HomeFresh Newsಹಾಡುಗಳಲ್ಲಿ ಸ್ವಂತಿಕೆ ಮೂಡಿಸಿದ್ದ ಗಾಯಕಿ ಸುಮನ್ ಕಲ್ಯಾಣ್‍ಪುರ್ ನಿಧನ

ಹಾಡುಗಳಲ್ಲಿ ಸ್ವಂತಿಕೆ ಮೂಡಿಸಿದ್ದ ಗಾಯಕಿ ಸುಮನ್ ಕಲ್ಯಾಣ್‍ಪುರ್ ನಿಧನ

ಲತಾ ಮಂಗೇಶ್ಕರ್ ಸಿಗದಿದ್ದಾಗ ಬದಲಿ ಲತಾ ಎಂದೇ ಖ್ಯಾತಿ ಗಳಿಸಿದ್ದ, ಹಾಡುಗಳಲ್ಲಿ ಸ್ವಂತಿಕೆ ಮೂಡಿಸಿದ್ದ ಗಾಯಕಿ ಸುಮನ್ ಕಲ್ಯಾಣ್‍ಪುರ್ ನಿಧನರಾದರು
ಮೇ ಕೊನೆಯ ದಿನದ ಕೊನೆಯ ರಾತ್ರಿ ಕೊನೆಯುಸಿರು ಎಳೆಯುವಾಗ ಅವರಿಗೆ ಎಂಬತ್ತೊಂಬತ್ತು ವರುಷ ಪ್ರಾಯವಾಗಿತ್ತು. 1954ರಲ್ಲಿ ಶುಕ್ರಚಿ ಚಾಂದ್ನಿ, ಮಂಗು ಚಿತ್ರಗಳ ಮೂಲಕ ಅವರು ಹಿಂದಿ ಚಿತ್ರರಂಗದ ಹಿನ್ನೆಲೆ ಗಾಯಕಿಯಾಗಿ ಮೂಡಿ ಬಂದರು. ಮೊಹಮ್ಮದ್ ರಫಿ ಜೊತೆಗೆ ಹಲವು ನೆನಪುಳಿಯುವ ಹಾಡುಗಳನ್ನು ಅವರು ನೀಡಿದ್ದಾರೆ. ಎನ್‍ಸಿಪಿ ನಾಯಕ ಶರದ್ ಪವಾರ್, ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವೀಸ್, ಚಿತ್ರರಂಗದ ಹಲವರು ಸುಮನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


ಕುಂದಾಪುರ ಮೂಲದ ತಂದೆ ಬ್ರಿಟಿಷ್ ಸರಕಾರೀ ನೌಕರಿಯಲ್ಲಿ ಈಗಿನ ಬಾಂಗ್ಲಾದೇಶದ ಡಾಕಾದಲ್ಲಿ ಇದ್ದುದರಿಂದ ಸುಮನ್ ಡಾಕಾದಲ್ಲೇ 1937ರ ಜನವರಿ 28ರಂದು ಹುಟ್ಟಿದರು. ಹಾಗಾಗಿ ಅವರು ಬಂಗಾಳಿಯೆಂದೇ ಗುರುತಿಸಲ್ಪಟ್ಟಿದ್ದರು. ಮುಂದೆ 1958ರಲ್ಲಿ ರಮಾನಂದ ಕಲ್ಯಾಣ್‍ಪುರ್ ಜೊತೆ ಮದುವೆ ನಡೆಯಿತು; ಸಾರಸ್ವತ ಊರು ಕೊಂಡಿ. ಸಂಗೀತದ ಇತರ ಪ್ರಕಾರಗಳಲ್ಲೂ ಹಡಿರುವ ಸುಮನ್ ಚಿತ್ರಕಲೆಯಲ್ಲೂ ಪರಿಣಿತಿ ಪಡೆದಿದ್ದರು. ಮಗಳು ಚಾರು ಅಗ್ನಿಯವರನ್ನು ಗಾಯಕಿ ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments