ಮುಖ್ಯಮಂತ್ರಿಗೆ ಭಿತ್ತಿಪತ್ರ ಪ್ರದರ್ಶಿಸಿ ಘೇರಾವ್‌ಗೆ ಯತ್ನ: ನಂತೂರು ಬಳಿ ಡಿವೈಎಫ್ ಐ ಕಾರ್ಯಕರ್ತರು ಪೊಲೀಸ್ ವಶಕ್ಕೆ
![](https://v4news.com/wp-content/uploads/2025/01/vlcsnap-2025-01-11-16h53m12s696-1140x620.png)
ಮಂಗಳೂರು: ನಗರಕ್ಕೆ ಆಗಮಿಸುವ ಸಿಎಂ ಸಿದ್ದರಾಮಯ್ಯಗೆ ಭಿತ್ತಿಪತ್ರ ಪ್ರದರ್ಶಿಸಿ ಘೆರಾವ್ ಹಾಕಲು ಸಿದ್ಧತೆಯಲ್ಲಿರುವಾಗಲೇ ಡಿವೈಎಫ್‌ಐ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
![](https://v4news.com/wp-content/uploads/2025/01/vlcsnap-2025-01-11-16h53m03s801-1024x576.png)
![](https://v4news.com/wp-content/uploads/2025/01/vlcsnap-2025-01-11-16h53m20s413-1024x576.png)
![](https://v4news.com/wp-content/uploads/2025/01/vlcsnap-2025-01-11-16h53m35s513-1024x576.png)
ನಗರದ ಹೊರವಲಯ ನರಿಂಗಾನದಲ್ಲಿ ಸ್ಪೀಕರ್ ಯು.ಟಿ.ಖಾದರ್ ನೇತೃತ್ವದಲ್ಲಿ ನಡೆಯುವ ಕಂಬಳದಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ಶನಿವಾರ ಸಂಜೆ ಮಂಗಳೂರಿಗೆ ಆಗಮಿಸಲಿದ್ದಾರೆ. ಈ ವೇಳೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ತಕ್ಷಣ ಅಮಾನತಿಗೆ ಒತ್ತಾಯಿಸಿ ಡಿವೈಎಫ್‌ಐ ಮುಖಂಡರು ನಂತೂರು ಪದುವಾ ಬಳಿ ಭಿತ್ತಿಪತ್ರ ಹಿಡಿದು ಘೇರಾವ್ ಕೂಗಲು ಸಿದ್ಧತೆ ನಡೆಸಿದ್ದರು. ಆದರೆ ಪೊಲೀಸರು ಅದಕ್ಕೆ ಅವಕಾಶಕೊಡದೆ ಪ್ರತಿಭಟನೆಗೆ ಮುನ್ನವೇ ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ವೇಳೆ ಪ್ರತಿಭಟನಾಕಾರರು ಮಂಗಳೂರಿಗೆ ಅನುಪಮ್ ಅಗರ್ವಾಲ್ ಪೊಲೀಸ್ ಕಮಿಷನರ್ ಬೇಡವೇ ಬೇಡ. ತಕ್ಷಣ ಅವರನ್ನು ವರ್ಗಾವಣೆ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.