ವೇದವ್ಯಾಸ ಕಾಮತ್ : ಕೊಡಿಯಾಲ್ ಬೈಲ್, ಅಳಪೆ ದಕ್ಷಿಣ, ಪದವು ಸೆಂಟ್ರಲ್‍ನಲ್ಲಿ ಮತಪ್ರಚಾರ vedavyas kamath

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಡಿ.ವೇದವ್ಯಾಸ್ ಕಾಮತ್ ಅವರು ಕೊಡಿಯಾಲ್ ಬೈಲ್, ಪೆÇೀರ್ಟ್ ವಾರ್ಡ್, ಅಳಪೆ ದಕ್ಷಿಣ, ಕಂಕನಾಡಿ, ಪದವು ಸೆಂಟ್ರಲ್ ವಾರ್ಡ್ ಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಇದೇ ಮಾತನಾಡಿದ ವೇದವ್ಯಾಸ ಕಾಮತ್ ಅವರು, ಇದೇ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಜನಾಂಗಕ್ಕೆ ದೇಶ ಸಾಗುತ್ತಿರುವ ಹಾದಿಯ ಬಗ್ಗೆ ಹೆಮ್ಮೆ ಇದೆ. ಅವರ ಉನ್ನತ ಕಲ್ಪನೆಯ ದಿಕ್ಕಿನೆಡೆಗೆ ರಾಜ್ಯವನ್ನು ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿ. ಇವೆಲ್ಲದರ ಜೊತೆಗೆ ನಾಡಿನ ಸಮೃದ್ಧಿಗಾಗಿ, ಜನರ ನೆಮ್ಮದಿಗಾಗಿ, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಅತ್ಯಗತ್ಯ. ದಯವಿಟ್ಟು ಬಿಜೆಪಿಗೆ ಮತ ಚಲಾಯಿಸುವ ಮೂಲಕ ಅಭಿವೃದ್ಧಿಗೆ ನಮ್ಮೊಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ನಾಯಕರು, ಯುವ ಕಾರ್ಯಕರ್ತರು, ಬಿಜೆಪಿ ಹಿತೈಷಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.