ಅಡ್ಯಾರ್ ನಲ್ಲಿರುವ ಐಸ್ ಕ್ರೀಮ್ ದಾಸ್ತಾನು ಕೇಂದ್ರವೊಂದರಲ್ಲಿ ಸೋಮವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ನಾಶನಷ್ಟ ಸಂಭವಿಸಿರುವುದಾಗಿ ವರದಿಯಾಗಿದೆ.
ಅಡ್ಯಾರ್ ನಲ್ಲಿರುವ ಪೋಲಾರ್ ಐಸ್ ಕ್ರೀಂ ಸ್ವಾಕಿಸ್ಟ್ ಎಂಬ ನಂದಿನಿ ಐಸ್ ಕ್ರೀಂ ದಾಸ್ತಾನು ಕೇಂದ್ರದಲ್ಲಿ ಸೋಮವಾರ ತಡರಾತ್ರಿ 2 ಗಂಟೆ ಸುಮಾರಿಗೆ ಬೆಂಕಿ ಈ ಅವಘಡ ಸಂಭವಿಸಿದೆ. ಈ ವೇಳೆ ದಾಸ್ತಾನು ಕೇಂದ್ರದ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಲಾರಿ ಸಹಿತ ಎರಡು ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದು ಬಂದಿದೆ.
ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲವಾದರೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿರಬಹುದೆಂದು ಶಂಕಿಸಲಾಗಿದೆ.
ಮೂರು ಅಗ್ನಿಶಾಮಕ ವಾಹನಗಳು ಸುಮಾರು 4 ಗಂಟೆಗಳ ಅವಿರತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿದವು.

