‘ಪಠ್ಯಪುಸ್ತಕದ ವಿಚಾರದಲ್ಲಿ ರಾಜಕಾರಣ ಮಾಡುತ್ತಿವೆ’ : ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ : ರಾಜ್ಯ ಸರ್ಕಾರದಿಂದ ಪಠ್ಯ ಬದಲಾವಣೆ ವಿಚಾರವಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರ ಯಾವಾಗಲೂ ವ್ಯಕ್ತಿಗಳ ಆಧಾರದಲ್ಲಿ ನಡೆಯುವುದಿಲ್ಲ. ಬದಲಾಗಿ ಸರ್ಕಾರ ನಡೆಯುವುದು ಶಾಸನದ ಆಧಾರದಲ್ಲಿ. ಒಂದು ಸರ್ಕಾರ ಮಾಡಿದ ನಿರ್ಧಾರವನ್ನು ಮತ್ತೊಂದು ಸರಕಾರ ಪರಿಶೀಲನೆ ಮಾಡದೆ ಬದಲು ಮಾಡುವುದು ಸರಿಯಲ್ಲ. ಸಾರ್ವಜನಿಕವಾಗಿ ಇಂತಹ ಬೆಳವಣಿಗೆಗಳು ಗೌರವ ತರುವುದಿಲ್ಲ. ಬನ್ನಂಜೆ ಗೋವಿಂದಾಚಾರ್ಯರ ಪಾಠವನ್ನು ವಾಪಸ್ಸು ಪಡೆಯುತ್ತೇವೆ ಎನ್ನುವುದು ಖಂಡನಾರ್ಹ. 2009ರಲ್ಲಿ ಯುಪಿಎ ಸರ್ಕಾರ ಇದೇ ಬನ್ನಂಜೆ ಅವರಿಗೆ ಪದ್ಮಶ್ರೀ ನೀಡಿತ್ತು. ರಾಷ್ಟ್ರೀಯತೆ ವಿಚಾರಕ್ಕೆ ಸಂಬಂಧಪಟ್ಟಂತೆ ನೆಹರು ಅವರಿಂದಲೂ ಸ್ಪಂದನೆಯಿತ್ತು. ಆರ್ ಎಸ್ ಎಸ್ ಗೆ ಪಥಸಂಚಲನದಲ್ಲಿ ಅವಕಾಶ ಕೊಟ್ಟಿದ್ದರು. ಇವುಗಳನ್ನು ಪರಿಗಣಿಸಿದರೆ ಹೆಡ್ಗೇವಾರ್ ಪಾಠವನ್ನು, ಆರ್ ಎಸ್ ಎಸ್ ಸರಸಂಘ ಚಾಲಕರ ರಾಷ್ಟ್ರಭಕ್ತಿ ವಿಚಾರದ ಭಾಷಣವನ್ನು, ಭಾರತದ ರಾಷ್ಟ್ರ ಪುತ್ರರು ಎಂಬ ಸೂಲಿಬೆಲೆ ಅವರ ಪಾಠವನ್ನು ಕಾಗ್ರೆಸ್ ಸರಕಾರ ವಾಪಾಸ್ ಪಡೆಯುವುದು ಖಂಡನೀಯ. ಎಲ್ಲವನ್ನು ಅರ್ಥ ಮಾಡಿಕೊಳ್ಳಬೇಕಾದ ಸರ್ಕಾರ ದ್ವೇಷ ಸಾಧನೆಗೆ ಮುಂದಾಗಿದೆ. ಪಠ್ಯಪುಸ್ತಕದ ವಿಚಾರದಲ್ಲಿ ರಾಜಕಾರಣ ಮಾಡುತ್ತಿವೆ. ಸರಕಾರ ಜನಾಭಿಪ್ರಾಯವನ್ನು ಗೌರವಿಸಬೇಕು. ಎಲ್ಲ ಬೆಳವಣಿಗೆಗಳನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದನದ ಒಳಗೆ ಮತ್ತು ಹೊರಗೆ ಮನವರಿಕೆಗೆ ಪ್ರಯತ್ನಿಸುತ್ತೇವೆ. ಸರಕಾರ ಸ್ಪಂದಿಸದಿದ್ದರೆ ಸಿದ್ದರಾಮಯ್ಯ ವಿರುದ್ಧ ತೀವ್ರ ಹೋರಾಟ ಮಾವುವುದಾಗಿ ಆಗ್ರಹಿಸಿದರು.

Related Posts

Leave a Reply

Your email address will not be published.