“ಬಾಲವಿಕಾಸದಲ್ಲಿ ಲಿಟ್ಲ್ ಪರ್ಲ್ಸ್ ಫೆಸ್ಟ್ – 2023-24”

ವಿಟ್ಲ :ಮಾರ್ಚ್ 23: ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನರ್ಸರಿ ತರಗತಿಯ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ‘ಲಿಟ್ಲ್ ಪರ್ಲ್ಸ್ ಫೆಸ್ಟ್- 2023-24 ಜರುಗಿತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರಾದ ಪ್ರಹ್ಲಾದ್ ಶೆಟ್ಟಿ ಜೆ , ” ಮಾಣಿಯಂತಹ ಗ್ರಾಮೀಣ ಪ್ರದೇಶ ದಲ್ಲಿ ಕಡಿಮೆ ಖರ್ಚಿನಲ್ಲಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯವಸ್ಥಿತವಾದ ಶಿಕ್ಷಣವನ್ನು ಮಕ್ಕಳಿಗೆ ಒದಗಿಸಲಾಗುತ್ತಿದೆ. ಮಕ್ಕಳಿಗೆ ಅವರ ಜ್ಞಾನಾರ್ಜನೆಯಲ್ಲಿ ಯಾವುದೇ ಎಡರು ತೊಡರು ಬಾರದಂತೆ ಸುಸಜ್ಜಿತ ವ್ಯವಸ್ಥೆಯಲ್ಲಿ ಇನ್ನೂ ಹೆಚ್ಚಿನ ಸವಲತ್ತುಗಳ ಜೊತೆಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ವನ್ನು ಒದಗಿಸುವ ಆಶಯ ನಮ್ಮದು. ಇದಕ್ಕೆ ಎಲ್ಲಾ ಪೋಷಕರ ಸಹಕಾರ ಅತ್ಯಗತ್ಯ ” ಎಂದರು.

ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಅಧಿಕಾರಿ ರವೀಂದ್ರ ದರ್ಬೆ ಹಾಗೂ ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ ಶೆಟ್ಟಿ ಹಾಗೂ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಕಸ್ತೂರಿ ಪಿ ಶೆಟ್ಟಿ ಮಕ್ಕಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಕ್ಕಳ ಪೋಷಕರು ಶಾಲೆಯಲ್ಲಿ ಒದಗಿಸಲಾಗುತ್ತಿರುವ ಗುಣಮಟ್ಟದ ಶಿಕ್ಷಣದ ಬಗ್ಗೆ, ಶಾಲಾ ಸಿಬ್ಬಂದಿ ವರ್ಗ ನೀಡುತ್ತಿರುವ ಉತ್ತಮ ಸೇವೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.ಇದೇ ಸಂದರ್ಭದಲ್ಲಿ ನರ್ಸರಿ ತರಗತಿಯ
ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಮಕ್ಕಳ ಪೋಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ ವರ್ಗ, ಪೋಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.
ಶಾಲಾ ಶಿಕ್ಷಕಿ ಐಡಾ ಲೋಬೊ ಸ್ವಾಗತಿಸಿ, ಯಮುನಾ ವಂದಿಸಿ, ಹಂಸವೇಣಿ ಹಾಗೂ ಅಶ್ವಿನಿ ಪಿ. ಆರ್. ಕಾರ್ಯಕ್ರಮವನ್ನು ನಿರೂಪಿಸಿದರು.

Related Posts

Leave a Reply

Your email address will not be published.