ಬನ್ನೂರು : ಧರೆ ಕುಸಿತ ಮನೆಗೆ ಹಾನಿ
ಪುತ್ತೂರಿನ ಬನ್ನೂರು ಜೈನರ ಗುರಿಯಲ್ಲಿ ಭಾರೀ ಮಳೆಗೆ ಧರೆ ಕುಸಿತಗೊಂಡು ಮನೆ ಹಾನಿಗೊಳಗಾಗಿದ್ದು ,ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಕುರಿತು ಶಾಸಕರು ಮನೆಯ ಮಾಲಿಕ ಮಜೀದ್ ರವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಶಾಸಕರು ಬೆಂಗಳೂರಿನಲ್ಲಿದ್ದು ಘಟನಾ ಸ್ಥಳಕೆ ಶಾಸಕರ ಕಚೇರಿ ಸಿಬಂದಿಗಳು ಭೇಟಿ ನೀಡಿದ್ದು ಕುಟುಂಬಕ್ಕೆ ಕರೆಮಾಡಿದ ಶಾಸಕರು ಸಾಂತ್ವನ ಹೇಳಿದ್ದು ಸರಕಾರದಿಂದ ತಕ್ಷಣ ಪರಿಹಾರದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.