Home Archive by category ಕರಾವಳಿ (Page 188)

ಬೆಂಗರೆ ರುದ್ರ ಭೂಮಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಬೆಂಗರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ಮತ್ತು ಬೆಂಗರೆ ವಿದ್ಯಾರ್ಥಿ ಸಂಘ ಅಮೃತೋತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ ಬೆಂಗ್ರೆ ರುದ್ರ ಭೂಮಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ವನಮೋತ್ಸವ ಕಾರ್ಯಕ್ರಮ ನಡೆಯಿತು. ಬೆಂಗ್ರೆ ವಿದ್ಯಾರ್ಥಿ ಸಂಘ ಇದರ ಅಧ್ಯಕ್ಷರಾದ ಸಂಜಯ್ ಸುವರ್ಣ ಬೆಂಗ್ರೆ ಇವರ ಮುಂದಾಳತ್ವದಲ್ಲಿ ಜರಗಿತು. ವನಮಹೋತ್ಸವ ಕಾರ್ಯಕ್ರಮಕ್ಕೆ ನಮ್ಮ ಹಿರಿಯ

ಬೆಳ್ತಂಗಡಿ ನೆರಿಯ ಗ್ರಾಮದಲ್ಲಿ ಸ್ಮಶಾನದ ಕೊರತೆ : ಮೃತ ದೇಹ ಇಟ್ಟು ಗ್ರಾಮಸ್ಥರಿಂದ ಪ್ರತಿಭಟನೆ

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ಸ್ಮಶಾನ ಇಲ್ಲದೆ ಶವ ಸಂಸ್ಕಾರಕ್ಕೆ ಸಮಸ್ಯೆ ಆಗುತಿದೆ. ತಕ್ಷಣ ಸ್ಮಶಾನದ ಜಾಗ ನಿಗದಿಗೊಳಿಸುವಂತೆ ಆಗ್ರಹಿಸಿ ಮೃತ ದೇಹ ಇಟ್ಟು ಗ್ರಾಮಸ್ಥರು ಪ್ರತಿಭಟನೆ ಮಾಡಿದ ಘಟನೆ ನೆರಿಯದಲ್ಲಿ ನಡೆದಿದೆ. ಕಳೆದ ಹಲವಾರು ವರ್ಷಗಳಿಂದ ಸ್ಮಶಾನವಿಲ್ಲದೆ ಶವ ಸಂಸ್ಕಾರಕ್ಕಾಗಿ ಗ್ರಾಮಸ್ಥರು ಅಲೆದಾಡುವ ಸ್ಥಿತಿ ಇದ್ದರೂ ಯಾರೂ ಕೂಡ ಗ್ರಾಮಸ್ಥರ ಮನವಿಗೆ ಸ್ಪಂದಿಸುತ್ತಿಲ್ಲ ಸ್ಮಶಾನ ನಿಗದಿಗೊಳಿಸದೇ ಮೃತ ದೇಹದ ಅಂತಿಮ ಸಂಸ್ಕಾರ ಮಾಡುವುದಿಲ್ಲ

ಪಡುಬಿದ್ರಿ ಇನ್ನರ್‌ ವೀಲ್‌ನ ಪದಾಧಿಕಾರಿಗಳ ಪದಗ್ರಹಣ

ಮಹಿಳೆಯರು ಯಾವಾಗಲೂ ಪುರುಷರಿಗಿಂತ ಕೆಳಗಿನವರು ಎಂಬ ಭಾವನೆಯನ್ನು ಹೋಗಲಾಡಿಸ ಬೇಕು ಮಾನವ ಹಕ್ಕು ಮತ್ತು ವ್ಯಯಕ್ತಿಕ ಹಕ್ಕುಗಳನ್ನು ಒದಗಿಸಬೇಕು ತಮ್ಮ ಜೀವನವನ್ನು ಸ್ವತಂತ್ರವಾಗಿ ಯಾವುದೇ ಭಯವಿಲ್ಲದೆ ಬದುಕುವಂತಾಗಲಿ ಎಂಬ ಉದ್ದೇಶವಿದೆ. ಜೀವನಕ್ಕೆ ಅವಶ್ಯಕವಾದ ಅವಕಾಶಗಳನ್ನು ಪಡೆದು ಕೊಳ್ಳಲು ಮಹಿಳೆಯರು ಯಾವುದೇ ಭಯವಿಲ್ಲದೆ ತಮ್ಮ ಹಕ್ಕು ಚಲಾಯಿಸಬೇಕು ಎಂದು ಉಡುಪಿ ರೋಟರಿ ಅಧ್ಯಕ್ಷೆ  ದೀಪಾ ಭಂಡಾರಿ ಹೇಳಿದರು. ಅವರು ಪಡುಬಿದ್ರಿ ಸಹಕಾರಿ ಸಂಗಮದಲ್ಲಿ ನಡೆದ

ಕಾರ್ಕಳ ಪೊಲೀಸ್ ಹೆಡ್‌ ಕಾನ್ಸ್ಟೇಬಲ್ ಆತ್ಮಹತ್ಯೆ

ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ಮಿಯ್ಯಾರು ಎಂಬಲ್ಲಿ ನಡೆದಿದಿದೆ. ಮೃತರನ್ನು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸ್ ಹೆಡ್ ಕಾನ್ ಸ್ಟೇಬಲ್, ಮಿಯ್ಯಾರು ಗ್ರಾಮದ ಕಾಜರಬೈಲು ನಿವಾಸಿ ಪ್ರಶಾಂತ್ ಮಿಯ್ಯಾರು (49) ಎಂದು ಗುರುತಿಸಲಾಗಿದೆ. ರಜೆಯಲ್ಲಿದ್ದ ಇವರು ಕಾರ್ಕಳದ ಮಿಯ್ಯಾರಿನ ತನ್ನ ಮನೆಯ ಹಿಂಭಾಗದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಈ ಘಟನೆ

ಶಾಲೆ ಶಾಲೆಯಲ್ಲಿ ಕನ್ನಡದ ಕಂಪು : ಮಂಜುನಾಥ ಎಸ್. ರೇವಣ್ಕರ್

        ಪ್ರತಿ ಶಾಲೆಯಲ್ಲಿಯೂ ಕನ್ನಡದ ಕಂಪನ್ನು ಹರಡುವ ಪ್ರಯತ್ನದಲ್ಲಿ  ದ ಕ ಜಿಲ್ಲಾ ಕ ಸಾ ಪ ಮಂಗಳೂರು ತಾಲೂಕು ಘಟಕ ತೊಡಗಿಕೊಳ್ಳಲಿದೆ ಎಂದು ಕ ಸಾ ಪ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ  ಪ್ರಾಥಮಿಕ ಶಾಲೆ , ಸ್ಯಾಂಡ್ಸ್ ಪಿಟ್ ಬೆಂಗ್ರೆ ಇಲ್ಲಿನ ವಿದ್ಯಾರ್ಥಿಗಳಿಗೆ ಕನ್ನಡ ಕವನ ಗಾಯನ ಸ್ಪರ್ಧೆಯಲ್ಲಿ ನಿರ್ಣಾಯಕ ಹಾಗೂ ಮುಖ್ಯ

ಶಿರ್ತಾಡಿ : ಸಂಜೀವಿನಿ ಕಟ್ಟಡಕ್ಕೆ ಶಿಲಾನ್ಯಾಸ

ಮೂಡುಬಿದಿರೆ: ಶಿರ್ತಾಡಿ ಗ್ರಾಮ ಪಂಚಾಯತ್ ನ ನೇತೃತ್ವದಲ್ಲಿ ಶಿರ್ತಾಡಿಯ ಪೇಟೆ ಬಳಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸಂಜೀವಿನಿ ಕಟ್ಟಡಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿತು. ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರು ಶಿಲಾನ್ಯಾಸಗೈದು ಮಾತನಾಡಿ ಸಂಜೀವಿನಿ ಸ್ವಸಹಾಯ ಗುಂಪುಗಳಿಗೆ ಸುಮಾರು ರೂ. 26ಲಕ್ಷ ಅನುದಾನವನ್ನು ಉದ್ಯೋಗ, ಸ್ವ ಉದ್ಯೋಗಕ್ಕಾಗಿ ನೀಡಲಾಗಿದೆ. ಮಹಿಳೆಯರು ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಳ್ಳಲು ಸಂಜೀವಿನಿಯ ಕಾರ್ಯಕ್ರಮಗಳು

ಮಂಜೇಶ್ವರದಲ್ಲಿ ಉದ್ಯೋಗ ಮೇಳ-2023

ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮತ್ತು ಭಾರತ ಉದ್ಯೋಗ ಕೇಂದ್ರ ಆಶ್ರಯದಲ್ಲಿ ಮಂಜೇಶ್ವರ ಗೋವಿಂದ ಪೈ ಮೆಮೋರಿಯಲ್ ಕಾಲೇಜಿನ ಸಹಯೋಗದಲ್ಲಿ ಉದ್ಯೋಗ ಮೇಳ-2023 ನಡೆಯಿತು. ಕೇರಳದ ವಿದ್ಯಾವಂತ ಯುವಕ/ಯುವತಿಯರಿಗೆ ಸೌಕರ್ಯ ವಲಯದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ರಾಷ್ಟ್ರೀಯ ಉದ್ಯೋಗ ಸೇವಾ ಇಲಾಖೆಯ ಮೂಲಕ ಉಚಿತ ಉದ್ಯೋಗ ವಲಯಗಳನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಯ ಅಂಗವಾಗಿ 50 ಕ್ಕೂ ಹೆಚ್ಚು ಅಧಿಕಾರಿಗಳು

ಬಂಟ್ವಾಳ : ಎರಡು ಎಕ್ರೆ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿ – ಹೋಟೆಲ್ ಉದ್ಯಮಿಯೊಬ್ಬರ ಸಾಹಸಗಾಥೆ

ಬಂಟ್ವಾಳ: ಜಿಲ್ಲೆಯ ಹವಾಗುಣಕ್ಕೆ ಬೆಳೆ ಹೊಂದಿಕೆಯಾಗುವುದಿಲ್ಲ, ನೀರಾವರಿ ಸಮಸ್ಯೆ, ಅತಿವೃಷಿ, ಅನಾವೃಷಿಯಿಂದಾಗಿ ಉತ್ತಮ ಇಳುವರಿ ಪಡೆಯಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಸಾಕಷ್ಟು ಜಮೀನಿದ್ದರೂ ಕೂಡ ದೊಡ್ಡ ಮಟ್ಟದಲ್ಲಿ ವಿದೇಶಿ ಹಣ್ಣುಗಳನ್ನು ಬೆಳೆಯಲು ಜಿಲ್ಲೆಯ ರೈತರು ನಿರಾಸಕ್ತಿ ತೋರುತ್ತಾರೆ. ಆದರೆ ಬಂಟ್ವಾಳದ ಹೊಟೇಲ್ ಉದ್ಯಮಿಯೊಬ್ಬರು ಸುಮಾರು 2 ಎಕರೆ ಭೂ ಪ್ರದೇಶದಲ್ಲಿ ಡ್ರ್ಯಾಗನ್ ಪ್ರೂಟ್ ಬೆಳೆದು ಯಶಸ್ವಿಯಾಗುವುದರ ಜೊತೆಗೆ ಉತ್ತಮ ಆದಾಯವನ್ನು

ಕದ್ರಿ : ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ

ಮಂಗಳೂರಿನ ಕದ್ರಿ ಸಮೀಪದ ಬಟ್ಟಗುಡ್ಡೆ ಬಳಿ ಕಾರು ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ನಡೆದಿದೆ. ಶುಕ್ರವಾರ ಮಧ್ಯರಾತ್ರಿ ಸುಮಾರು 12.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು ಸರ್ಕಿಟ್ ಹೌಸ್ ಕಡೆಯಿಂದ ಬಿಜೈ ಕಡೆಗೆ ವೇಗವಾಗಿ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಹೊಡೆದು ಪಕ್ಕದ ರಸ್ತೆ ಬಿದ್ದು ಅಲ್ಲಿದ್ದ ಪ್ರಪಾತದ ಸನಿಹದಲ್ಲೇ ಗಿಡ ಗಂಟಿಗಳ ಮಧ್ಯೆ

ಹೊಂಡ-ಗುಂಡಿಗಳ ಆಗರವಾಗಿರುವ ಬೈಕಂಪಾಡಿ ರಸ್ತೆ

ಮಳೆಗಾಲ ಆರಂಭವಾಗುತ್ತಿದ್ದಂತೆ ನಗರದ ಬಹತೇಕ ರಸ್ತೆಗಳು ಹೊಂಡ-ಗುಂಡಿಗಳಿಂದ ಆವೃತ್ತವಾಗಿದೆ. ಇದೀಗ ಬೈಕಂಪಾಡಿ ಇಂಡಸ್ಟ್ರೀಯಲ್ ಪ್ರದೇಶಕ್ಕೆ ಹೋಗುವ ರಸ್ತೆಯ ಪರಿಸ್ಥಿತಿ ಕೂಡ ಹಾಗೆಯೇ ಇದೆ. ಹೊಂಡ-ಗುಂಡಿ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ. ಮಾತ್ರವಲ್ಲದೆ ಅಪಘಾತಗಳು ಸಂಭವಿಸುತ್ತಿದೆ. ಈ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿಯನ್ನು ನೀಡಿದ್ರೂ ಸಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ