Homebenagaluruತಾಯಿ ಜೊತೆ ಹರಟೆ ವೇಳೆ ಮಗಳಿಗೆ ಸಡನ್ ಬ್ರೈನ್ ಸ್ಟ್ರೋಕ್..! 25 ವರ್ಷದ ಯುವತಿ ಸಾವು..!

ತಾಯಿ ಜೊತೆ ಹರಟೆ ವೇಳೆ ಮಗಳಿಗೆ ಸಡನ್ ಬ್ರೈನ್ ಸ್ಟ್ರೋಕ್..! 25 ವರ್ಷದ ಯುವತಿ ಸಾವು..!

ಕೆಲಸ ಮುಗಿಸಿ ಮನೆಯಲ್ಲಿ ತಾಯಿಯ ಜೊತೆ ಹರಟೆ ಹೊಡೆಯುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಬ್ರೈನ್ ಸ್ಟ್ರೋಕ್ ಆಗಿ ೨೫ ವರ್ಷದ ಯುವತಿಯೋರ್ವಳು ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಮೃತ ಯುವತಿ ಶ್ವೇತಾ (25). ಈಕೆ ಹಾಸನ ಜಿಲ್ಲೆಯ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ (ಟೆಕ್ಕಿ) ಆಗಿ ಕೆಲಸ ಮಾಡುತ್ತಿದ್ದರು.
ಕಳೆದ ಶನಿವಾರ ಕೆಲಸ ಮುಗಿಸಿ ಮನೆಗೆ ಬಂದಿದ್ದ ಶ್ವೇತಾ, ಮನೆಯಲ್ಲಿ ತಾಯಿಯ ಜೊತೆ ನಗುನಗುತ್ತಾ ಹರಟೆ ಹೊಡೆಯುತ್ತಿದ್ದರು. ಈ ಸಮಯದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರು ಮಾತನಾಡಲಾರದ ಸ್ಥಿತಿಗೆ ತಲುಪಿದ್ದರು. ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ತರುವ?ರಲ್ಲೇ ಶ್ವೇತಾ ಕೋಮಾಗೆ ಜಾರಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಶ್ವೇತಾ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಮಗಳ ಬ್ರೈನ್ ಡೆಡ್ (ಮೆದುಳು ನಿಷ್ಕ್ರಿಯ) ಆದ ಸುದ್ದಿ ತಿಳಿದಾಗ, ಪೋ?ಕರು ನೋವಿನ ನಡುವೆಯೂ ಆಕೆಯ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶ್ವೇತಾ ಸಾವನ್ನಪ್ಪಿದ್ದರಿಂದ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಅಂಗಾಂಗ ದಾನ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಯಾವುದೇ ಪೂರ್ವ ಅನಾರೋಗ್ಯ ಸಮಸ್ಯೆಗಳಿಲ್ಲದೆ, ಅತ್ಯಂತ ಆರೋಗ್ಯವಾಗಿದ್ದ ೨೫ ವ?ದ ಯುವತಿ ಹೀಗೆ ಹಠಾತ್ತನೆ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿರುವುದು ಯುವಜನತೆಯಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ಸರಣಿ ಹೃದಯಾಘಾತದ ಪ್ರಕರಣಗಳು ವರದಿಯಾಗುತ್ತಿದ್ದು, ಈ ಘಟನೆಯು ಆ ಆತಂಕವನ್ನು ಮತ್ತ? ಹೆಚ್ಚಿಸಿದೆ. ಒಬ್ಬಳೇ ಮಗಳನ್ನು ಕಳೆದುಕೊಂಡ ಪೋ?ಕರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಶ್ವೇತಾ ಅವರ ಮೃತದೇಹವನ್ನು ಅವರ ಹುಟ್ಟೂರಾದ ಹಾಸನಕ್ಕೆ ಕೊಂಡೊಯ್ಯಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments