ಬಿಜೆಪಿ ಯುವಮೋರ್ಚಾ ದಕ್ಷಿಣ ಮಂಡಲದ ಪದಾಧಿಕಾರಿಗಳ ಸಭೆ

ಬಿಜೆಪಿ ಯುವಮೋರ್ಚಾ ದಕ್ಷಿಣ ಮಂಡಲದ ಪದಾಧಿಕಾರಿಗಳ ಸಭೆಯು ಬಿಜೆಪಿ ಯುವಮೋರ್ಚಾ ದಕ್ಷಿಣ ಮಂಡಲದ ಅಧ್ಯಕ್ಷರಾದ ಸಚಿನ್ ರಾಜ್ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಬಿಜೆಪಿ ಯುವಮೋರ್ಚಾ ದಕ್ಷಿಣ ಮಂಡಲದ ಹೊಸ ಸದಸ್ಯರಾಗಿ ಕಾರ್ತಿಕ್, ಆಶೀಶ್, ಆಕಾಶ್, ಅಕ್ಷಯ್ ಇವರನ್ನು ಮಂಡಲದ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿಯವರು ಪಕ್ಷದ ಶಾಲು ಹೊದಿಸಿ ಸ್ವಾಗತಿಸಿದರು. ನಂತರ ಮಾತಾನಾಡಿದ ಅವರು ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಯುವಮೋರ್ಚಾದ ವತಿಯಿಂದ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

bjp

ಈ ಸಭೆಯ ಬಳಿಕ ಹೊಸ ಸದಸ್ಯರನ್ನ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಧರ್ಶನ್ ಮೂಡಬಿದ್ರಿರವರು ಅಭಿನಂದಿಸಿದರು. ಪದಾಧಿಕಾರಿಗಳ ಸಭೆಯಲ್ಲಿ ಮಂಡಲದ ವಿಸ್ತಾರಕ್ ರಾದ ವಿನಯ್, ಯುವಮೋರ್ಚಾ ಮಂಡಲದ ಪ್ರಭಾರಿಗಳಾದ ವಿನ್ಯಾಸ್ ಶೆಟ್ಟಿ, ಯುವ ಮೋರ್ಚಾ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುಶಾಂತ್, ಜಿತೇಶ್, ಉಪಾಧ್ಯಕ್ಷರಾದ ಜಯರಾಜ್, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿಗಳಾದ ವರುಣ್ ಅಂಬಟ್, ಗೌತಮ್, ಸದಸ್ಯರಾದ ಅವೀಕ್ಷಿತ್ ರೈ, ಯುವ ಮೋರ್ಚಾ ಮಂಡಲ ಕಾರ್ಯದರ್ಶಿಗಳಾದ ದೀಕ್ಷಿತ್, ಪ್ರಥಮ್, ಖಜಾಂಚಿ ಸಚಿನ್, ಯುವಮೋರ್ಚಾ ದಕ್ಷಿಣ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಅಂಚನ್ ಹಾಗೂ ಯುವಮೋರ್ಚಾದ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.