ಟೋನಿ & ಗೈ ಹೇರ್ ಡ್ರೆಸ್ಸಿಂಗ್ – ಇದರ ಎರಡನೇ ಶಾಖೆ ಶುಭಾರಂಭ

ನಿಮ್ಮ ಸೌಂದರ್ಯ ಹಾಗೂ ಸೌಂದರ್ಯ ಪ್ರಿಯರಿಗಾಗಿ ಮಂಗಳೂರಿನ ಪಾಂಡೇಶ್ವರದ ಫಿಝಾ ಬೈ ನೆಕ್ಸಾಸ್ ಮಾಲ್‍ನಲ್ಲಿ ಟೋನಿ ಆ್ಯಂಡ್ ಗಾಯ್ ಹೇರ್ ಡ್ರೆಸ್ಸಿಂಗ್ ಶುಭಾರಂಭಗೊಂಡಿತು.

TONI&GUY

TONI&GUY

ಮುಸ್ತಫಾ ಪ್ರೇಮಿ ಮಾಲೀಕತ್ವದ ಹೆವೆನ್ ರೋಸ್ ಪ್ರೊಫೆಷನಲ್ ಯುನಿಸೆಕ್ಸ್ ಸೆಲೂನ್ ಕಡಲ ನಗರ ಮಂಗಳೂರಿನಲ್ಲಿ ಪ್ರಖ್ಯಾತಿ ಪಡೆದಿದೆ. ಅದ್ರಂತೆ ಇದೀಗಾ ಮಂಗಳೂರಿನ ಪಾಂಡೇಶ್ವರದ ಫಿಝಾ ಬೈ ನೆಕ್ಸಾಸ್ ಮಾಲ್ ನಲ್ಲಿ ಮುಸ್ತಫಾ ಪ್ರೇಮಿ ಅವರು ಪ್ರಾಂಚೈಸಿಯ ಮಾಲೀಕತ್ವದಲ್ಲಿ ಟೋನಿ & ಗೈ ಇದರ ಎರಡನೇ ಶಾಖೆ ಶುಭಾರಂಭಗೊಂಡಿದೆ.

TONI&GUY

TONI&GUY

TONI&GUY

ನೂತನ ಶಾಖೆಯನ್ನ ಮುಸ್ತಫಾ ಪ್ರೇಮಿ ಹಾಗೂ ಶಭಾ ಮುಸ್ತಫಾ, ಜನ್ನತ್ ಮುಸ್ತಫಾ ಅವರು ರಿಬ್ಬನ್ ಕತ್ತರಿಸುವ ಮೂಲಕಚಾಲನೆ ನೀಡಿದ್ರು..ಫಿಝಾ ಬೈ ನೆಕ್ಸಸ್ ಮಾಲ್ ಇದರ ಜನರಲ್ ಮ್ಯಾನೇಜರ್ ಅರವಿಂದ್ ಶ್ರೀವಾಸ್ಥವ್, ಅಫರೇಶನ್ ಮ್ಯಾನೇಜರ್ ಸುನಿಲ್ ಕೆ.ಎಸ್, ಇಂಟಿರಿಯರ್ ಡಿಸೈನರ್ ದಿವ್ಯಾ ಮಸ್ಕರೇನಸ್, ಹೆವೆನ್ ರೋಸ್ ಯುನಿಸೆಕ್ಸ್ ಸೆಲೂನ್ ಮತ್ತು ಟೋನಿ & ಗೈ ಹೇರ್ ಡ್ರೆಸ್ಟಿಂಗ್ ಫ್ರಾಂಚೈಸಿಯ ಮಾಲಕರಾದ ಮುಸ್ತಫಾ ಪ್ರೇಮಿ ಮತ್ತಿತರರು ಗಣ್ಯರು ಸೇರಿ ದೀಪಬೆಳಗಿ ಶುಭಹಾರೈಸಿದ್ರು.

TONI&GUY

ಇನ್ನೂ ಮುಸ್ತಫಾ ಪ್ರೇಮಿ ಮಾತನಾಡಿ ಮಂಗಳೂರಿನಲ್ಲಿ ಹೆವೆನ್ ರೋಸ್ ಸಂಸ್ಥೆಯ ಮೂಲಕ ಶಾಖೆ ಪ್ರಾರಂಭಿಸಿದ ನನಗೆ ಜಿಲ್ಲೆಯ ಜನ್ರು ಕುಟುಂಬದ ಸದಸ್ಯನಂತೆ ಸಹಕಾರ ನೀಡಿ ಇದೀಗಾ ಟೋನಿ & ಗೈ ಎರಡನೇ ಶಾಖೆಯನ್ನು ಮಂಗಳೂರಿನಲ್ಲಿ ಆರಂಭಿಸುವಂತಾಗಿದೆ…ನಗರದ ಸಿಟಿ ಸೆಂಟರ್ ಮಾಲ್ ನಲ್ಲಿ ಟೋನಿ ಗೈ ಮೊದಲ ಶಾಖೆ ಇದ್ದು ಇದಕ್ಕೆ ಉತ್ತಮ ಸ್ಪಂದನೆ ಲಭ್ಯವಾಗಿದೆ..ಇದೀಗಾ ಮಂಗಳೂರಿನ ಫಿಝಾ ಬೈ ನೆಕ್ಸಸ್ ಮಾಲ್ ನಲ್ಲಿ ಎರಡನೇ ಶಾಖೆ ತೆರೆಯಲಾಗಿದ್ದು ಈ ಹಿಂದೆ ನೀಡಿದ ಸಹಕಾರ ಗ್ರಾಹಕರು ಮುಂದೆಯೂ ನೀಡಬೇಕು.ಈ ಸಂಸ್ಥೆಯು ಇಷ್ಟೊಂದು ಅಭಿವೃದ್ಧಿ ಮತ್ತು ಯಶಸ್ಸಿಗೆ ಕೇವಲ ನಾನು ಮಾತ್ರವಲ್ಲ ನಮ್ಮ ಸಂಸ್ಥೆಯ ಪ್ರತಿಯೊಬ್ಬ ಸಿಬ್ಬಂದಿ ಗ್ರಾಹಕರು ಕಾರಣ ಇವರಿಗೆ ನಾನು ಚಿರ ಋಣಿ ಎಂದವರು ಹೇಳಿದರು.

TONI&GUY

ಕಾರ್ಯಕ್ರಮದಲ್ಲಿ ಹೆವನ್ ರೋಸ್ ಮ್ಯಾನೇಜಿಂಗ್ ಪಾಟ್ನರ್ ಮಹಮ್ಮದ್ ಸನಖತ್ ಆಲಿ, ಬಿಎನ್‍ಐ ಸದಸ್ಯರಾದ ಮೋಹನ್ ರಾಜ್, ರೋಷನ್ ಬಾಳಿಗಾ, ಸ್ವೀಕೃತ್, ವಿ4 ನ್ಯೂಸ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್, ಉಪಾಧ್ಯಕ್ಷೆ ರೋಸ್ಲಿನ್ ಡಿಲಿಮಾ, ಮುಸ್ತಫಾ ಪ್ರೇಮಿ ಕುಟುಂಬಸ್ಥರು ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.