ಕಾರ್ಕಳದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಸಮ್ಮೇಳನ

ಕಾರ್ಕಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ವತಿಯಿಂದ ನಗರ ಸಮ್ಮೇಳನ ಜುಲೈ 2 ರಂದು ಕಾರ್ಕಳದ ವೇಣುಗೋಪಾಲ ಕೃಷ್ಣ ದೇವಸ್ಥಾನ ಕಾಬೆಟ್ಟುನಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಎಬಿವಿಪಿಯ ಹಿರಿಯ ಕಾರ್ಯಕರ್ತ ರಾಜೇಂದ್ರ ಅಮಿನ್ ಅವರು, ದೇಶ ಸೇವೆಗೆ ತಮ್ಮ ಸಮಯವನ್ನು ಮೀಸಲಿಡುವ ಮೂಲಕ ತಮ್ಮ ವಿದ್ಯಾರ್ಥಿ ಜೀವನವನ್ನು ಸಮರ್ಪಕವಾಗಿಸಿಕೊಳ್ಳಬೇಕೆಂದು ಹೇಳಿದರು.
ನಂತರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಸಹ ಕಾರ್ಯದರ್ಶಿಗಳಾದ ಹರ್ಷಿತ್ ಕೊಯ್ಲ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಇತಿಹಾಸ ಹಾಗೂ ರಾಷ್ಟ್ರದ ಪುನರುನ್ನತಿಯ ಚಿಂತನೆಯ ಬಗ್ಗೆ ತಿಳಿಸಿ, ಅಖಿಲ ಭಾರತೀಯ ವಿದ್ಯಾರ್ಥಿಯ ಪರಿಷತ್ 2023 – 24 ಸಾಲಿನ ಕಾರ್ಕಳ ತಾಲೂಕು ಹಾಗೂ ನಗರದ ಜವಾಬ್ದಾರಿ ಘೋಷಣೆ ಮಾಡಿದರು. ಇದರ ಪ್ರಕಾರ ತಾಲೂಕು ಸಂಚಾಲಕರಾಗಿ ಶ್ರೇಯಸ್ ಅಂಚನ್, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಆಗಿ ಸೌಮ್ಯ ಜಿ ನಾಯ್ಕ್, ನಗರ ಕಾರ್ಯದರ್ಶಿ ಆಗಿ ಅಕ್ಷಯ್ ಪೂಜಾರಿ, ನಗರ ವಿದ್ಯಾರ್ಥಿನಿ ಪ್ರಮುಖ್ ಆಗಿ ಮಾಲಾಶ್ರೀ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಕಳ ವೇಣುಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರಾದ ಸಂತೋಷ್ ಉಪಾಧ್ಯಯ, ತಾಲೂಕು ಸಂಚಾಲಕರಾದ ಶಿವರುದ್ರಪ್ಪ ಪಾಟೀಲ್, ನಗರ ಕಾರ್ಯದರ್ಶಿ ಧನುಷ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು, ಜಿಲ್ಲಾ ಸಂಚಾಲಕ ಯುಕೇಶ್ ಗೌಡ, ಹಿರಿಯ ಕಾರ್ಯಕರ್ತರಾದ ಮನೀಶ್ ಕುಲಾಲ್ ಹಾಗೂ ಇತರೆ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.
ಸೌಮ್ಯ ಜಿ. ನಾಯ್ಕ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಪ್ರಜ್ವಲ್ ರಾವ್ ವಂದಿಸಿದರು ಮತ್ತು ಶ್ರಾವ್ಯ ಜಿ. ನಾಯ್ಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಉದ್ಘಾಟನಾ ಸಮಾರಂಭ ಮುಗಿದ ನಂತರ ನಗರ ಮಟ್ಟದ ಚೆಸ್ ಸ್ಪರ್ಧೆಯನ್ನು ಏರ್ಪಡಿಸಲಾಯಿತು.