HomeFresh Newsಯುಎಸ್‍ಎ ಹೋಟೆಲಿನ ಭಾರತೀಯ ಸಿಬ್ಬಂದಿ; ಕಡಿಮೆ ದರಕ್ಕೆ ಹೆಣ್ಣು, ಕೋಣೆಯ ವ್ಯವಹಾರ

ಯುಎಸ್‍ಎ ಹೋಟೆಲಿನ ಭಾರತೀಯ ಸಿಬ್ಬಂದಿ; ಕಡಿಮೆ ದರಕ್ಕೆ ಹೆಣ್ಣು, ಕೋಣೆಯ ವ್ಯವಹಾರ

ಗಜರಾತ್ ಮೂಲದ ಕವನ್ ಕುಮಾರ್ ಪಟೇಲ್ ಎಂಬ ಬಾಡಿಗೆಬೀಡು ಸಿಬ್ಬಂದಿ ಕಡಿಮೆ ಹಣಕ್ಕೆ ಹೆಣ್ಣು, ಕೋಣೆಯ ವ್ಯವಹಾರದಲ್ಲಿ ಈಗ ಯುಎಸ್‍ಎ ಜೈಲೂಟಕ್ಕೆ ಬಾಜನನಾಗಿದ್ದಾನೆ.


ಇಪ್ಪತ್ತೇಳರ ಪ್ರಾಯದ ಗುಜರಾತಿನ ಭಾರತೀಯ ಕವನ್ ಕುಮಾರ್ ಪಟೇಲ್ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ದೊಡ್ಡ ಹೋಟೆಲೊಂದರ ಸಿಬ್ಬಂದಿ. ಆತನ ಕಡಿಮೆ ಹಣಕ್ಕೆ ಹೆಣ್ಣು, ಕೋಣೆ ಕೊಡಿಸುವ ಒಂದು ಅಕ್ರಮ ವ್ಯವಹಾರ ಸರಪಳಿಯನ್ನು ಹೊಂದಿದ್ದ. ನೆಬ್ರಾಸ್ಕಾದ ಒಮಾಹದ ಹೋಟೆಲಿನಲ್ಲಿ ಈ ವ್ಯವಹಾರದ ತಿಕ್ಕಾಟವೊಂದರಲ್ಲಿ ಆತ ಹೆಣ್ಣೊಬ್ಬಳ ಮೇಲೆ 2025ರ ಜನವರಿಯಲ್ಲಿ ಹಲ್ಲೆ ಮಾಡಿದ್ದ. ಆ ಜನವರಿ ಆರನೇ ತಾರೀಕಿನಿಂದಲೇ ಆತನ ಮೇಲೆ ಪ್ರಕರಣ ಆರಂಭವಾಗಿತ್ತು.


ತನಿಖೆಯಿಂದ ಆತನು ಹೆಣ್ಣುಮಕ್ಕಳ ಕಳ್ಳಸಾಗಣೆಯಲ್ಲಿ ತೊಡಗಿದ್ದುದು ತಿಳಿದು ಬಂದು ಆತನ ಬಂಧನವಾಗಿತ್ತು. ಆತನು ಸ್ವದೇಶದಿಂದ ಇಬ್ಬರು ಮೈನರ್ ಹುಡುಗಿಯರನ್ನು ಸಾಗಿಸಿ ತಂದು ಇಲ್ಲಿ ಸೆಕ್ಸ್ ವರ್ಕಿಂಗಿಗೆ ಮಾರಿದ್ದುದು ಹೋಮ್ ಲ್ಯಾಂಡ್ ಸೆಕ್ಯೂರಿಟಿ ಟಾಸ್ಕ್ ಫೋರ್ಸ್ ಮತ್ತು ಒಮಾಹ ಪೋಲೀಸರಿಗೆ ತಿಳಿದು ಬಂದುದರಿಂದ ಪ್ರಕರಣವು ಗಂಭೀರ ತಿರುವು ಪಡೆಯಿತು. ಕವನ್ ಕುಮಾರ್‍ಗೆ ಶಿಕ್ಷೆಯಾಗಿದ್ದು, ಅವಧಿ ನಿರ್ಣಯ ಹೇಳಿಲ್ಲ. ಶಿಕ್ಷೆಯ ಅವಧಿ ಮುಗಿದ ಮೇಲೆ ಆತನನ್ನು ಭಾರತಕ್ಕೆ ಗಡಿಪಾರು ಮಾಡಲಾಗುತ್ತದೆ.


ಈ ಹೆಣ್ಣುಮಕ್ಕಳ ಕಳ್ಳಸಾಗಣೆ ಸರಪಳಿಯಲ್ಲಿ ಎಡೂರ್ಡೊ ಜೋಸ್ ಪೆರ್ಡೋಮೊ, ಮೈಕೆಲ್ ಮಾರ್ಟಿನೆಜ್ ಗೋಂಜಾಲೆಜ್, ಆಲ್ಫ್ರೆಡೋ ಜಂಬ್ರಾನೋ ಹರ್ತಾಡೋ, ಮತ್ತಿಬ್ಬರು ಭಾರತೀಯ ಹೋಟೆಲ್ ಸಿಬ್ಬಂದಿ ಸುಮಿತ್ ಚೌಧರಿ, ವಿಶಾಲ್ ಗೋಸ್ವಾಮಿಯವರು ಕೂಡ ತಪ್ಪಿತಸ್ಥರೆಂದು ಶಿಕ್ಷೆಗೆ ಗುರಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments