Home Archive by category Fresh News (Page 429)

ಆರು ಲಕ್ಷ ಹೆಕ್ಟೇರ್ ಭೂಮಿಯನ್ನುಡೀಮ್ಡ್ ಫಾರೆಸ್ಟ್‍ನಿಂದ ಮುಕ್ತ ಹೇಳಿಕೆ ಕೇವಲ ರಾಜಕೀಯ ಮಾತ್ರ : ರಮಾನಾಥ ರೈ

ರಾಜ್ಯದಲ್ಲಿ ಸುಮಾರು ಆರು ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಫಾರೆಸ್ಟ್‍ನಿಂದ ಮುಕ್ತಗೊಳಿಸುವುದಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರು ನೀಡಿರುವ ಹೇಳಿಕೆಗಳು ಕೇವಲ ರಾಜಕೀಯ ಮಾತ್ರ. ಆ ಬಗ್ಗೆ ಸುಪ್ರೀಂ ಕೋರ್ಟ್‍ನಿಂದ ಆದೇಶವಾಗಬೇಕಾಗಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿದ್ದಾರೆ. ಮಂಗಳೂರಿನ ಕಾಂಗ್ರೆಸ್

ಬೆಳ್ತಂಗಡಿ : ಕಾಡಾನೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ

ತಾಲೂಕಿನ ಅಣಿಯೂರು ಪೇಟೆಯಲ್ಲಿ ಸೋಮವಾರ ಬೆಳಗ್ಗೆ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಈ ಪ್ರದೆಶದಲ್ಲಿ ಕಳೆದ ಕೆಲವು ಸಮಯದಿಂದ ಒಂಟಿ ಸಲಗವೊಂದು ರಾತ್ರಿ ವೇಳೆ ಕೃಷಿ ನಾಶ ಮಾಡುತ್ತಿತ್ತು. ಇದೀಗ ಹಗಲು ಹೊತ್ತಿನಲ್ಲಿಯೇ ಪೇಟೆ ಬದಿಯಲ್ಲಿ ಕಾಡಾನೆ ಕಾಣಿಸಿಕೊಂಡಿರುವುದು ಜನರಲ್ಲಿ ಭಯ ಮೂಡಿಸಲು ಕಾರಣವಾಗಿದೆ. ನದಿಯಲ್ಲಿ ಕಾಡಾನೆ ತಿರುಗಾಡುತ್ತಿದ್ದು, ನದಿ ಬದಿಯ ತೋಟಗಳಿಗೆ ಹಾನಿಯುಂಟು ಮಾಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 

ಜೋಡುಕರೆ ಕಂಬಳ ಸಮಿತಿಯ ತಕರಾರು ಅರ್ಜಿ ವಿಚಾರಣೆ ಪೂರ್ಣ

ಪುತ್ತೂರು: ಕಂಬಳ ಕೂಟವನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರಾಣಿದಯಾ ಸಂಘದವರು ಸಲ್ಲಿಸಿರುವ ಅರ್ಜಿ ಮತ್ತು ಪ್ರಾಣಿದಯಾ ಸಂಘದವರ ಅರ್ಜಿಗೆ ಪ್ರತಿಯಾಗಿ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಮತ್ತಿತರರು ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ತೀರ್ಪು ಕಾಯ್ದಿರಿಸಿದೆ. ಕಂಬಳ ಕೂಟದಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿದೆ. ಆದ್ದರಿಂದ

ಉಚ್ಚಿಲ : ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ ಏಳು ಮಂದಿ ಮೀನುಗಾರರ ರಕ್ಷಣೆ

ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆಯಾಗಿದ್ದು, 7 ಮಂದಿ ಮೀನುಗಾರರನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಉಚ್ಚಿಲದಲ್ಲಿ ನಡೆದಿದೆ. ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಉಚ್ಚಿಲದ ನಿವಾಸಿ ವಿಮಲಾ ಸಿ ಪುತ್ರನ್ ಮಾಲಕತ್ವದ ಶ್ರೀ ಗಿರಿಜಾ ದೋಣಿಯು ಸೋಮವಾರ ಬೆಳಗ್ಗೆ ಸಮುದ್ರದಲ್ಲಿ ಮುಳುಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾದ ಘಟನೆ ನಡೆದಿದೆ. ಸೋಮವಾರ ಬೆಳಗಿನ ಜಾವ ಐದು ಗಂಟೆಯ ಸುಮಾರಿಗೆ ಉಚ್ಚಿಲದ ಶ್ರೀ ಗಿರಿಜಾ ದೋಣಿಯಲ್ಲಿ 7 ಮಂದಿ ಮೀನುಗಾರಿಕೆಗೆ

ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ ನಿರ್ವಾಹಕರಲ್ಲಿ ಕಿತ್ತಾಟ

ಉಡುಪಿ: ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ ನಿರ್ವಾಹಕರು ಬೆಳ್ಳಂ ಬೆಳಗ್ಗೆ ರೋಡಲ್ಲೇ ಕಿತ್ತಾಡಿಕೊಂಡ ಘಟನೆ ಉಡುಪಿ ಕಾಪು ಎಂಬಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗ್ತಾ ಇದೆ. ಇನ್ನು ಇಲ್ಲಿನ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಐದು ನಿಮಿಷಕ್ಕೊಂದು ಬಸ್ ಗಳು ಮಂಗಳೂರು ಕಡೆ ಪ್ರಯಾಣವನ್ನು ಮಾಡುತ್ತದೆ. ಅದರಲ್ಲೂ ಬೆಳಗ್ಗಿನ ಹೊತ್ತು ಶಾಲೆ ಕಾಲೇಜು‌ ಮತ್ತು ಉದ್ಯೋಗಕ್ಕೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಈ ವೇಳೆ

ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಬೆಳ್ಳಿಹಬ್ಬ ಮಹೋತ್ಸವ

ರಿಕ್ಷಾ ಚಾಲಕರು ಸಮಾಜದ ಮುಖ್ಯವಾಹಿನಿಯಲ್ಲಿರುವವರುನಾವು ರಿಕ್ಷಾ ಚಾಲಕರೆಂಬ ಕೀಳರಿಮೆ ಬೇಡ. ಜೀವನದಲ್ಲಿ ಮುಂದೆ ಬರಬೇಕಾದರೆ, ಯಶಸ್ಸು ಕಾಣಬೇಕಾದರೆ ದುಶ್ಚಟಗಳಿಂದ ದೂರವಿರಬೇಕು. ನಾವು ನಮ್ಮ ವೃತ್ತಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದಾಗ ತನ್ನಿಂದ ತಾನಾಗಿ ಸಮಾಜದ ಗೌರವ ಪ್ರಾಪ್ತಿಯಾಗುತ್ತದೆ. ಗುಣಕ್ಕೆ ಮತ್ತು ವೃತ್ತಿಗೆ ಎಂದೂ ಬಡತನವಿಲ್ಲ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಅವರು ಹೇಳಿದರು. ಪುತ್ತೂರಿನ

ತುಳುನಾಡ ದೈವರಾಧನಾ ರಕ್ಷಣಾ ಚಾವಡಿ ವಾರ್ಷಿಕೋತ್ಸವ

ಮೂಡುಬಿದಿರೆ : ದೈವರಾಧನೆ ತುಳುನಾಡಿನ ಪರಂಪರೆ, ನಾವು ದೈವ-ದೇವರನ್ನು ಆರಾಧಿಸುತ್ತೇವೆ ಇದು ಇಲ್ಲಿನ ಮೂಲ ನಿವಾಸಿಗಳ ಸಂಸ್ಕೃತಿ’ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು. ಅವರು ವಾಲ್ಪಾಡಿ ಮಾಡದಂಗಡಿ ಶಾಲಾ ವಠಾರದಲ್ಲಿ ನಡೆದ ತುಳುನಾಡ ದೈವರಾಧನೆ ರಕ್ಷಣಾ ಚಾವಡಿ ಮೂಡುಬಿದಿರೆ ವಲಯದ 5ನೇ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಕನ್ಯಾನ ಕಣಿಯೂರು, ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ಕಮರ್ಷಿಯಲ್ ದೃಷ್ಟಿಕೋನದಿಂದ

ನಾಳೆ ಮಧ್ಯರಾತ್ರಿ ಉಲ್ಕಾಪಾತ; ಬರಿಗಣ್ಣಿನಲ್ಲಿಯೇ ನೋಡಬಹುದು ಎಂದ ತಜ್ಞರು

ದೇಶದ ಜನರು ಡಿ. 13ರ ಮಧ್ಯರಾತ್ರಿ ಮತ್ತು ಡಿ. 14ರ ಮುಂಜಾನೆ ಆಕಾಶದಲ್ಲಿ ಸ್ಪಷ್ಟವಾಗಿ ಉಲ್ಕಾಪಾತ ನೋಡುಬಹುದಾಗಿದೆ. ಡಿ. 13ರ ಮಧ್ಯರಾತ್ರಿ 2 ಗಂಟೆಯಿಂದ 3 ಗಂಟೆ ಸಮಯಕ್ಕೆ ಉಲ್ಕಾಪಾತ ತನ್ನ ಉತ್ತುಂಗಕ್ಕೆ ತಲುಪಲಿದೆ. ಇದನ್ನು ನೋಡಲು ದೂರದರ್ಶಕದ ಆವಶ್ಯಕತೆ ಇಲ್ಲ. ಬರಿ ಕಣ್ಣಿನಿಂದ ಇದನ್ನು ವೀಕ್ಷಿಸಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ವರ್ಷ ಡಿ. 13ರ ಮಧ್ಯರಾತ್ರಿ 100 ಕ್ಕೂ ಹೆಚ್ಚು ಉಲ್ಕಾಪಾತಗಳು ಭೂಮಿಯ ಸಮೀಪ ಬರಲಿವೆ. ಮೋಡವಿಲ್ಲದೆ, ವಾತಾವರಣ

ಎಸ್ ಡಿ ಎಂ ಕಾಲೇಜು ಉಜಿರೆಯಲ್ಲಿ ವಿದ್ಯಾರ್ಥಿ ಸಂಘದ ಚಟುವಟಿಕೆಗಳಿಗೆ ಚಾಲನೆ

ಎಸ್ ಡಿ ಎಂ ಕಾಲೇಜು ಉಜಿರೆಯಲ್ಲಿ ವಿದ್ಯಾರ್ಥಿ ಸಂಘದ ಚಟುವಟಿಕೆಗಳಿಗೆ ಚಾಲನೆ ನಾಯಕನಾದವನು ಎಲ್ಲರನ್ನೂ ಒಳಗೊಂಡು ಮುನ್ನೆಡೆಯಬೇಕು. ಇಂದಿನ ಯುಗ ಸ್ಮಾರ್ಟ್ಯುಗವಾಗಿದ್ದು, ಹಾರ್ಡ್ ವರ್ಕ್ ಜೊತೆ ಸ್ಮಾರ್ಟ್ ವರ್ಕ್ ಮತ್ತು ಅವಕಾಶಗಳನ್ನು ಸರಿಯಾಗಿಬಳಸಿಕೊಂಡು ಮುನ್ನಡೆಯಿರಿ ಎಂದು ಜೆಸಿಐ ಸೆನೆಟರ್ ಸೌಜನ್ಯ ಹೆಗ್ಡೆ ಹೇಳಿದರು. ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ಸಂಘದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿಸಂಪನ್ಮೂಲ ವ್ಯಕ್ತಿಯಾಗಿ