ಆಲೂರು : ಸಾರ್ವಜನಿಕ ದೂರು, ಅಹವಾಲುಗಳ ಸ್ವೀಕಾರ

ಕರ್ನಾಟಕ ಲೋಕಾಯುಕ್ತ ಹಾಸನ ವಿಭಾಗದ ವತಿಯಿಂದ ಆಲೂರು ತಾಲೂಕಿನ ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ದೂರು ಅಹವಾಲುಗಳ ಸ್ವೀಕಾರ ಕಾರ್ಯಕ್ರಮ ನಡೆಯಿತು.

ಲೋಕಾಯುಕ್ತ ಜಿಲ್ಲಾ ವರಿಷ್ಠಾಧಿಕಾರಿ ಮಲ್ಲಿಕ್ ಚಿಕ್ಕಣ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಇಂದು ಎಂಟು ಅರ್ಜಿಗಳನ್ನು ಸ್ವೀಕಾರ ಮಾಡಿದ್ದು, ಬಹುತೇಕ ಅರ್ಜಿಗಳು ಕಂದಾಯ ಇಲಾಖೆಗೆ ಸೇರಿದ್ದು ಒಂದು ಅರ್ಜಿ ಪಟ್ಟಣ ಪಂಚಾಯಿತಿ ನಿವೇಶನಕ್ಕೆ ಸಂಬAಧಿಸಿದೆ. ಎರಡು ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಗಿದ್ದು. ಒಂದು ಅರ್ಜಿ ವಿಚಾರಣೆಗೆ ತೆಗೆದುಕೊಂಡಿದ್ದು. ಇನ್ನುಳಿದಂತಹ ಅರ್ಜಿಗಳನ್ನು ಸಂಬAಧಪಟ್ಟ ಇಲಾಖೆಗಳಿಗೆ ಹಿಂಬರಹ ನೀಡಲು ಶೀಘ್ರವಾಗಿ ತಿಳಿಸಲಾಗಿದೆ. ಪ್ರತಿ ತಿಂಗಳಿಗೊಮ್ಮೆ ಸಾರ್ವಜನಿಕ ದೂರು ಅಹವಾಲು ಸ್ವೀಕಾರ ಕಾರ್ಯಕ್ರಮ ಇರುತ್ತದೆ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಲೋಕಾಯುಕ್ತ ಡಿವೈಎಸ್ಪಿ ರವಿಕುಮಾರ್.ಇನ್ಸ್ ಪೆಕ್ಟರ್‌ಗಳಾದ ಬಾಲು. ಶಿಲ್ಪ. ತಾಲೂಕು ದಂಡಾಧಿಕಾರಿಗಳಾದ ಸೌಮ್ಯ ಸಿ.ಕೆಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.