HomeFresh Newsಕೋವಿ ಪರವಾನಗಿ ವಿಳಂಬ–ನಿರಾಕರಣೆ ವಿರುದ್ಧ ರೈತರ ಆಕ್ರೋಶ ಮಂಗಳೂರು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಭೇಟಿ ಮಾಡಿದ...

ಕೋವಿ ಪರವಾನಗಿ ವಿಳಂಬ–ನಿರಾಕರಣೆ ವಿರುದ್ಧ ರೈತರ ಆಕ್ರೋಶ ಮಂಗಳೂರು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಭೇಟಿ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ ಶಾಸಕಿಯರಾದ ಭಾಗೀರಥಿ ಮುರುಳ್ಯ ಅವರು ಬಂದೂಕು ಪರವಾನಗಿದಾರರೊಂದಿಗೆ ಸೋಮವಾರ ಮಂಗಳೂರು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರನ್ನು ಭೇಟಿ ಮಾಡಿ, ಕೃಷಿಕರಿಗೆ ನೀಡುವ ಕೋವಿ ಪರವಾನಗಿ ನವೀಕರಣದಲ್ಲಿ ನಡೆಯುತ್ತಿರುವ ವಿಳಂಬ ಹಾಗೂ ನಿರಾಕರಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾಡಂಚಿನ ಗ್ರಾಮಗಳಲ್ಲಿ ಆನೆ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಬೆಳೆ ರಕ್ಷಣೆಗೆ ರೈತರಿಗೆ ಆಯುಧಗಳು ಅಗತ್ಯವಿವೆ. ಆದರೆ ಅರ್ಹ ಕೃಷಿಕರಿಗೂ ಪರವಾನಗಿ ನಿರಾಕರಿಸಲಾಗುತ್ತಿದ್ದು, ತಂದೆಯಿಂದ ಮಗನಿಗೆ ಪರವಾನಗಿ ವರ್ಗಾವಣೆಗೂ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಅಡೆತಡೆ ಸೃಷ್ಟಿಸಲಾಗುತ್ತಿದೆ ಎಂದು ಶಾಸಕರು ಆರೋಪಿಸಿದರು.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಪರವಾನಗಿ ನೀಡುವಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಹೇರಲಾಗುತ್ತಿದೆ ಎಂದು ಪರವಾನಗಿದಾರರ ಒಕ್ಕೂಟದ ಸಂಚಾಲಕ ಜಯಪ್ರಸಾದ್ ಜೋಶಿ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ಯಾವುದೇ ಅರ್ಜಿಯನ್ನು ಕಾರಣವಿಲ್ಲದೆ ತಿರಸ್ಕರಿಸಲಾಗಿಲ್ಲ, ಪೊಲೀಸ್ ವರದಿಯ ಆಧಾರದ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗಿದೆ ಎಂದರು. ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ, ಒಂದು ತಿಂಗಳೊಳಗೆ ಕಂದಾಯ, ಪೊಲೀಸ್ ಹಾಗೂ ಅರಣ್ಯ ಇಲಾಖೆಗಳ ವರದಿ ಪಡೆದು ವಿಲೇವಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments