HomeFresh Newsಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ : ಜಾಮೀನು ರಹಿತ ಕ್ರಮ ಜರುಗಿಸಲು ಕನಾ೯ಟಕ ದಲಿತ ಸಂಘಷ೯...

ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ : ಜಾಮೀನು ರಹಿತ ಕ್ರಮ ಜರುಗಿಸಲು ಕನಾ೯ಟಕ ದಲಿತ ಸಂಘಷ೯ ಸಮಿತಿ, ಭೀಮ ಘಜ೯ನೆ ಪೊಲೀಸರಿಗೆ ಮನವಿ

ಮೂಡುಬಿದಿರೆ : ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣ ಅವರುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ವಿಡಿಯೋ ಹೇಳಿಕೆಯನ್ನು ನೀಡಿ ಹಾಗೂ ಪರಿಶಿಷ್ಟ ಜಾತಿ/ಪಂಗಡ ಸಮುದಾಯಗಳನ್ನು ‘ಕತ್ತೆಗಳು’ ಎಂದು ವ್ಯಂಗ್ಯವಾಗಿ ಅಪಹಾಸ್ಯ, ಜಾತಿ ನಿಂಧನೆ ಮಾಡಿ ದಲಿತ ಸಮುದಾಯಗಳ ಗೌರವಕ್ಕೆ ಧಕ್ಕೆ ತಂದಿರುವ ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ದೊಡ್ಡಯ್ಯ ಚೇನಹಳ್ಳ ಗ್ರಾಮದ ವೇದಮೂತಿ೯ ವಿರುದ್ಧ ಜಾಮೀನು ರಹಿತ ಸೂಕ್ತ ಕ್ರಮ ಜರಗಿಸುವಂತೆ ಆಗ್ರಹಿಸಿ ಕನಾ೯ಟಕ ದಲಿತ ಸಂಘಷ೯ ಸಮಿತಿ, ಭೀಮ ಘಜ೯ನೆ ಮಂಗಳೂರು ಜಿಲ್ಲಾ ಸಮಿತಿಯು ಮೂಡುಬಿದಿರೆ ಪೊಲೀಸ್ ಠಾಣೆಗೆ ಮಂಗಳವಾರ ಮನವಿ ನೀಡಿದೆ.

ಈ ಸಂದಭ೯ದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಸತೀಶ್, ತಾಲೂಕು ಸಂಚಾಲಕರಾದ ಉದಯ್ ಮಾನಾ೯ಡ್ ಮತ್ತು ಜಯ ಕಾಟಿಪಳ್ಳ, ಸಂಘಟನಾ ಸಂಚಾಲಕರಾದ ಪ್ರವೀಣ್ ಮುರಗೋಳಿ, ಅನಿಲ್ ಕುಮಾರ್, ಸುರೇಶ್ ಮೂಡುಬಿದಿರೆ, ಜಿಲ್ಲಾ ಕೊರಗರ ಸಂಘದ ಮೂಡುಬಿದಿರೆ ತಾಲೂಕು ಸಂಚಾಲಕ ನಾರಾಯಣ, ಸದಾನಂದ ಮುಲ್ಕಿ ಈ ಸಂದಭ೯ದಲ್ಲಿದ್ದರು.

swarna sep
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments