ಮೂಡುಬಿದಿರೆ: ಸ್ವ ಉದ್ಯೋಗ ಅಭಿವೃಧ್ಧಿ ತರಬೇತಿ ಸಮರೋಪ : ಪ್ರಮಾಣ ಪತ್ರ ವಿತರಣೆ
ಮೂಡುಬಿದಿರೆ: ಬ್ರಾಂಚ್ ಎಂ.ಎಸ್.ಎಂ.ಇ, ಡಿ.ಎಫ್. ಒ, ಮಿನಿಸ್ಟ್ರಿ ಆಫ್ ಮೈಕ್ರೋ ಸ್ಮಾಲ್ & ಮೀಡಿಯಂ ಎಂಟರ್ ಪ್ರೈಸಸ್ ಗವರ್ನಮೆಂಟ್ ಆಫ್ ಇಂಡಿಯ ಇಂಡಸ್ಟ್ರಿಯಲ್ ಎಸ್ಟೇಟ್ ಯೆಯ್ಯಾಡಿ ಮಂಗಳೂರು ಇದರ ವತಿಯಿಂದ ಮಹಿಳಾ ಉದ್ಯಮಿಗಳಿಗೆ ಆಯೋಜಿಸಲಾಗಿದ್ದ ಐದು ದಿನಗಳ ಮ್ಯಾನೇಜ್ ಮೆಂಟ್ ಡೆವಲಪ್ ಮೆಂಟ್ ತರಬೇತಿಯ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಮೂಡಬಿದಿರೆ ವೀಚೀಸ್ ಫ್ಯಾಶನ್ ಡಿಸೈನಿಂಗ್ ಹಾಗು ಕೌಶಲ್ಯಾಧಾರಿತ ತರಬೇತಿ ಕೇಂದ್ರದಲ್ಲಿ ನಡೆಯಿತು.
ಎಂ.ಎಸ್.ಎಮ್.ಇ ,ಡಿ.ಎಫ್.ಓ ಬ್ರಾಂಚ್ ಮಂಗಳೂರು ಇದರ ಜಂಟಿ ನಿರ್ದೇಶಕ ದೇವರಾಜ್ ಕೆ. ಅಧ್ಯಕ್ಷತೆ ವಹಿಸಿದ್ದತು.
ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಸಿ. ಹಾಗೂ ಉದ್ಯಮಿ ಪೂರ್ಣಚಂದ್ರ ಜೈನ್, ತರಬೇತಿಯ ಆಯೋಜಕಿ ಎಂ .ಎಸ್.ಎಂ.ಇ ,ಡೆವಲಪ್ ಮೆಂಟ್ ಇನ್ ಸ್ಟಿಟ್ಯೂಟ್ ನ ಉಪ ನಿರ್ದೇಶಕಿ ಶೃತಿ ಜಿ.ಕೆ ಹಾಗು ತರಬೇತಿ ಕೇಂದ್ರದ ನಿರ್ದೇಶಕಿ ಶುಭಲಕ್ಷ್ಮೀ ಉಪಸ್ಥಿತರಿದ್ದರು.
ತರಬೇತಿ ಪಡೆದ ಇಪ್ಪತ್ತೊಂಬತ್ತು ಮಂದಿ ಮಹಿಳಾ ಉದ್ಯಮಿಗಳು ಅತಿಥಿಗಳಿಂದ ಪ್ರಮಾಣ ಪತ್ರವನ್ನು ಸ್ವೀಕರಿಸಿದರು.
ಐದು ದಿನದ ತರಬೇತಿಯನ್ನು ಸಂಪನ್ಮೂಲ ವ್ಯಕ್ತಿಗಳಾದ ರೂಡ್ ಸೆಟ್ ಸಂಸ್ಥೆ ಉಜಿರೆಯ ಹಿರಿಯ ಉಪನ್ಯಾಸಕ ಅಬ್ರಾಂ ಜೇಮ್ಸ್ ಉಜಿರೆ ಹಾಗು ಡಾ.ಎ.ಜಯಕುಮಾರ್ ಶೆಟ್ಟಿ ಉಜಿರೆ, ಕುಸುಮ .ಎಚ್.ದೇವಾಡಿಗ ಮಂಗಳೂರು, ಎಮ್.ಉಷಾ.ವಿ.ನಾಯಕ್ ಬೆಳ್ತಂಗಡಿ, ಸಹ್ಯಾದ್ರಿ ಮಂಗಳೂರು ಹಾಗು ಕೇಂದ್ರದ ನಿರ್ದೇಶಕಿ ಶುಭಲಕ್ಷ್ಮೀ ನೀಡಿದರು. ಅಲ್ವೀರಾ ಪ್ಪೃಥ್ವಿ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.