ವಿ.ಹಿ.ಪ ಬಜರಂಗದಳ ಎಡಪದವು : “ಸುವರ್ಣ ಸೇವಾ ಸಂಭ್ರಮ”
ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃ ಶಕ್ತಿ ದುರ್ಗವಾಹಿನಿ ಜೈ ಶ್ರೀ ರಾಮ್ ಶಾಖೆ ಎಡಪದವು ಇದರ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಸಂಸ್ಥೆಯ 50ನೇ ಮಾಸಿಕ ಯೋಜನೆಯ ಅಂಗವಾಗಿ 10 ಅಶಕ್ತ ಕುಟುಂಬಗಳಿಗೆ ಸಹಾಯಹಸ್ತ ನೀಡುವ ವೇದಿಕೆ.“ಸುವರ್ಣ ಸೇವಾ ಸಂಭ್ರಮ” ಡಿಸೆಂಬರ್ 18 ರಂದು ಬೆಳ್ಳಿಗೆ 9:30 ಕ್ಕೆ ಸರಿಯಾಗಿ ಶ್ರೀ ರಾಮ ಮಂದಿರದ ಪಟ್ಟಾಭಿರಾಮ ಸಭಾಭವನ ಎಡಪದವಿನಲ್ಲಿ ಆಯೋಜಿಸಲಾಗಿದೆ. ಸಭಾ ಕಾರ್ಯಕ್ರಮ ಹಾಗೂ ಸೇವಾ ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ ನಡೆಯಲಿರುವುದು.