ವಿಟ್ಲ: ಆಟೋ ರಿಕ್ಷಾ ಮತ್ತು ಪಿಕಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಕನ್ಯಾನದಲ್ಲಿ ನಡೆದಿದೆ. ಆಟೋ ರಿಕ್ಷಾ ಮತ್ತು ಪಿಕಪ್ ನಡುವೆ ಡಿಕ್ಕಿಯಾಗಿದ್ದು, ಅಪಘಾತದಿಂದಾಗಿ ಆಟೋ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ವಿಟ್ಲ: ಟ್ರಾವೆಲ್ಸ್ ಕಾರು ಚಾಲಕನೋರ್ವ ಕಾರನ್ನು ವೇಗವಾಗಿ ಅಡ್ಡಾದಿಡ್ಡಿಯಾಗಿ ಓಡಿಸಿದ ಪರಿಣಾಮ ಕಾರಿನಲ್ಲಿದ್ದ ಮಹಿಳೆಯರು ಆತಂಕಗೊಂಡು ಕಿರುಚಾಡುತ್ತಿದ್ದ ವೇಳೆ ಸಾರ್ವಜನಿಕರು ಅಪಹರಣವೆಂದು ತಿಳಿದು ಅಡ್ಡಗಟ್ಟಿ, ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ. ಮಂಗಳೂರು ಹೊರ ವಲಯದ ತೊಕ್ಕೊಟ್ಟು ಪಿಲಾರಿನ ಮಹಿಳೆಯರು ಪಣೋಲಿಬೈಲಿಗೆ ತೆರಳುವ ಹಿನ್ನೆಲೆ ಕದ್ರಿಯಿಂದ ಬಾಡಿಗೆ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ. ಈ ವೇಳೆ ಕಾರು ಚಾಲಕ ಕಾಡುಮಠ
ವಿಟ್ಲ: ಮನೆಯ ಮಾಡಿನ ಹಂಚು ತೆಗೆದು ಮನೆಗೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕಟ್ಟೆ ಮನೆ ಎಂಬಲ್ಲಿ ನಡೆದಿದೆ. ಈ ಘಟನೆ ಕೊಳ್ನಾಡು ಗ್ರಾಮ ಕಟ್ಟೆ ಮನೆ ನಿವಾಸಿ ಕೆ.ಎಂ ಮಹಮ್ಮದ್(60) ಎನ್ನುವವರ ಮನೆಯಲ್ಲಿ ನಡೆದಿದ್ದು, ಮನೆಗೆ ನಗ್ಗಿದ ಕಳ್ಳರು ಸುಮಾರು 5 ಪವನ್ ತೂಕದ ನಕ್ಲೇಸ್-01, ಸುಮಾರು 1 ಪವನ್ ತೂಕದ ಸರ-01, ಸುಮಾರು ಅರ್ದ ಪವನ್ ತೂಕದ ಉಂಗುರ-01, ಹಾಗೂ ಗಾದ್ರೇಜ್ ಪಕ್ಕದಲ್ಲಿದ್ದ ಮೇಜಿನ
ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ಧನ್ಯಶ್ರೀ SSLC ಫಲಿತಾಂಶ 2022 ರಲ್ಲಿ 625 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೂ ಶಾಲೆಯಲ್ಲೂ ಪ್ರಥಮಸ್ಥಾನ ಪಡೆದಿರುತ್ತಾರೆ. ಇವರ ಸಾಧನೆಗೆ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವೃಂದ ಅಭಿನಂದನೆ ಸಲ್ಲಿಸಿದ್ದಾರೆ. ಇವರು ರವಿಪ್ರಕಾಶ್ ವಿಟ್ಲ ಹಾಗೂ ಶಿಕ್ಷಕಿ ಮಮತಾರವರ ಪುತ್ರಿಯಾಗಿದ್ದಾರೆ.
ವಿಟ್ಲ: ವಿಟ್ಲ ಭಾಗದಲ್ಲಿ ವಾಣಿಯನ್ ಗಾಣಿಗ ಸಮುದಾಯದ 140ಕುಟುಂಬಗಳಿದ್ದು, ಸಂಘಟನೆಯ ದೃಷ್ಟಿಯಿಂದ ಮೇ.15ರಂದು ಮೈರ ವಿಟ್ಲ ಗಾರ್ಡನ್ ಸಭಾಭವನದಲ್ಲಿ ವಾಣಿಯೋತ್ಸವ 2022 ಹಮ್ಮಿಕೊಳ್ಳಲಾಗಿದೆ ಎಂದು ವಿಟ್ಲ ವಾಣಿಯನ್ ಗಾಣಿಗ ಸಮುದಾಯ ಸೇವಾ ಸಂಘ ಅಧ್ಯಕ್ಷ ಉದಯಕುಮಾರ್ ದಂಬೆ ಹೇಳಿದರು. ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಾವರು ಬೆಳಗ್ಗೆ 9ಕ್ಕೆ ಸಮುದಾಯದ ಮಕ್ಕಳಿಂದ ನೃತ್ಯ ವೈವಿಧ್ಯ, 10.30ರಿಂದ ಧಾರ್ಮಿಕ ಚಿಂತನೆ ನಡೆಯಲಿದ್ದು, ಹಿಂದೂ ಚಿತ ಚಿಂತಕ್
ಹಣಿಯೂರು ಗುತ್ತಿನ ತರವಾಡು ದೈವಸ್ಥಾನದ ಪುನರ್ ಪ್ರತಿಷ್ಠೆ, ನೂತನ ದೈವಸ್ಥಾನ ಮತ್ತು ತರವಾಡು ಮನೆಯ ಗ್ರಹಪ್ರವೇಶ ಹಾಗೂ ಶ್ರೀ ದೈವಗಳ ಧರ್ಮನೇಮೋತ್ಸವ ಮೇ 14 ರಿಂದ 18 ರವರೆಗೆ ಕೊಡಿಪ್ಪಾಡಿ ಬಳಿಯ ಹಣಿಯೂರಿನಲ್ಲಿ ನಡೆಯಲಿದೆ. ಮೇ 14 ರಂದು ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಮಂಗಳೂರು ವಲಯದ ಹೊರೆಕಾಣಿಕೆ ಕೇಂದ್ರ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಉದ್ಘಾಟನೆಗೊಂಡಿತು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ
ವಿಟ್ಲ ಸಮೀಪದ ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ ಚರ್ಚ್ ಜೀರ್ಣೋದ್ಧಾರ ಮತ್ತು ರಜತ ಮಹೋತ್ಸವ ಅಂಗವಾಗಿ ನವೀಕೃತ ದೇವಾಲಯದ ಗೋಪುರ ಉದ್ಘಾಟನೆ ಮತ್ತು ದಿವ್ಯ ಬಲಿಪೂಜೆ ಕಾರ್ಯಕ್ರಮ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ನವೀಕೃತ ದೇವಾಲಯದ ಗೋಪುರ ಉದ್ಘಾಟಿಸಿ, ಭವ್ಯ ಬಲಿ ಪೂಜೆ ನೆರವೇರಿಸಿದರು. ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಮಾತನಾಡಿ ಜನರು ಮನನ್ನಸ್ಸು ದೇವರ ಕಡೆಗೆ ತೆಗೆದುಕೊಂಡು
ವಿಟ್ಲ: ಕನ್ಯಾನ ಗ್ರಾಮದ ಶಿರಂಕಲ್ಲು ಎಂಬಲ್ಲಿ ನಡೆದ ಸಹೋದರರ ನಡುವೆ ಗಲಾಟೆ ನಡೆದು ಅಣ್ಣನೇ ತಮ್ಮನ್ನನ್ನು ಕೊಲೆಗೈದ ಘಟನೆಗೆ ಸಂಬಂಧಿಸಿ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಕನ್ಯಾನ ಗ್ರಾಮದ ಶಿರಂಕಲ್ಲು ನಿವಾಸಿ ಐತಪ್ಪ ನಾಯ್ಕ್(45) ಬಂಧಿತ ಆರೋಪಿ. ಎಣ್ಮಕಜೆ ಗ್ರಾಮದ ಅಡ್ಯನಡ್ಕ ನಿವಾಸಿ ಬಾಲಪ್ಪ ನಾಯ್ಕ್ ಅವರು ಮಂಗಳವಾರ ಸಂಜೆ ತರವಾಡು ಮನೆಗೆ ತನ್ನ ತಾಯಿ ಜತೆ ಬಂದಿದ್ದರು. ಮಂಗಳವಾರ ಹೊಸ ಮನೆಯಲ್ಲಿ ಗೊಂದೋಳು ಪೂಜೆ ನಡೆಯುತ್ತಿದ್ದು, ಈ ವೇಳೆ
ಕನ್ಯಾನ ಗ್ರಾಮದ ನಂದರಬೆಟ್ಟು ಎಂಬಲ್ಲಿ ಅಣ್ಣ ತಮ್ಮನನ್ನು ಕೊಲೆ ಮಾಡಿದ ಘಟನೆ ಸಂಭವಿಸಿದೆ.ನಂದರಬೆಟ್ಟು ಬಾಳಪ್ಪ ನಾಯ್ಕ(35) ಮೃತಪಟ್ಟ ದುರ್ದೈವಿ. ನಂದರಬೆಟ್ಟು ಐತ್ತಪ್ಪ ನಾಯ್ಕ(40) ನೊಗದಿಂದ ಬಡಿದು ಬಾಳಪ್ಪ ನಾಯ್ಕ ಅವರನ್ನು ಕೊಲೆ ಮಾಡಿದ್ದಾನೆ. ಕಂಠಪೂರ್ತಿ ಕುಡಿದ ಮತ್ತಿನಿಂದ ಅಣ್ಣತಮ್ಮಂದಿರೊಳಗೆ ಜಗಳ ಆರಂಭವಾಗಿ ಕೊಲೆಯಲ್ಲಿ ಪ್ರಕರಣ ಅಂತ್ಯವಾಯಿತೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ವಿಟ್ಲ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಆರೋಪಿಯನ್ನು ವಶಕ್ಕೆ
ವಿಟ್ಲ: ಕನ್ಯಾನ ಗ್ರಾಮದಲ್ಲಿ ಆತ್ಮಹತ್ಯೆಗೈದ ಅಪ್ರಾಪ್ತ ಬಾಲಕಿ ಮನೆಗೆ ವಜ್ರ ದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಭೇಟಿ ನೀಡಿ, ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ ಅವರು ಬಂಧನವಾದ ವ್ಯಕ್ತಿಯ ತಾಯಿಯಿಂದ ಕುಟುಂಬಕ್ಕೆ ಒಂದು ರೀತಿಯ ತೊಂದರೆ ಬಂದಿದೆ. ಆರಕ್ಷಕರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬೇಧಿಸಬೇಕು. ಆತ್ಮಹತ್ಯೆ ಎಂಬಲ್ಲಿಗೆ ಮುಗಿದು ಹೋಗದೆ ಪ್ರಕರಣವನ್ನು ಸಿಐಡಿಗೆ ನೀಡಿ ಆರೋಪಿಗೆ ಕಠಿಣ ಶಿಕ್ಷೆ