ಕರಾವಳಿಯ ಭಾಗದ ಮೀನುಗಾರರು ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು

ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕರಾವಳಿಯ ಭಾಗದ ಮೀನುಗಾರರು ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕೆಂದು ರಾಜ್ಯ ಬಿ.ಜೆ.ಪಿ ವಿಷೇಶ ಕಾರ್ಯಕಾರಿಣ ಸದಸ್ಯರಾದ
ರಾಮಚಂದರ್‌ ಬೈಕಂಪಾಡಿ ಮನವಿ ಮಾಡಿದ್ದಾರೆ. ಈ ಕುರಿತು ಮಂಗಳೂರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,

ಕರ್ನಾಟಕ ಕರಾವಳಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಮೀನುಗಾರಿಕಾ ಅಭಿವೃದ್ಧಿ ಕ್ಷೇತ್ರದಲ್ಲಿ ಬಿ. ಎಸ್. ಯೇಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಮಾಡಿದ ಅಭೂತ ಪೂರ್ವ ಮೀನುಗಾರಿಕಾ ಅಭಿವೃದ್ಧಿಗೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಕುಳಾಯಿಯಲ್ಲಿ ಬಂದರು ನಿರ್ಮಾಣ ಕಾರ್ಯ ಪ್ರಾರಂಭಿಸಿದೆ. ಕಳೆದ 10 ವರ್ಷದ ನಿರ್ವಾಸಿತರ ದೀರ್ಘ ಕಾಲದ ಕನಸು ನನಸಾಗಿದೆ. ಈ ಬಂದರು ವರ್ಷದ 12 ತಿಂಗಳು, ನಿತ್ಯ 12 ಗಂಟೆ ಮೀನುಗಾರಿಕೆ ಮಾಡಲು ಆಧುನಿಕ ತಂತ್ರಜ್ಞಾನ ಅಳವಡಿಸಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ಕ್ರಾಂತಿಗೆ ಬಹುದೊಡ್ಡ ಕೊಡುಗೆಯಾಗಲಿದೆ. ಲೋಕಸಭಾ ಸದಸ್ಯ ನಳೀನ್ ಕುಮಾರ್ ಕಟೀಲ್ ಮತ್ತು ವಿಧಾನ ಸಭಾ ಸದಸ್ಯ ಡಾ. ಭರತ್‌ ಶೆಟ್ಟಿಯವರ ಶ್ರಮಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ರು.

ಪ್ರಧಾನಿ ನರೇಂದ್ರ ಮೋದಿಯವರ ಮತ್ಸ್ವ ಸಂಪದ ಯೋಜನೆ ದೇಶಾದ್ಯಂತ ಕಳೆದ 2 ವರ್ಷದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಆಳ ಸಮುದ್ರ ಮೀನುಗಾರಿಕೆ ಮಾಡಲು ಓರ್ವ ಸಾಂಪ್ರದಾಯಿಕ ಮೀನುಗಾರಿಕ ಮಹಿಳೆಗೆ 60ಶೇ. ಅನುದಾನ ನೀಡುವ ಮೂಲಕ ಕಾಂತಿಕಾರಿ ಹೆಜ್ಜೆ ನೀಡಿದ, ಈ ಬಾರಿ ಫೆಬ್ರವರಿ ತಿಂಗಳಲ್ಲಿ 60 ಆಳ ಸಮುದ್ರ ಮೀನುಗಾರಿಕೆಗೆ ಕರ್ನಾಟಕ ಸರಕಾರ ಜಾರಿಗೊಳಿಸಿದೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ಮುಲ್ಕಿ ಸಮಾವೇಶದಲ್ಲಿ ಹೆಚ್ಚಿನ ಸಮಯ ಕರ್ನಾಟಕ ರಾಜ್ಯದಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಕರ್ನಾಟಕ ಕರಾವಳಿಯ ಮೀನುಗಾರರು ಈ ಬಾರಿ ಬಿ.ಜೆ.ಪಿ ಸರಕಾರವನ್ನು ಬೆಂಬಲಿಸಬೇಕಾಗಿ ವಿನಂತಿಸಿದ್ರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನವೀನ್ ಸುವರ್ಣ ತಣ್ಣೀರುಬಾವಿ, ಪ್ರೇಮನಾಥ ಪುತ್ರನ್ ಉಳ್ಳಾಲ, ಬಾಬು ಬಂಗೇರ, ಉಳ್ಳಾಲ, ಸುಕೇಶ್‌ ಕುಮಾರ್ ಸೋಮೆಶ್ವರ ಉಪಸ್ಥಿತರಿದ್ದರು.

Related Posts

Leave a Reply

Your email address will not be published.