ಪಡುಬಿದ್ರಿ: ಹದಿನಾರುಪಟ್ನ ಮೊಗವೀರ ಮಹಾಸಭೆಯ 2026–2029ನೇ ಸಾಲಿನ ಅವಧಿಗೆ ನೂತನ ಅಧ್ಯಕ್ಷರಾಗಿ ಪಡುಬಿದ್ರಿಯ ಅಶೋಕ್ ಸಾಲ್ಯಾನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಮಾಜಸೇವೆ, ಸಂಘಟನಾ ಚಟುವಟಿಕೆ ಹಾಗೂ ಜನಪರ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಅಶೋಕ್ ಸಾಲ್ಯಾನ್ ಅವರು ವಿವಿಧ ಸಂಘ-ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸಿ, ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಪ್ರಸ್ತುತ ಅವರು ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾ (ರಿ.)ದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಪಡುಬಿದ್ರಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ, ಕಾಡಿಪಟ್ನ ನಡಿಪಟ್ನ ವಿದ್ಯಾ ಪ್ರಚಾರಕ ಸಂಘ (ರಿ.)ದ ಉಪಾಧ್ಯಕ್ಷರಾಗಿ ಹಾಗೂ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಗ್ರಾಮದ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ನೂತನ ಪದಾಧಿಕಾರಿಗಳ ವಿವರ
ಹದಿನಾರುಪಟ್ನ ಮೊಗವೀರ ಮಹಾಸಭೆಯ 2026–2029ನೇ ಸಾಲಿನ ಅವಧಿಗೆ ಆಯ್ಕೆಯಾದ ಪದಾಧಿಕಾರಿಗಳು:
ಅಧ್ಯಕ್ಷರು: ಅಶೋಕ್ ಸಾಲ್ಯಾನ್, ಪಡುಬಿದ್ರಿ
ಉಪಾಧ್ಯಕ್ಷರು: ಲಕ್ಷ್ಮಣ್ ಸುವರ್ಣ, ಎರ್ಮಾಳ್
ಪ್ರಧಾನ ಕಾರ್ಯದರ್ಶಿ: ಲಾಲಾಜಿ ಪುತ್ರನ್, ಕಾಪು
ಜೊತೆ ಕಾರ್ಯದರ್ಶಿ: ಹಾರ್ಥಿಕ್, ಮೂಳೂರು
ಕೋಶಾಧಿಕಾರಿ: ಲಲಿತ್ ಕುಮಾರ್
ಲೆಕ್ಕಪರಿಶೋಧಕರು: ಸುಧಾಕರ್ ಕರ್ಕೇರ, ಹೆಜಮಾಡಿ
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಶೋಕ್ ಸಾಲ್ಯಾನ್ ಅವರು ತಮ್ಮ ಅನುಭವ ಹಾಗೂ ಸಂಘಟನಾ ಸಾಮರ್ಥ್ಯದ ಮೂಲಕ ಮೊಗವೀರ ಸಮಾಜದ ಏಕತೆ, ಸಂಘಟನೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಮತ್ತಷ್ಟು ಬಲ ತುಂಬುವ ನಿರೀಕ್ಷೆ ವ್ಯಕ್ತವಾಗಿದೆ.
ಅವರ ನೇತೃತ್ವದಲ್ಲಿ ಸಮಾಜದ ಹಿತದೃಷ್ಟಿಯಿಂದ ಜನಪರ ಹಾಗೂ ಸಮಾಜಮುಖಿ ಕಾರ್ಯಗಳು ಮತ್ತಷ್ಟು ವಿಸ್ತಾರಗೊಳ್ಳಲಿ ಎಂದು ಹಿತೈಷಿಗಳು ಆಶಿಸಿದ್ದಾರೆ.
ಹದಿನಾರುಪಟ್ನ ಮೊಗವೀರ ಮಹಾಸಭೆಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅಶೋಕ್ ಸಾಲ್ಯಾನ್ ಅವರಿಗೆ ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾ (ರಿ.)ದ ವತಿಯಿಂದ ಹಾಗೂ ಅಭಿಮಾನಿಗಳು ಮತ್ತು ಹಿತೈಷಿಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹದಿನಾರುಪಟ್ನ ಮೊಗವೀರ ಮಹಾಸಭೆಯ ನೂತನ ಅಧ್ಯಕ್ಷರಾಗಿ ಅಶೋಕ್ ಸಾಲ್ಯಾನ್ ಪಡುಬಿದ್ರಿ ಅವಿರೋಧ ಆಯ್ಕೆ
RELATED ARTICLES

