ಮಂಜೇಶ್ವರ: ಕೇರಳ ಗಡಿ ಭಾಗದಿಂದ ಪ್ರಯಾಣಿಕರನ್ನು ಹೇರಿಕೊಂಡು ಆಗಮಿಸುತ್ತಿರುವ ಬಸ್ಸುಗಳು ಕೇರಳ ಕರ್ನಾಟಕದ ಗಡಿಯಲ್ಲಿರುವ ಕರ್ನಾಟಕದಲ್ಲಿ ಪ್ರಯಾಣಿಕರನ್ನು ಇಳಿಸಿ ಟೋಲ್ ಗೇಟ್ ಪಕ್ಕದಲ್ಲೇ ನಿಲುಗಡೆಯನ್ನು ನೀಡುವುದನ್ನು ಪ್ರತಿಭಟಿಸಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಸ್ಥಳೀಯ ವ್ಯಾಪಾರಿಗಳ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದರು. ಎಲ್ಲಾ ಖಾಸಗಿ ಬಸ್ಸುಗಳು ಕೊರೊನ
ಮಂಜೇಶ್ವರ; ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯಲ್ಲಿರುವ ಎರಡು ಹಾಗೂ ನಾಲ್ಕನೇ ವಾರ್ಡನ್ನು ಸಂಪರ್ಕಿಸುವ ಕುಂಜತ್ತೂರು ಪದವು ರಸ್ತೆಯ ಇಬ್ಬಾಗದಲ್ಲೂ ತ್ಯಾಜ್ಯಗಳು ತುಂಬಿ ದುರ್ವಾಸನೆಯಿಂದ ಸಾರ್ವಜನಿಕರು ಮೂಗು ಮುಚ್ಚಿ ನಡೆಯುವ ಪರಿಸ್ಥಿತಿ ಬಂದೊದಗಿದೆ. ಸಾಂಕ್ರಾಮಿಕ ರೋಗದ ಭೀತಿಯು ಎದುರಾಗಿದೆ. ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಲು ಹರಸಾಹಸ ಪಡುತ್ತಿರುವ ಮಧ್ಯೆ ಸ್ಕೂಟರಿನಲ್ಲಿ ತಂದು ತ್ಯಾಜ್ಯ ಬಿಸಾಕಿದವನ ಮಾಹಿತಿಯನ್ನು ಸ್ಥಳೀಯರೊಬ್ಬರು ಮಾಜಿ ಮಂಜೇಶ್ವರ
ಮಂಜೇಶ್ವರ: ಕೇಂದ್ರ ಸರಕಾರವು ರೈಲ್ವೆ ಇಲಾಖೆಯನ್ನು ಖಾಸಗಿಕರಣಗೊಳಿಸುವುದನ್ನು ನಿಲ್ಲಿಸಿ, ಪ್ಯಾಸಂಜರ್ ರೈಲುಗಳನ್ನು ಪುನಃರಾರಂಬಿಸಬೇಕು. ಹೆಚ್ಚಿಸಿದ ರೈಲ್ವೆ ಪ್ಲಾಟ್ ಫಾರ್ಮ್ ಶುಲ್ಕ ರದ್ದುಗೊಳಿಸಬೇಕು, ಸೀಸನ್ ಟಿಕೆಟ್ ಮತ್ತು ಯಾತ್ರಾ ಸೌಲಭ್ಯಗಳನ್ನು ಪುನಃ ಸ್ಥಾಪಿಸಬೇಕು ಮೊದಲಾದ ಬೇಡಿಕೆಗಳನ್ನು ಒತ್ತಾಯಿಸಿ ಎಐಟಿಯುಸಿ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮಂಜೇಶ್ವರ ರೈಲ್ವೆ ಸ್ಟೇಷನ್‌ಗೆ ಮಾರ್ಚ್ ಮತ್ತು ಧರಣಿ ನಡೆಯಿತು. ಎಐಟಿಯುಸಿ ಜಿಲ್ಲಾ ಕೋಶಾಧಿಕಾರಿ ಬಿ.ವಿ
ಮಂಜೇಶ್ವರ: ಕೇಂದ್ರ ಸರ್ಕಾರ 15 ವರ್ಷಗಳ ಹಿಂದಿನ ವಾಹನಗಳನ್ನು ಗುಜುರಿಗೆ ಹಾಕಬೇಕೆಂಬ ಸರಕಾರದ ತೀರ್ಮಾನ ವನ್ನು ಪ್ರತಿಭಟಿಸಿ ರಿಕ್ಷಾ ಚಾಲಕರ ಯೂನಿಯನ್ citu ಬಂದ್ಯೋಡ್ ಅಂಚೆ ಕಛೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿತು. Aiks ರಾಜ್ಯ ಸಮಿತಿ ಸದಸ್ಯರಾದ ಕಾಂ ಕೆ .ಆರ್ ಜಯಾನಂದ ಧರಣಿಗೆ ಚಾಲನೆ ನೀಡಿ ಮಾತನಾಡಿದರು. ಜನವಿರೋಧಿಯಾಗಿರುವ ಕೇಂದ್ರ ಸರಕಾರದ ನಿಲುವಿನ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ. ದುಡಿದು ಜೀವಿಸುತ್ತಿರುವ ಜೀವಗಳ ಬಾಳಿಗೆ
ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವವರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಿದ ಕರ್ನಾಟಕ ಸರ್ಕಾರದ ಆದೇಶದ ವಿರುದ್ಧ ತಲಪಾಡಿ ಗಡಿಯಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು ಇಂದು ಕೂಡ ಮಂಜೇಶ್ವರ ಪಂಚಾಯತ್ ಯುಡಿವೈಎಫ್ ಈ ಸಮಿತಿಯ ನೇತೃತ್ವದಲ್ಲಿ ಕಪ್ಪು ಮಾಸ್ಕ್ ಧರಿಸಿ ಪ್ರತಿಭಟನೆ ನಡೆಯಿತು. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ತಲಪಾಡಿ ಗಡಿ ಪ್ರದೇಶಕ್ಕೆ ಭೇಟಿ ನೀಡುವ ಮಾಹಿತಿಯಂತೆ ಕೇರಳ ಭಾಗದಲ್ಲಿ ಪ್ರತಿಭಟನೆ ಸಜ್ಜುಗೊಂಡಿತ್ತು.
ತಲಪಾಡಿ ಗಡಿ ಬಂದ್ ವಿರೋಧಿಸಿ ಕೇರಳಿಗರು ಗಡಿಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.ಕೇರಳ ಭಾಗದ ರಸ್ತೆ ಬಂದ್ ಮಾಡಿ ಕೇರಳಿಗರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಕೇರಳಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ನಿಂತು ಪ್ರತಿಭಟನೆ ನಡೆಸಿದ್ರು. ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ವೇಳೆ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ, ನೆಗೆಟಿವ್ ರಿಪೋರ್ಟ್ ಕಡ್ಡಾಯ ಆದೇಶ ಹಿಂಪಡೆಯಲು ಆಗ್ರಹಿಸಿದರು.ಸದ್ಯ ತಲಪಾಡಿ ಗಡಿಯಲ್ಲಿ ಕೇರಳಕ್ಕೆ ತೆರಳಲು ವಾಹನಗಳು ಸಾಲಾಗಿ
ಮಂಜೇಶ್ವರ: ಎಲ್ಲಾ ರೀತಿಯ ದಾಖಲೆಗಳನ್ನು ಹಾಜರು ಪಡಿಸಿದರೂ ಇಲ್ಲ ಸಲ್ಲದ ಕಾರಣಗಳನ್ನು ಮುಂದಿಟ್ಟು ಜಾತಿ ಪ್ರಮಾಣ ಪತ್ರ ನೀಡಲು ವಿಳಂಭ ಮಾಡಿದ ಕುಂಜತ್ತೂರು ವಿಲೇಜ್ ಅಧಿಕಾರಿಯ ತಾತ್ಕಾಲಿಕ ಉಸ್ತುವಾರಿಯಲ್ಲಿರುವ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಪಿಐ ಪಕ್ಷದ ಅಧೀನತೆಯಲ್ಲಿರುವ ಎಐವೈಎಫ್ ಸಂಘಟನೆಯ ಮಂಜೇಶ್ವರ ವಲಯಾಧ್ಯಕ್ಷ ದಯಾಕರ ಹಾಗೂ ಸಾಮಾಜಿಕ ಕಾರ್ಯಕರ್ತ ಇಬ್ರಾಹಿಂ ಕುಂತೂರು, ಮಂಜೇಶ್ವರ ಗ್ರಾ. ಪಂ. ಉಪಾಧ್ಯಕ್ಷ ಸಿದ್ದೀಖ್, ಕಾಂಗ್ರೆಸ್
ಮಂಜೇಶ್ವರ: ಮಂಜೇಶ್ವರ ವರ್ಕಾಡಿ ಪಂಚಾಯತಿಗೆ ಒಳಪಟ್ಟ ಆನೆಕ್ಕಲ್ಲು ಕತ್ತರಕೋಡಿ ಬೋರ್ಕಳ ಮಾರ್ಗವಾಗಿ ಉಪ್ಪಳಕ್ಕೆ ಹೋಗುವ ರಸ್ತೆಯ ಸ್ಥಿತಿ ತುಂಬಾ ಶೋಚನೀಯವಾಗಿದೆ. ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ಹಾಗೂ ನೂರಾರು ಕಾಲ್ನಡಿಗೆ ಯಾತ್ರಿಕರು ಆಶ್ರಯಿಸುವ ಏಕೈಕ ರಸ್ತೆಯಾಗಿದೆ. ಜನರು ನಡೆದು ಹೋಗಲು ಅಥವಾ ತುರ್ತು ಸಮಯಗಳಲ್ಲಿ ರೋಗಿಗಳನ್ನು ಕೊಂಡೊಯ್ಯಲು ಬೇರೆ ದಾರಿಯಿಲ್ಲ ಏಕೆಂದರೆ ಈ ಮಳೆಗಾಲದಲ್ಲಿ ಜನರು ನಡೆಯುವುದು ತುಂಬಾ ಕಷ್ಟದಿಂದ ಹಾಗೂ ವಾಹನಗಳ ಸಂಚಾರವೂ
ಮಂಜೇಶ್ವರ : ಕೇಂದ್ರ ಸರಕಾರದ ದುರಾಡಳಿತದಿಂದಾಗಿ ದೇಶ ತತ್ತರಿಸಿ ಹೋಗಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯು ನರೇಂದ್ರ ಮೋದಿಯವರ ಅಚ್ಚೇ ದಿನ್ ಕೊಡುಗೆಯಾಗಿದೆ. ಈ ದೇಶದಿಂದ ಮೋದಿ ಆಡಳಿತವನ್ನು ಕಿತ್ತೆಸೆಯುವ ಮೂಲಕ ದೇಶವನ್ನು ರಕ್ಷಿಸುವ ಕೆಲಸ ಆಗಲೇಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಹೇಳಿದ್ದಾರೆ. ಅವರು ಯೂತ್ ಕಾಂಗ್ರೆಸ್ ಮಂಜೇಶ್ವರ ಅಸೆಂಬ್ಲಿ ಸಮಿತಿಯ ವತಿಯಿಂದ