Home ಕರಾವಳಿ Archive by category ಮಂಗಳೂರು (Page 81)

ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಮಹೋತ್ಸವ

ಮಂಜೇಶ್ವರ : ಕಳೆದ ಸುಮಾರು 800 ವರ್ಷಗಳಿಂದ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿ ನಿಂತಿರುವ ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಮಹೋತ್ಸವದ ದಿನಾಂಕ ನಿಗದಿ ಸಮಾರಂಭವು ನಡೆಯಿತು. “ಕುದಿಕಳ” ಎಂಬ ಹೆಸರಿನಲ್ಲಿ ಸಂಪ್ರದಾಯ ಪ್ರಕಾರ ನಡೆಯುವ ಸಮಾರಂಭದಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಿಯೊಬ್ಬನಿಂದ ದೈವಪಾತ್ರಿಗಳೇ ವೀಳ್ಯದೆಲೆ

ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಶಾಂತಿ ಸ್ಥಾಪನೆಯಾಗಿದೆ

ನಂದಿನಿಯನ್ನು ಅಮುಲ್ ಜೊತೆ ವಿಲೀನ ಮಾಡಲುವು ಬಿಡುವುದಿಲ್ಲ. ನಂದಿನಿ ನಮ್ಮ ಸ್ವಾಭಿಮಾನ ಮತ್ತು ಕರ್ನಾಟಕದ ಹೆಮ್ಮೆ. ಕರ್ನಾಟಕದ ನಂದಿನಿ ಹಿತ ಕಾಯಲಯ ಬಿಜೆಪಿ ಬದ್ಧವಿದೆ. ಕಾಂಗ್ರೆಸ್ ಸುಳ್ಳುಗಳಿಂದಲೇ ಜನರನ್ನು ತಪ್ಪು ದಾರಿಗೆಳೆಯುತ್ತಿದೆ. ನಂದಿನಿಗೆ ಧಕ್ಕೆಯಾಗಲು ಬಿಜೆಪಿ ಸರ್ಕಾರ ಬಿಡಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದರು. ಅವರು ಮಂಗಳೂರಿನ ಲಾಲ್ ಭಾಗ್‍ನಲ್ಲಿರುವ ರೋಹನ್ ಸಿಟಿ ಸ್ಕ್ವೇರ್‍ನಲ್ಲಿ ಮೂರು ಜಿಲ್ಲೆಗಳ

ಬದಿಯಡ್ಕ ಸಂಸ್ಕೃತಿ ಭವನದಲ್ಲಿ “ನುಡಿ ಪುರ್ಪ ” ಸಂಸ್ಮರಣಾ ಕಾರ್ಯಕ್ರಮ

ಇತ್ತೀಚೆಗೆ ನಿಧನರಾದ ತುಳು ಕನ್ನಡ ಮಲೆಯಾಳ ಭಾಷೆಯ ಉದಯೋನ್ಮುಖ ಲೇಖಕಿ ಶ್ವೇತ ಕಜೆ ಇವರಿಗೆ ಜೈ ತುಳುನಾಡು (ರಿ) ಸಂಘಟನೆ ಹಾಗೂ ತುಳುವೆರ ಆಯನ ಕೂಟದ ವತಿಯಿಂದ ಬದಿಯಡ್ಕ ಸಂಸ್ಕೃತಿ ಭವನದಲ್ಲಿ “ನುಡಿ ಪುರ್ಪ ” ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಇತ್ತೀಚೆಗೆ ನಿಧನರಾದ ಕುಂಬಳೆ ಬದಿಯಡ್ಕ ಬೇಳಿಂಜೆ ಗ್ರಾಮ ಕಜೆ ನಿವಾಸಿ, ಖ್ಯಾತ ತುಳು ,ಕನ್ನಡ, ಮಲೆಯಾಳಂ ಲೇಖಕಿ, ಜೈ ತುಳುನಾಡ್(ರಿ) ನ ಸದಸ್ಯೆ ಕು| ಶ್ವೇತಾ ಕಜೆ ಇವರಿಗೆ, ಜೈ ತುಳುನಾಡ್(ರಿ) ಸಂಘಟನೆ

ಕಿನ್ನಿಗೋಳಿಯಲ್ಲಿ ಯುವ ಸಂಕಲ್ಪ ಕಾರ್ಯಕ್ರಮ

ಕಿನ್ನಿಗೋಳಿ: ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯುವ ನಾಯಕ ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ನೇತ್ರತ್ವದಲ್ಲಿ ಯುವ ಸಂಕಲ್ಪ ಕಾರ್ಯಕ್ರಮ ಕಿನ್ನಿಗೋಳಿ ಸಮೀಪದ ಎಸ್.ಕೋಡಿ ಪದ್ಮಾವತಿ ಸಭಾಭವನದಲ್ಲಿ ನಡೆಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಭಯ್ ಚಂದ್ರ ಜೈನ್ ಮಾತನಾಡಿ ಈಗಿನ ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು ಬೆಲೆ ಏರಿಕೆಗೆ

ಸರ್ವಾಧಿಕಾರಿ, ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಕರೆ- ಸುನೀಲ್ ಕುಮಾರ್ ಬಜಾಲ್

ಅನೈತಿಕ ದಾರಿಯಲ್ಲಿ ಕರ್ನಾಟಕದ ಜನಮತಗಣನೆಯನ್ನು ಧಿಕ್ಕರಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಕುದುರೆ ವ್ಯಾಪಾರ ನಡೆಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷದ ಆಡಳಿತದಲ್ಲಿ ಸಂಪೂರ್ಣ ಜನವಿರೋಧಿ ಸರಕಾರ ಆಗಿತ್ತು. ಇದು 40% ಕಮಿಷನ್ ವ್ಯವಹಾರವನ್ನು ಕಾನೂನು ಬದ್ದಗೊಳಿಸಿ ಎಲ್ಲಾ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿ ಸರಕಾರವಾಗಿದೆ. ಸರಕಾರದ ಎಲ್ಲಾ ಯಂತ್ರಗಳನ್ನು ದುರುಪಯೋಗಪಡಿಸಿದ್ದಲ್ಲದೆ ಕೋಮುವಾದಿಕರಣಗೊಳಿಸಿ ಕೋಮುಗಲಭೆಗಳಿಗೆ ರಾಜಕೀಯ ಬೇಳೆ

ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯದ ವೃದ್ಧಿಗೆ ಶಿಬಿರ ಸಹಕಾರಿ- ಸುಬ್ರಮಣ್ಯ ರಾವ್

ಸಂಸ್ಕೃತಿ, ಸಂಸ್ಕಾರ ಜೀವನ ವಿಧಾನಗಳ ಬಗ್ಗೆ ಕೇವಲ ಭಾಷಣ, ಬೋಧನೆಯ ಬದಲಾಗಿ ಪ್ರಾಯೋಗಿಕವಾಗಿ ಮಕ್ಕಳಿಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ ಹಾಗೂ ಇಂತಹ ಶಿಬಿರಗಳು ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯದ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ತೋಕೂರಿನ ವೇದ ವಿದ್ವಾಂಸರಾದ ವೇ.ಮೂ.ಟಿ.ಸುಬ್ರಹ್ಮಣ್ಯ ರಾವ್ ಅವರು ಪುನರೂರು ಪ್ರತಿಷ್ಠಾನ (ರಿ.) ಇದರ ಆಶಯದಲ್ಲಿ ಜನವಿಕಾಸ ಸಮಿತಿ ಮೂಲ್ಕಿಯ ಸಹಕಾರದಲ್ಲಿ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಜರುಗಿದ ಬಾಲ

ಗಾಂಜಾ ಮಾರಾಟ ಮಾಡಲು ಬಂದವ ಅರೆಸ್ಟ್

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಕಡ ಗ್ರಾಮದ ಪಡುಶೆಡ್ಡೆ ಕಡೆಗೆ ಹೋಗುವ ಕಾಂಕ್ರಿಟ್ ರಸ್ತೆಯಲ್ಲಿ ಆಪಾದಿತ ಯುವಕನಾದ ಸುಹಾನ್ ಎಸ್.ಪೂಜಾರಿ( 23 ವರ್ಷ) ಎಂಬಾತನು ಗಾಂಜಾ ಮಾದಕ ಪದಾರ್ಥವನ್ನು ಸ್ಕೂಟರ್ ನಲ್ಲಿರಿಸಿ ಮಾರಾಟ ಮಾಡಲು ಬಂದವನನ್ನು ಪೊಲೀಸರು ವಶಕ್ಕೆ ಪಡೆದು, ಆಪಾದಿತನು ಮಾರಾಟ ಮಾಡಲು ತಂದಿದ್ದ ಖಾಕಿ ಬಣ್ಣದ ಪ್ಯಾಕೇಟ್ ನಲಿದ್ದ 1 ಕೆ.ಜಿ 990 ಗ್ರಾಂ ಗಾಂಜಾವನ್ನು, ಕೃತ್ಯಕ್ಕೆ ಬಳಸಿದ ಮೋಬೈಲ್ ಪೋನ್ ಹಾಗೂ ಸ್ಕೂಟರನ್ನು ಮುಂದಿನ ಕ್ರಮದ ಬಗ್ಗೆ

ಪವಿತ್ರವಾದ ರಂಜಾನ್ ಇಫ್ತಾರ್ ಸಂಗಮ

ಮಂಜೇಶ್ವರ : ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಶನ್ ಮಂಜೇಶ್ವರ ಝೋನಲ್ ಸಮಿತಿಯ ವತಿಯಿಂದ ಹೊಸಂಗಡಿ ಗ್ರ್ಯಾಂಡ್ ಆಡಿಟೋರಿಯಂನಲ್ಲಿ ಪವಿತ್ರವಾದ ರಂಝಾನ್ ಇಫ್ತಾರ್ ಸಂಗಮ ಹಮ್ಮಿಕೊಳ್ಳಲಾಯಿತು. ಖ್ಯಾತ ವಿದ್ವಾಂಸ ಮುಜಾಹಿದ್ ಬಾಳುಶ್ಯೇರಿ ಯವರು “ನಾಳೆಗಾಗಿ ಸಿದ್ಧರಾಗಿ” ಎಂಬ ವಿಷಯದ ಕುರಿತು ಪ್ರವಚನ ನೀಡಿದರು. ರಂಜಾನ್ ತಿಂಗಳಲ್ಲಿ ಧರ್ಮದ ಹೆಸರಿನಲ್ಲಿ ವಿಶ್ವಾಸಿಗಳನ್ನು ವಂಚಿಸಿ ಹಣ ಸಂಪಾದಿಸಲು ಬಯಸುವ ಮೋಸದ ಪುರೋಹಿತರ ಬಗ್ಗೆ ವಿಶ್ವಾಸಿಗಳು ಹೆಚ್ಚು

ನಾನು ಟಿಕೆಟ್ ಆಕಾಂಕ್ಷಿಯಲ್ಲ : ಕ್ಯಾ. ಗಣೇಶ್ ಕಾರ್ಣಿಕ್

ಈ ಬಾರಿಯ ವಿಧಾನಸಭೆ ಚುನಾವಣೆಗೆ ನಾನು ಯಾವುದೇ ಕ್ಷೇತ್ರದಿಂದಲೂ ಟಿಕೇಟ್ ಆಕಾಂಕ್ಷಿಯಾಗಿರುವುದಿಲ್ಲ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್.ಗಣೇಶ್ ಕಾರ್ಣಿಕ್ ಅವರು ತಿಳಿಸಿದ್ದಾರೆ. ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಗಣೇಶ್ ಕಾರ್ಣಿಕ್ ಅವರ ಹೆಸರು ಇದೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುದ್ಧಿಗೆ ಅವರು ಪತ್ರಿಕ್ರಿಯಿಸಿ ನಾನು ಯಾವುದೇ ಕ್ಷೇತ್ರದಿಂದಲೂ ಟಿಕೆಟ್ ಆಕಾಂಕ್ಷಿಯಾಗಿರುವುದಿಲ್ಲ ಎಂದು ಸ್ವಷ್ಟಪಡಿಸಿದರು

ಎನ್‍ಎಸ್‍ಎಸ್ ಸ್ವಯಂ ಸೇವಕರಿಗೆ ವಾರ್ಷಿಕ ಪ್ರಶಸ್ತಿ ವಿತರಣೆ

ಯೆನೆಪೋಯ ದಂತ ಮಹಾವಿದ್ಯಾಲಯದ 2017ನೇ ಬಿಡಿಎಸ್ ಬ್ಯಾಚ್‍ನ ಎನ್‍ಎಸ್‍ಎಸ್ ಸ್ವಯಂ ಸೇವಕರಿಗೆ ವಾರ್ಷಿಕ ಪ್ರಶಸ್ತಿ ವಿತರಣಾ ಕಾರ್ಯಕ್ರಮವು ಯೆನೆಪೋಯ ದಂತ ಮಹಾವಿದ್ಯಾಲಯದ 5ನೇ ಮಹಡಿಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಎನ್‍ಎಸ್‍ಎಸ್ ಸ್ವಯಂ ಸೇವಕರಾದ ಎಂ.ಎಸ್. ಝೀಭಾ ಅವರು ಸ್ವಾಗತ ಭಾಷಣ ಮಾಡಿದರು. ಎಂ.ಎಸ್. ಫಾತಿಮತ್ ಇಶಾನ ಅವರು ವಾರ್ಷಿಕ ವರದಿ ವಾಚಿಸಿದರು.