ಉಡುಪಿಯ ಹಳೆ ಜೈಲಿನ ನೆಲಸಮಕ್ಕೆ ಆದೇಶ : ಕಾಂತಾರ ಚಿತ್ರೀಕರಣಗೊಂಡ ಸ್ವಾತಂತ್ರ್ಯ ಪೂರ್ವದ ಜೈಲು

ಉಡುಪಿ : ಸ್ವಾತಂತ್ರ ಪೂರ್ವದಲ್ಲಿ ನಿರ್ಮಾಣಗೊಂಡ ಸರಿಸುಮಾರು 117 ವರ್ಷಗಳ ಇತಿಹಾಸ ಇರುವ ಉಡುಪಿ ನಗರದ ಹಳೆ ಸಬ್‌ಜೈಲು ಇನ್ನಿಲ್ಲದಂತಾಗುವಂತಿದೆ. ಕಾಂತಾರ ಸಿನಿಮಾದ ಕೆಲ ಭಾಗಗಳು ಚಿತ್ರೀಕರಣಗೊಂಡ, ಉಡುಪಿಯ ಏಕೈಕ ಪಾರಂಪರಿಕ ಕಟ್ಟಡದ ನೆಲಸಮಕ್ಕೆ ಇದೀಗ ಆದೇಶ ನೀಡಲಾಗಿದೆ. ಹೊಸ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಪಾರಂಪರಿಕ ಜೈಲನ್ನು‌ ಕೆಡವಲು ಉಡುಪಿ ನಗರಸಭೆ ಮೂದಾಗಿರುವುದು, ಆರ್ಕಿಟೆಕ್ಟ್‌ಗಳು ಹಾಗೂ ಕಲಾವಿದರಿಂದ ಬಾರೀ ವಿರೋಧ ವ್ಯಕ್ತವಾಗುತ್ತಿದೆ. ಉಡುಪಿ, ಮಂಗಳೂರಿನ 12 ಕಲಾವಿದರು ಕಟ್ಟಡದ ಕಲಾಕೃತಿಗಳನ್ನು ರಚಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್(ಇಂಟ್ಯಾಕ್) ಮಂಗಳೂರು ಶಾಖೆಯು ಕಟ್ಟಡದ ರಚನೆಯ ದಾಖಲೀಕರಣ ಕಾರ್ಯ ಮಾಡುತ್ತಿದೆ. ಈ ಮೂಲಕ ಪರ್ಯಾಯವಾಗಿ ಮ್ಯೂಸಿಯಂ, ಪಾರಂಪರಿಕ ವಸ್ತು ಸಂಗ್ರಹಾಲಯ ಮಾಡಲು ಒತ್ತಾಯಿಸುತ್ತಿದ್ದಾರೆ. ಇನ್ನು ಉಡುಪಿ ನಾಗರೀಕರಿಂದಲೂ ಕಟ್ಟಡ ನೆಲಸಮಕ್ಕೆ ಬಾರೀ ವಿರೋಧ ವ್ಯಕ್ತವಾಗುತ್ತಿದೆ.

Related Posts

Leave a Reply

Your email address will not be published.