ಮಂಗಳೂರಿನ ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು(ಎಸ್.ಜೆ.ಇ.ಸಿ) ಸಂಸ್ಥೆಯು 25 ವರ್ಷಗಳ ಬೆಳ್ಳಿ ಮಹೋತ್ಸವ ಆಚರಣೆಯ ಭಾಗವಾಗಿ ಕೈಗಾರಿಕಾ ಸಮಾವೇಶವನ್ನು ಆಯೋಜಿಸಲಾಗಿದೆ. ಸಂಸ್ಥೆಯ ಅಸಾಮಾನ್ಯ ಬೆಳವಣಿಗೆ, ಅನುಗ್ರಹ ಮತ್ತು ಕೃತಜ್ಞತೆಯ ಹಿನ್ನೆಲೆಯಲ್ಲಿ ಡಿಸೆಂಬರ್ 3, 2026 ರಂದು ವಾಮಂಜೂರಿನ ಕ್ಯಾಂಪಸ್ನಲ್ಲಿ ಒಂದು ದಿನದ ಕೈಗಾರಿಕಾ ಸಮಾವೇಶ 2026 ಅನ್ನು ಆಯೋಜಿಸುತ್ತಿದೆ. “ಸಿನರ್ಜೈಸಿಂಗ್ ಇಂಡಸ್ಟ್ರಿ, ಅಕಾಡೆಮಿಯಾ ಮತ್ತು ಪ್ರಾದೇಶಿಕ ಸ್ಟಾರ್ಟ್ಅಪ್ ಗಳು ” ಎಂಬ ವಿಷಯಾಧಾರಿತ ಸಮಾವೇಶ ಇದಾಗಿದೆ. ಕರಾವಳಿ ಕರ್ನಾಟಕದ ಉದ್ಯಮ, ಅಕಾಡೆಮಿಯಾ ಮತ್ತು ಉದಯೋನ್ಮುಖ ಸ್ಟಾರ್ಟ್ಅಪ್ ಗಳ ನಡುವಿನ ಸಹಯೋಗವನ್ನು ಬಲಪಡಿಸುವ ಗುರಿಯನ್ನು ಇದು ಹೊಂದಿದೆ.
ಜ್ಯೋತಿ ಲ್ಯಾಬ್ಸ್ ಲಿಮಿಟೆಡ್ ನ ಮಾಜಿ ಜಂಟಿ ವ್ಯವಸ್ಥಾಪಕ ನಿರ್ದೇಶಕ, ಬೆಂಗಳೂರಿನ ಯುಕೆ & ಕೋ ಸಂಸ್ಥಾಪಕ ಮತ್ತು ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಫಿಕ್ಕಿ) ಕರ್ನಾಟಕ ರಾಜ್ಯ ಮಂಡಳಿಯ ಹಿಂದಿನ ಅಧ್ಯಕ್ಷ ಮತ್ತು ಮಾರ್ಗದರ್ಶಕ ಡಾ. ಕೆ. ಉಲ್ಲಾಸ್ ಕಾಮತ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕದ ಬೆಳಗಾವಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕೈಗಾರಿಕಾ ಎಂಜಿನಿಯರಿಂಗ್ ಮತ್ತು ಆಟೊಮೇಷನ್ ಸಮೂಹ ಸಂಸ್ಥೆ ಕ್ರಿಂಟರ್ಸ್ ಗ್ರೂಪ್ ಆಫ್ ಕಂಪನಿಗಳ ಸ್ಥಾಪಕ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಶ್ರೀ ನೀಲೇಶ್ ಚೌಗುಲೆ ಅವರು ಗೌರವಾನ್ವಿತ ಅತಿಥಿಯಾಗಿ
ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮವು ಉದ್ಯಮದ ಪ್ರಮುಖರು, ಶಿಕ್ಷಣ ತಜ್ಞರು, ನೀತಿ ನಿರೂಪಕರು, ಹೂಡಿಕೆದಾರರು, ಉದ್ಯಮಿಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ ಮತ್ತು ಸುಸ್ಥಿರ ಪಾಲುದಾರಿಕೆಗಳಿಗೆ ಅವಕಾಶಗಳನ್ನು ಅನ್ವೇಷಣೆ ಮಾಡಲಿದೆ. ಪ್ರಾದೇಶಿಕ ನಾವೀನ್ಯತೆ ಪರಿಸರ ವ್ಯವಸ್ಥೆಗಳು, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಅರಿವಿನ ಸೈಬರ್-ಭೌತಿಕ ಕಾರ್ಖಾನೆಗಳ ಕುರಿತು ಪ್ರಮುಖ ಭಾಷಣಗಳನ್ನು ಒಳಗೊಂಡಿರುತ್ತದೆ, ಜೊತೆಗೆ ಉದ್ಯಮ- ಎಂಜಿನಿಯರಿಂಗ್ ಪದವೀಧರರು, ಪ್ರಾದೇಶಿಕ ಉದ್ಯಮದ ಅವಶ್ಯಕತೆಗಳು, ಸ್ಟಾರ್ಟ್ ಅಪ್ ಅಭಿವೃದ್ಧಿ ಮತ್ತು ಉದ್ಯಮ-ಶೈಕ್ಷಣಿಕ ಸಂಶೋಧನಾ ಸಹಯೋಗಗಳ
ಮೇಲೆ ಕೇಂದ್ರೀಕರಿಸುವ ನಾಲ್ಕು ಸಮೂಹ ಚರ್ಚೆಗಳನ್ನು ಒಳಗೊಂಡಿರುತ್ತದೆ.
ಸ್ಟಾರ್ಟ್ ಅಪ್ ಮತ್ತು ನಾವೀನ್ಯತೆ ಪ್ರದರ್ಶನವು ಒಂದು ಪ್ರಮುಖ ಅಂಶವಾಗಿದೆ, ಇದು ಸ್ಟಾರ್ಟ್ಅಪ್ ಗಳು, ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಸ್ಟಾರ್ಟ್ಅಪ್ ಗಳಿಗೆ ತಮ್ಮ ಉತ್ಪನ್ನಗಳು, ತಂತ್ರಜ್ಞಾನಗಳು ಮತ್ತು ವ್ಯವಹಾರ ಕಲ್ಪನೆಗಳನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸುತ್ತದೆ. ‘ಎಲಿವೇಟರ್ ಪಿಚ್’ ಸ್ಪರ್ಧೆಯು ಸ್ಟಾರ್ಟ್ ಅಪ್ ಗಳು ಉದ್ಯಮದ ನಾಯಕರು ಮತ್ತು ಹೂಡಿಕೆದಾರರ ತೀರ್ಪುಗಾರರ ಮುಂದೆ ತಮ್ಮ ಆಲೋಚನೆಗಳನ್ನು ಪ್ರಸ್ತುತಪಡಿಸಲು ಅವಕಾಶ ಕಲ್ಪಿಸಲಿದೆ. ವಿಜೇತರಿಗೆ ಆಕರ್ಷಕ ನಗದುಬಹುಮಾನಗಳನ್ನು ನೀಡಲಾಗುವುದು. ಪ್ರದರ್ಶನಕ್ಕಾಗಿ ನೋಂದಾಯಿಸಿಕೊಳ್ಳುವ ಎಲ್ಲಾ ಸ್ಟಾರ್ಟ್ ಅಪ್ ಗಳಿಗೆ ಉಚಿತವಾಗಿ ಸ್ಟಾಲ್ ಸ್ಥಳವನ್ನು ಒದಗಿಸಲಾಗುತ್ತದೆ. ಯಾವುದೇ ಸ್ಟಾಲ್ ಅಥವಾ ಪ್ರದರ್ಶನ ಶುಲ್ಕವನ್ನು ವಿಧಿಸಲಾಗುವುದಿಲ್ಲ.
ಈ ಸಮಾವೇಶವು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಮತ್ತು ಎಸ್.ಜೆ.ಇ.ಸಿ ಅಧ್ಯಕ್ಷರಾದ ಪರಮಪೂಜ್ಯ ಅತೀ ವಂ. ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರ ಆಶೀರ್ವಾದದೊಂದಿಗೆ ನಡೆಯಲಿದೆ. ಸಂಸ್ಥೆಯ ನಿರ್ದೇಶಕರಾದ ವಂ.ಫಾ. ವಿಲ್ಫ್ರೆಡ್ ಪಿ. ಡಿ’ಸೋಜಾ ಮತ್ತು ಸಹಾಯಕ ನಿರ್ದೇಶಕರಾದ ವಂ.ಫಾ. ಕೆನೆತ್ ಆರ್.
ಕ್ರಾಸ್ತಾ ಅವರು ಪೋಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಾಂಶುಪಾಲರಾದ ಡಾ. ರಿಯೊ ಡಿ’ಸೋಜಾ ಮತ್ತು ಮುಖ್ಯ ಆಡಳಿತಾಧಿಕಾರಿ ಡಾ. ಜಾನ್ ಡಿ’ಸಿಲ್ವಾ ಅವರು ಮುಖ್ಯ ಸಲಹೆಗಾರರಾಗಿರುತ್ತಾರೆ.
ಈ ಕಾರ್ಯಕ್ರಮಕ್ಕೆ ಬಾಹ್ಯ ಸಲಹಾ ಸಮಿತಿಯ ಬೆಂಬಲವಿದೆ; ಇದರಲ್ಲಿ ಮಂಗಳೂರಿನ ‘ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ’, ‘ದಿ ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ’, ‘ಕೆನರಾ ಸ್ಮಾಲ್ ಇಂಡಸ್ಟ್ರೀಸ್ ಅಸೋಸಿಯೇಷನ್’, ‘ಕರ್ನಾಟಕ ಸ್ಟೇಟ್ ಪಾಲಿಮರ್ಸ್ ಅಸೋಸಿಯೇಷನ್’ ಮತ್ತು ‘ಕೆನರಾ ಪ್ಲಾಸ್ಟಿಕ್
ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ನ ಪ್ರತಿನಿಧಿಗಳು ಸೇರಿದ್ದಾರೆ. ಜೊತೆಗೆ, ‘ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್’ ಕಾರ್ಯತಂತ್ರದ ಪಾಲುದಾರರಾಗಿದ್ದಾರೆ. ‘ಕರ್ನಾಟಕ ಇನ್ನೋವೇಶನ್ & ಎಂಟರ್ಪ್ರೈಸ್ ಫೌಂಡೇಶನ್ ಹಾಗೂ ‘ಸೆಕ್ಷನ್ ಇನ್ಫಿನ್-8’ ನಂತಹ ಸಂಸ್ಥೆಗಳು ನಾವೀನ್ಯತಾ ಪಾಲುದಾರರಾಗಿ ಸಹಕಾರ
ನೀಡುತ್ತಿವೆ. ಇವರೊಂದಿಗೆ ಉದ್ಯಮ ಮತ್ತು ಸ್ಟಾರ್ಟ್-ಅಪ್ ಕ್ಷೇತ್ರಗಳ ತಜ್ಞರು ಸಹ ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಉದ್ಯಮ ವೃತ್ತಿಪರರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಅಂದರೆ ಎಂ.ಎಸ್.ಎಂ.ಇ ಪ್ರತಿನಿಧಿಗಳು, ಉದ್ಯಮಿಗಳು, ಸ್ಟಾರ್ಟ್-ಅಪ್ ಸಂಸ್ಥಾಪಕರು, ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳನ್ನು ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ನೋಂದಣಿಯು ಅಧಿಕೃತ ಜಾಲತಾಣದಲ್ಲಿ 30 ನವೆಂಬರ್ 2026 ರವರೆಗೆ ಲಭ್ಯವಿರುತ್ತದೆ. ನೋಂದಣಿ ಶುಲ್ಕವು ಈ ಕೆಳಗಿನಂತಿದೆ: ಶಿಕ್ಷಣ ತಜ್ಞರಿಗೆ ರೂ. 350, ವಿದ್ಯಾರ್ಥಿಗಳಿಗೆ ರೂ. 250 ಮತ್ತು ಉದ್ಯಮ ವೃತ್ತಿಪರರಿಗೆ ರೂ. 600. ನೋಂದಾಯಿತ ಎಲ್ಲಾ ಭಾಗವಹಿಸುವವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ವಸ್ತು ಪ್ರದರ್ಶನಕ್ಕಾಗಿ ಸೀಮಿತ ಅವಕಾಶಗಳು
ಮಾತ್ರ ಲಭಿಸುತ್ತವೆ.
ಈ ಕಾರ್ಯಕ್ರಮದ ಮೂಲಕ, ನಮ್ಮ ಸಂಸ್ಥೆಯು ಶೈಕ್ಷಣಿಕ ಶ್ರೇಷ್ಠತೆ, ನಾವೀನ್ಯತೆ ಮತ್ತು ಉದ್ಯಮದೊಂದಿಗಿನ ನಂಟು ಬೆಳೆಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಇದು ಪ್ರಾದೇಶಿಕ ಉದ್ಯಮಗಳು, ಸ್ಟಾರ್ಟ್-ಅಪ್ಗಪಳು ಮತ್ತು ಯುವ ನಾವೀನ್ಯಕಾರರಿಗೆ ಪರಸ್ಪರ ಸಹಕಾರ ಮಾತ್ರವಲ್ಲದೇ ಒಟ್ಟಾಗಿ ಬೆಳೆಯಲು ಅರ್ಥಪೂರ್ಣ ಅವಕಾಶಗಳನ್ನು ಕಲ್ಪಿಸಲಿದೆ.ನೋಂದಣಿಯ ಅಧಿಕೃತ ಜಾಲತಾಣ: www.industryconclavesjec.in
ಹೆಚ್ಚಿನ ವಿವರಗಳು ಮತ್ತು ಸಮನ್ವಯಕ್ಕಾಗಿ, ದಯವಿಟ್ಟು ಸಂಪರ್ಕಿಸಿ:
ಡಾ. ವಿಜಯ್ ವಿ. ಎಸ್., ಸಂಯೋಜಕರು – ಎಸ್.ಜೆ.ಇ.ಸಿ ಎಐಸಿಟಿಇ ಐಡಿಯಾ ಲ್ಯಾಬ್
ಇಮೇಲ್: vijayvs@sjec.ac.in | ದೂರವಾಣಿ: 94802 00266
ನೋಯೆಲ್ ದೀಪಕ್ ಶಿರಿ, ಅಧ್ಯಕ್ಷರು – ಉದ್ಯಮ ಮತ್ತು ನಾವೀನ್ಯತಾ ಗುಂಪು
ಇಮೇಲ್: noels@sjec.ac.in | ದೂರವಾಣಿ: 9740547904
ಯತೀಶ್ ಕುಮಾರ್ ಕೆ., ಇನ್ನೋವೇಶನ್ ಮ್ಯಾನೇಜರ್ (ನಾವೀನ್ಯತಾ ವ್ಯವಸ್ಥಾಪಕರು)
ಇಮೇಲ್: yathishk@sjec.ac.in | ದೂರವಾಣಿ: 96117 81213

