ಪುತ್ತೂರು ನಗರಸಭಾಧ್ಯಕ್ಷೆ ವಿರುದ್ಧ ಅವಾಚ್ಯ ಪದ ಬಳಕೆ : ಆಕ್ರೋಶ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್
ಪುತ್ತೂರು: ಪುತ್ತೂರು ನಗರಸಭಾಧ್ಯಕ್ಷೆ ವಿರುದ್ಧ ಅವಾಚ್ಯ ಪದ ಬಳಸಿದ್ದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸ್ಥಳೀಯ ಶಾಸಕ ಅಶೋಕ್ ಕುಮಾರ್ ರೈ ಅವರ ಆಪ್ತನೆಂಬಂತೆ ಅದ್ದು ಪಡೀಲ್ ಗುರುತಿಸಿಕೊಂಡಿದ್ದು, ಶಾಸಕರು ಇಂತಹವರಿಂದ ದೂರ ಇರುವುದು ಉತ್ತಮ.