ಉಪ್ಪಿನಂಗಡಿ : ರಾತ್ರೋ ರಾತ್ರಿ ಮಹಿಳೆಯ ಕತ್ತು ಹಿಸುಕಿ ಕೊಲೆ

ಮಹಿಳೆಯೋರ್ವರನ್ನು ಕತ್ತು ಹಿಸುಕಿ ಕೊಲೆಗೈದ ಘಟನೆ ಪೆರ್ನೆ ಗ್ರಾ.ಪಂ ವ್ಯಾಪ್ತಿಯ ಬಿಳಿಯೂರಿನ ದರ್ಖಾಸ್ ನಲ್ಲಿ ನಡೆದಿದೆ. ಕೊಲೆಯ ಬಗ್ಗೆ ಅಕ್ಕನ ಮಗನಾದ ಅಪ್ರಾಪ್ತ ಬಾಲಕನ ಮೇಲೆ ತೀವ್ರ ಸಂಶಯ ವ್ಯಕ್ತವಾಗಿದೆ.

ದರ್ಖಾಸ್ ನ ಹೇಮಾವತಿ ಮೃತ ಮಹಿಳೆಯಾಗಿದ್ದು, ಜೂನ್ 16 ರಂದು ಮಧ್ಯರಾತ್ರಿ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಮೂಡಿದ್ದರಿಂದ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದಾರೆ. ಈ ವೇಳೆ ಕತ್ತು ಹಿಸುಕಿ ಕೊಲೆಯಾಗಿದೆ ಎಂದು ಸಾಬಿತಾಗಿದೆ. ಅಕ್ಕನ ಮಗನ ಮೇಲೆ ಸಂಶಯ ವ್ಯಕ್ತವಾಗಿದ್ದು, ಆತನ ತಂದೆ ಶಂಕರ ಹಾಗೂ ಇನ್ನಿಬ್ಬರ ಪುತ್ರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

add - tandoor .

Related Posts

Leave a Reply

Your email address will not be published.