ಎಲ್ಲ ಕಡೆ ತಾಪಮಾನ ಏರಿಕೆಯಾಗುತ್ತಿದ್ದಂತೆ ಉತ್ತರ ಪ್ರದೇಶದ ಬಾಂದಾ ಉಷ್ಣ ಮಟ್ಟದಲ್ಲಿ ಜಾಗತಿಕ ದಾಖಲೆ ಬರೆದುದಾಗಿ ತಿಳಿದು ಬಂದಿದೆ.

ಒಂದು ಕಡೆ ಭೂಬಿಸಿಯ ಭಯವು ಲೋಕವನ್ನು ಆವರಿಸಿದ್ದರೆ ಇನ್ನೊಂದು ಕಡೆ ಈ ಬಾರಿಯ ಬಿರು ಬೇಸಿಗೆ ಎಲ್ಲ ಕಡೆ ಆತಂಕವನ್ನು ಉಂಟು ಮಾಡಿದೆ. ಈಗ ಜಗತ್ತಿನ ಹತ್ತು ಅತಿ ತಾಪಾಮಾನ ದಾಖಾಲಾದ ಪಟ್ಟಣಗಳಲ್ಲಿ ಏಳು ಭಾರತದಲ್ಲಿ ಇದ್ದರೆ, ಮೂರು ಪಾಕಿಸ್ತಾನದಲ್ಲಿ ಇದೆ.

ನಿನ್ನೆ ಉತ್ತರ ಪ್ರದೇಶದ ಬಾಂದಾದಲ್ಲಿ 47.6 ಡಿಗ್ರಿ ಸೆಲ್ಸಿಯಸ್ ಬಿಸಿಮಟ್ಟ ದಾಖಲಾಗಿದೆ. ಇದು ವಿಶ್ವ ದಾಖಲೆಯಾಗಿದೆ.

ಭಾರತವು 1951 ರಿಂದ ತಾಪಮಾನ ದಾಖಲೆ ಇಡಲಾರಂಭಿಸಿದಾಗಿನ ಲೆಕ್ಕದಲ್ಲೂ ಇಲ್ಲಿನದು ಗರಿಷ್ಟ ಉಷ್ಣ ಮಟ್ಟ್ರವೆನಿಸಿದೆ. ಆದರೆ ಬಾಂದಾ 2019ರಲ್ಲೇ ದಾಖಲೆ ಬರೆದಿತ್ತು.

ಆಗ ಜೂನ್ 10ರಂದು 49.2 ಡಿಗ್ರಿ ಸೆಲ್ಸಿಯಸ್ ಇದ್ದ ಉಷ್ಣತೆಯು ಇಂದಿಗೂ ಅಳಿಸಲಾಗಿಲ್ಲ. ನಿನ್ನೆಯದು ಜಗತ್ತಿನಲ್ಲಿ ದಾಖಲಾದ ಈ ಬಾರಿಯ ಅತಿ ಬಿಸಿಯಾಗಿದೆ.

ಪಾಕಿಸ್ತಾನದ ನವಾಬ್ ಶಾ 47.5 ಡಿಗ್ರಿ, ಜಾಕೋಬಾಬಾದ್ 47 ಡಿಗ್ರಿ, ಭಾರತದ ಅಮರಾವತಿ 46.6 ಡಿಗ್ರಿ, ವಾದ್ರಾ 46.5 ಡಿಗ್ರಿ, ಜೈಸಲ್ಮೇರ್ ಹಾಗೂ ಬಾರ್ಮೇರ್ 46.4 ಡಿಗ್ರಿ, ಅಕೋಲ 46.3 ಡಿಗ್ರಿ, ಖಜರಾಹೋ ಹಾಗೂ ಪಾಕಿಸ್ತಾನದ ಪಾದಿದಾನ್‌ಗಳಲ್ಲಿ 46 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ.

