳಿಗೆ ಸಹಕಾರಿಯಾಗುವಂತೆ ಆಸುಪಾಸಿನ ಗ್ರಾಮಗಳ ಸಮಾಜ ಬಾಂಧವರ ಉಪಸ್ಥಿತಿಯಲ್ಲಿ ನೂತನ ಕಟ್ಟಡ ಸಮಿತಿಯನ್ನು ಶ್ರೀ ಓಂಕಾರೇಶ್ವರಿ ಮಂದಿರ ತೋಕೂರು ಇದರ ಅಧ್ಯಕ್ಷರಾದ ಶ್ರೀ ಸದಾಶಿವ ಕುಂದರ್ ರವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.ಕಟ್ಟಡ ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀ ಸದಾಶಿವ ಕುಂದರ್ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಶ್ರೀ ಶ್ರೀಧರ ಕೆಮ್ರಾಲ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಹಿಮಕರ್, ಜೊತೆ ಕಾರ್ಯದರ್ಶಿಯಾಗಿ ಶ್ರೀ ಸೀತಾರಾಮ್ ಸಾಲ್ಯಾನ್, ಕೋಶಾಧಿಕಾರಿಯಾಗಿ ಶ್ರೀ ಶಂಕರ್ ಮಾಸ್ಟರ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಶ್ರೀ ಸುಕುಮಾರ್ ಮಾಸ್ಟರ್, ಸಮಿತಿ ಸದಸ್ಯರಾಗಿ ಶ್ರೀ ಸಂಕಪ್ಪ ಎಂ, ಶ್ರೀ ಗೌರೀಶ್, ಶ್ರೀ ಸಂಜೀವ ಕರ್ಕೇರ, ಕುಮಾರಿ ಸುಜಾತ, ಶ್ರೀ ಸದಾಶಿವ ಸಾಲ್ಯಾನ್, ಶ್ರೀ ನಾಗೇಶ್ ಸಾಲ್ಯಾನ್, ಶ್ರೀಮತಿ ಪುಷ್ಪ ರವರನ್ನು ಆಯ್ಕೆ ಮಾಡಲಾಯಿತು.ಕಾರ್ಯಕ್ರಮವನ್ನು ಶ್ರೀ ಹಿಮಕರ್ ರವರು ನಿರೂಪಿಸಿದರು.
