Home ಕರಾವಳಿ Archive by category ಮಂಗಳೂರು (Page 80)

ಮೂಲ್ಕಿ-ಮೂಡಬಿದರೆ ಕ್ಷೇತ್ರದ ಎಸ್‍ಡಿಪಿಐ ಅಭ್ಯರ್ಥಿ ಆಲ್ಫೋನ್ಸ್ ಫ್ರಾಂಕೋ ನಾಮಪತ್ರ ಸಲ್ಲಿಕೆ

ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಎಸ್ ಡಿಪಿಐ ಅಭ್ಯರ್ಥಿ ಆಲ್ಫೋನ್ಸ್ ಫ್ರಾಂಕೋ ಅವರು ಸೋಮವಾರ ಮೂಡುಬಿದಿರೆ ಚುನಾವಣಾಧಿಕಾರಿಗಳ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಎಸ್ ಡಿಪಿಐ ಅಧ್ಯಕ್ಷ ಆಸಿಫ್ ಕೋಟೆಬಾಗಿಲು, ಕಾರ್ಯದರ್ಶಿ ನಿಸಾರ್ ಮರವೂರ್, ಸೂರಿಂಜೆ ಗ್ರಾಮ ಪಂಚಾಯತ್ ಸದಸ್ಯ ಮಹಿಳಾ ಮಲಿಕ್ ಸೂರಿಂಜೆ, ಮಹಿಳಾ

ಮೇ 18ರಂದು ಕರಾವಳಿಯಾದ್ಯಂತ ಬಹುನಿರೀಕ್ಷಿತ ಗೋಸ್ಮರಿ ಫ್ಯಾಮಿಲಿ ತುಳು ಸಿನಿಮಾ ಬಿಡುಗಡೆ

ಯೋಧ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಕೃಷ್ಣ ಕುಡ್ಲ ಅವರು ಬರೆದು ನಿರ್ದೇಶಿಸಿರುವ ತುಳು ಚಿತ್ರ `ಗೋಸ್ಮರಿ ಫ್ಯಾಮಿಲಿ’ ಮೇ 18 ರಂದು ಬಿಡುಗಡೆಯಾಗಲಿದೆ. ಬಹುನಿರೀಕ್ಷಿತ ತುಳು ಸಿನಿಮಾ ಗೋಸ್ಮರಿ ಫ್ಯಾಮಿಲಿ ಬಿಡುಗಡೆಗೆ ಸಿದ್ಧಗೊಂಡಿದೆ. ಒಂದು ಅದ್ಭುತ ಕಥಾಹಂದರ ಹೊಂದಿರುವ ಸಿನಿಮಾ ಇದಾಗಿದ್ದು, ಮೇ 18ರಂದು ಕರಾವಳಿಯಾದ್ಯಂತ ಬಿಡುಗಡೆಗೊಳ್ಳಲಿದೆ. ಅದಕ್ಕಾಗಿ ಚಿತ್ರತಂಡ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಚಿತ್ರವನ್ನು ಶಕುಂತಲಾ

ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋರ ಚುನಾವಣಾ ಕಚೇರಿ ಉದ್ಘಾಟನೆ

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಅವರ ಚುನಾವಣಾ ಕಚೇರಿಯಯು ಸರ್ವಧರ್ಮದ ಮುಖಂಡರಿಂದ ಉದ್ಘಾಟನೆಗೊಂಡಿತ್ತು, ನಗರದ ನಂತೂರು ರಸ್ತೆಯಲ್ಲಿರುವ ಜಿಮ್ಮಿಸ್ ಸೂಪರ್ ಮಾರ್ಕೇಟ್ ಸಂಕೀರ್ಣದಲ್ಲಿ ನೂತನ ಚುನಾವಣಾ ಕಚೇರಿ ಉದ್ಘಾಟನೆಗೊಂಡಿತ್ತು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಅವರು, ಮುಂದಿನ ದಿನಗಳಲ್ಲಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಉತ್ತಮ ಸರ್ಕಾರ ರಚನೆಗೆ ನಿಮ್ಮೆಲ್ಲರ ಸಹಕಾರ

ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್ ನಾಮಪತ್ರ ಸಲ್ಲಿಕೆ

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್ ಅವರು ಬೃಹತ್ ಪಾದಯಾತ್ರೆ ಮೂಲಕ ಇಂದು ನಾಮಪತ್ರ ಸಲ್ಲಿಸಿದರು. ಮೊದಲಿಗೆ ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬೃಹತ್ ಕಾರ್ಯಕರ್ತರ ಮೆರವಣಿಗೆ ಮೂಲಕ ಸಾಗಿ ಮಂಗಳೂರಿನ ಪಾಲಿಕೆ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಡಿ ವೇದವ್ಯಾಸ ಕಾಮತ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದರು.

ತೋಕೂರು ಯುವಕ ಸಂಘದ ಆಶ್ರಯದಲ್ಲಿ ಬೇಸಿಗೆ ಶಿಬಿರ

ನೆಹರು ಯುವ ಕೇಂದ್ರ ಮಂಗಳೂರು, ರಜತ ಮಹೋತ್ಸವ ಸಮಿತಿ ಮಹಿಳಾ ಮಂಡಲ ತೋಕೂರು ಹಾಗೂ ತೋಕೂರು ಯುವಕ ಸಂಘದ ಆಶ್ರಯದಲ್ಲಿ ಬೇಸಿಗೆ ಶಿಬಿರ ಸಮಾರಂಭ ತೋಕೂರು ಯುವಕ ಸಂಘದ ಸುವರ್ಣ ಸಭಾಂಗಣದಲ್ಲಿ ನಡೆಯಿತು. ತೋಕೂರು ಸುಬ್ರಹ್ಮಣ್ಯ ಶೀಮಂತ್ರಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಕೂರು ಕ್ಲಸ್ಟರ್ ನ ವಿಶ್ವ ಬ್ಯಾಂಕ್ ನೆರವಿನ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ದಿನಕರ ಸಾಲ್ಯಾನ್ ವಹಿಸಿದ್ದರು.

ಮಂಜೇಶ್ವರ ರೈಲು ನಿಲ್ದಾಣದ ಹಳಿಯ ಮೇಲೆ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಮಂಜೇಶ್ವರಂ ರೈಲು ನಿಲ್ದಾಣದಲ್ಲಿ ಹಳಿ ಮೇಲೆ ರೈಲಿಗೆ ಸಿಲುಕಿ 45 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಟಿಯಾನ್ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಮಂಜೇಶ್ವರಂ ಪೊಲೀಸ್ ಠಾಣೆ ಅಥವಾ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು. ಮಂಜೇಶ್ವರಂ ಪೊಲೀಸ್ ಠಾಣೆ ದೂರವಾಣಿ: 9497 928800 SHO (ಮಂಜೇಶ್ವರಂ): 9497 947263 ದೂರವಾಣಿ : 9497 98 O92

ಮಂಗಳೂರು : ಉದ್ಯಮಿ ವಿವೇಕ್ ರಾಜ್ ಮನೆ ಮೇಲೆ ಐ.ಟಿ.ದಾಳಿ

ಮಂಗಳೂರಿನ ಕಾಂಗ್ರೆಸ್‌ ಮುಖಂಡನ ಮನೆ ಮೇಲೆ‌ ಐಟಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಇಂದು ಮುಂಜಾನೆ ಕಾಂಗ್ರೆಸ್‌ ಮುಖಂಡ ವಿವೇಕ್ ರಾಜ್ ಪೂಜಾರಿ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ.  ಬೆಳಗ್ಗೆ ಸುಮಾರು 7 ಗಂಟೆಗೆ ರಾಜ್ಯದ ಬೇರೆ ಬೇರೆ ಕಡೆಯ 14 ಮಂದಿ ಅಧಿಕಾರಿಗಳು ವಿವೇಕ್ ರಾಜ್ ಪೂಜಾರಿಗೆ ಸೇರಿದ ಅತ್ತಾವರ ಮತ್ತು ಮಣ್ಣಗುಡ್ಡೆಯಲ್ಲಿರುವ ಎರಡು ಮನೆಗೆ ಹಾಗೂ ವಿವೇಕನಗರದಲ್ಲಿರುವ ಕಚೇರಿಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ

ಶ್ರೀ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿ ಟ್ರಸ್ಟಿಗಳ ವಿರುದ್ಧ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಆರೋಪ : ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು

ಮಂಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಆಡಳಿತ ಮಂಡಳಿ ಟ್ರಸ್ಟಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಮತ್ತು ಆರೋಪ ಹೊರಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಅಡಿಗೆ ಬಾಲಕೃಷ್ಣ ಶೆಣೈ, ಟ್ರಸ್ಟಿಗಳಾದ ಸಾಹುಕಾರ ಕಿರಣ್ ಪೈ, ಸತೀಶ್ ಪ್ರಭು, ಗಣೇಶ್ ಕಾಮತ್ ಮತ್ತು ಜಗನ್ನಾಥ್ ಕಾಮತ್ ಈ ದೂರು

ಬೆಳುಪು : ಗ್ರಾಮೀಣ ಕಾಂಗ್ರೆಸ್ ಕಛೇರಿ ಉದ್ಘಾಟನೆ

ಬೆಳಪುವಿನಲ್ಲಿ ಬೆಳಪು ದೇವಿಪ್ರಸಾದ್ ಶೆಟ್ಟಿ ನೇತ್ರತ್ವದಲ್ಲಿ ಗ್ರಾಮೀಣ ಕಾಂಗ್ರೆಸ್ ಕಛೇರಿಯ ಉದ್ಘಾಟನೆಯನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಚುನಾವಣಾ ಪೂರ್ವ ಬಾವಿಯಾಗಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಪಲಿಮಾರು, ಮುದರಂಗಡಿ, ಬೆಳಪು, ಕುತ್ಯಾರು, ಎಲ್ಲೂರು, ಶಿರ್ವ ಹಾಗೂ ಮೂಡಬೆಳ್ಳೆಗಳಲ್ಲಿ ಕಛೇರಿಯನ್ನು ಉದ್ಘಾಟಿಸಲಾಗಿದ್ದು, ಮುಂದಿನ 18ನೇ ತಾರೀಖು ಹತ್ತು ಗಂಟೆಗೆ ಕಾಪು ಜನಾರ್ದನ

ನವಮಂಗಳೂರು ಬಂದರಿಗೆ ಆಗಮಿಸಿದ `ಎಂವಿ ಹಾಂಗ್ ಎಎನ್’ ಹಡಗು

ನವ ಮಂಗಳೂರು ಬಂದರಿನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕಂಟೇನರ್ ಟರ್ಮಿನಲ್‍ಗೆ ಕಂಟೇನರ್‍ಗಳನ್ನು ಹೊತ್ತ ಹಡಗು `ಎಂವಿ ಹಾಂಗ್ ಎಎನ್’ ಶುಕ್ರವಾರ ಆಗಮಿಸಿದೆ.ಚಿತ್ತಗಾಂಗ್ – ಕೊಲಂಬೊ – ಮಂಗಳೂರು – ನವಾ ಶೇವಾ – ಮುಂದ್ರಾ ಮಾರ್ಗವಾಗಿ ಪೂರ್ವಕ್ಕೆ ಜೆಬೆಲ್ ಅಲಿ- ಖಲೀಫಾ ಬಂದರು ಮಾರ್ಗದಲ್ಲಿ ಈ ಹಡಗು ಸಂಚರಿಸುತ್ತಿದೆ. ಭಾರತದ ರಫ್ತುದಾರ ಜೆಬೆಲ್ ಅಲಿ, ಅಬುಧಾಬಿ ಗೆ ನೇರ ಸೇವೆಯನ್ನು ಒದಗಿಸಲಿದೆ. ಅಮೆರಿಕ