ಬ್ರಹ್ಮಾವರದಲ್ಲಿ ನಿರ್ಮಾಣಗೊಂಡ ನೂತನ ಮಿನಿ ವಿಧಾನಸೌಧ

ಬ್ರಹ್ಮಾವರ ಹಳೆ ಪೊಲೀಸ್ ಠಾಣೆ ಬಳಿ ಕಾರ್ಯನಿರ್ವಯಿಸುತ್ತಿದ್ದ ಬ್ರಹ್ಮಾವರ ತಾಲೂಕು ಕಛೇರಿ ಒಂದು ವಾರದಲ್ಲಿ ನೂತನವಾಗಿ ರಾಷ್ಟ್ರೀಯ ಹೆದ್ದಾರಿ 66 ಬಳಿ ನಿರ್ಮಾಣಗೊಂಡ ಮಿನಿ ವಿಧಾನ ಸೌಧಕ್ಕೆ ವರ್ಗಾವಣೆಯಾಗಲಿದೆ. ಚುನಾವಣಾ ಪೂರ್ವದಲ್ಲಿ ವಿವಿಧ ಅಧಿಕಾರಿಗಳು ಜನಪ್ರತಿನಿಧಿಗಳಿಂದ ಮಿನಿವಿಧಾನ ಸೌಧ ಉದ್ಘಾಟನೆಗೊಂಡರೂ ಬಳಿಕ ನೀತಿ ಸಂಹಿತೆ ಜಾರಿಯಾದ ಬಳಿಕ ಕಂದಾಯ ಇಲಾಖೆಯ ಸಿಬ್ಬಂದಿಗಳು ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಕಳೆದ ಕೆಲವು ದಿನದಿಂದ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಳೆ ಕಟ್ಟಡದಲ್ಲಿರುವ ಅನೇಕ ಕಡತಗಳನ್ನು ನೂತನ ಕಟ್ಟಡಕ್ಕೆ ಸಾಗಾಟ ಮಾಡುತ್ತಿದ್ದು ಇನ್ನೊಂದೆಡೆಯಲ್ಲಿ ಹೊಸ ಸೌಧದಲ್ಲಿ ಜೊಡಣೆ ಕಾರ್ಯ ನಡೆಯಲಿದೆ. ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ, ಉಪ ತಹಶೀಲ್ದಾರ್ ರಾಘವೇಂದ್ರ , ಕಂದಾಯ ನೀರಿಕ್ಷಕ ಲಕ್ಷ್ಮೀನಾರಾಯಣ ಭಟ್ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
