ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಲ್ಲೋಣಿಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಯ ಹಿಂಭಾಗದ ಮಾಡಿನ ಶೀಟ್ ಮೇಲೆ ಬಿದ್ದ ಘಟನೆ ಸಂಭವಿಸಿದೆ.
ಬೆಳ್ಳಾರೆ ಕಡೆಗೆ ಸಾಗುತ್ತಿದ್ದ ಕಾರು ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾದ ಬಳಿಕ ರಸ್ತೆ ಬದಿಯ ಕೆಳಭಾಗದಲ್ಲಿದ್ದ ಮನೆಯ ಹಿಂಭಾಗದ ಶೀಟ್ ಮೇಲೆ ಬಿದ್ದಿದೆ. ಕಾರು ಬಿದ್ದ ಪರಿಣಾಮ ಶೀಟ್ಗೆ ಹಾನಿಯಾಗಿದೆ. ಕಾರು ಕೆಳಕ್ಕೆ ಬಿದ್ದಿದೆ. ಘಟನೆಯಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ.
