HomeFresh Newsಏಷ್ಯಾನ್ ಗೇಮ್ಸ್: ಭಾರತಕ್ಕೆ 2ನೇ ಚಿನ್ನ: ಏರ್ ಪಿಸ್ತೂಲ್ ವಿಭಾಗದಲ್ಲಿ ಮಿಂಚಿದ ಕಮಲ್‌ಜೀತ್–ಸುರುಚಿ

ಏಷ್ಯಾನ್ ಗೇಮ್ಸ್: ಭಾರತಕ್ಕೆ 2ನೇ ಚಿನ್ನ: ಏರ್ ಪಿಸ್ತೂಲ್ ವಿಭಾಗದಲ್ಲಿ ಮಿಂಚಿದ ಕಮಲ್‌ಜೀತ್–ಸುರುಚಿ

ವೈಯಕ್ತಿಕ ಸ್ಪರ್ಧೆ ವಿಭಾಗದಲ್ಲಿ ನಿರಾಸೆ ಅನುಭವಿಸಿದ್ದ ಭಾರತದ ಶೂಟರ್‌ಗಳಾದ ಕಮಲ್‌ಜೀತ್ ಮತ್ತು ಸುರುಚಿ ಸಿಂಗ್ ಅವರು ಏಷ್ಯನ್ ಕ್ರೀಡಾಕೂಟದ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಕಮಲ್‌ಜೀತ್ ಹಾಗೂ ಸುರುಚಿ ಜೋಡಿಯು 484.6 ಅಂಕಗಳೊಂದಿಗೆ ಅಗ್ರಸ್ಥಾನ ಪಡೆಯಿತು. ದಕ್ಷಿಣ ಕೊರಿಯಾದ ಸುಹೈಯೋನ್ ಹಾಂಗ್ ಮತ್ತು ಗಯೆನ್ ಚೂ ಜೋಡಿ 478.0 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು. 415.8 ಅಂಕ ಗಳಿಸಿದ ಇರಾನ್ ಜೋಡಿ ಕಂಚಿನ ಪದಕ ತಮ್ಮದಾಗಿಸಿಕೊಂಡಿತು.

ಫೈನಲ್‌ಗೂ ಮುನ್ನ ನಡೆದ ಅರ್ಹತಾ ಸುತ್ತಿನಲ್ಲೂ ಭಾರತೀಯ ಜೋಡಿ ಉತ್ತಮ ಪ್ರದರ್ಶನ ನೀಡಿತ್ತು. ಅಲ್ಲಿ ಮೊದಲ ಸೆಟ್‌ನಲ್ಲಿ 196 ಅಂಕ, ಎರಡನೇ ಸೆಟ್‌ನ ಅಂತ್ಯಕ್ಕೆ 391 ಅಂಕ ಗಳಿಸಿತ್ತು ಮತ್ತು ಅಂತಿಮ ಸೆಟ್‌ನಲ್ಲಿ 196 ಅಂಕ ಗಳಿಸುವ ಮೂಲಕ ಒಟ್ಟು 587 ಅಂಕಗಳೊಂದಿಗೆ ಫೈನಲ್ ಪ್ರವೇಶಿಸಿತು.

2026ನೇ ಸಾಲಿನ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಎರಡನೇ ಚಿನ್ನದ ಪದಕವಾಗಿದೆ. ಇದಕ್ಕೂ ಮೊದಲು ಭಾರತ ಮಹಿಳಾ ಕ್ರಿಕೆಟ್ ತಂಡವು ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಚಿನ್ನದ ಪದಕ ಗೆದ್ದಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments