ಸಾಮಾಜಿಕ ಜಾಲ ತಾಣ ತಾರೆ ಮಾನಸಿ ಶವವಾಗಿ ಪತ್ತೆಯಾಗಿದ್ದು, ಏಳು ಲಕ್ಷ ವರದಕ್ಷಿಣೆ ಕೊಟ್ಟರೂ ಮಗಳು ವರದಕ್ಷಿಣೆಗಾಗಿ ಕೊಲ್ಲಲ್ಪಟ್ಟಳು ಎಂದು ಮನೆಯವರು ಶೋಕಿಸಿದ್ದಾರೆ.
ಕಾನ್ಪುರದ ಮಾನಸಿ ಜಾಲ ತಾಣ ತಾರೆ. 2024ರಲ್ಲಿ ಲಕ್ನೋದ ಸಾಗರ್ ರಜಪೂತ್ ಜೊತೆಗೆ ಮದುವೆಯಾಗಿತ್ತು. ಗಂಡನ ಮನೆಯಲ್ಲಿ ಈಗ ಮಾನಸಿ ಹೆಣವಾಗಿದ್ದಾಳೆ. ಮದುವೆಯ ವೇಳೆ ಏಳು ಲಕ್ಷ ವರದಕ್ಷಿಣೆ ಕೊಟ್ಟಿದ್ದುದಾಗಿಯೂ, ಅವರು ಕೇಳಿದ್ದ ಕಾರು ಕೊಟ್ಟಿರಲಿಲ್ಲವೆಂದೂ, ಮಗಳನ್ನು ವರದಕ್ಚಿಣೆಗೆ ಕೊಂದಿದ್ದಾರೆ ಎಂದು ಮಾನಸಿಯ ಹೆತ್ತವರು ಹೇಳಿದ್ದಾರೆ. ಪೋಲೀಸರಿಗೆ ಅದೇ ರೀತಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಮಾನಸಿಯಂತೆಯೇ ಗಂಡ ಸಾಗರ್ ಕೂಡ ಜಾಲ ತಾಣಗಳಲ್ಲಿ ಮೆರೆದಿದ್ದ. ಇನ್ಸ್ಟಾಗ್ರಾಮ್ನಲ್ಲಿ ಆತನು ಎಂಟು ಲಕ್ಷ ಹಿಂಬಾಲಕರನ್ನು ಹೊಂದಿದ್ದ. ಮದುವೆಯ ವೇಳೆ ಹಣ ಮತ್ತು ನಾನಾ ವಸ್ತುಗಳನ್ನು ನೀಡಿದ್ದರೂ ಸಾಗರ್ ಮನೆಯವರು ತೃಪ್ತರಾಗಿಲ್ಲ ಎಂದು ದೂರಲಾಗಿದೆ. ಸಾಕಷ್ಟು ವರದಕ್ಷಿಣೆ ತಂದಿಲ್ಲವೆಂದು ಗಂಡನ ಮನೆಯವರು ಅವಮಾನಿಸುತ್ತಿದ್ದಾರೆ ಎಂದು ಮಾನಸಿ ದೂರಿದ್ದುದು ತಿಳಿದು ಬಂದಿದೆ.
ಮಾನಸಿಯ ಹೆತ್ತವರು ಕೊಟ್ಟ ದೂರಿನಂತೆ ಆಕೆಯ ಗಂಡ ಸಾಗರ್, ಮಾವ ರಾಜೇಶ್, ಭಾವ ಅನು, ನಾದಿನಿಯರಾದ ಬರ್ಕಾ ಹಾಗೂ ಚಾಂದ್ನಿ, ಗಂಡನ ಸೋದರತ್ತೆ ಆಶಾರ ಮೇಲೆ ಎಫ್ಐಆರ್ ಆಗಿದೆ. ಸಾಗರ್ ರಜಪೂತ್ರನ್ನು ವಶಕ್ಕೆ ಪಡೆದು ಪೋಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕೊಟ್ಟದ್ದು ಏಳು ಲಕ್ಷ ರೂಪಾಯಿ ವರದಕ್ಷಿಣೆ;ಅವರು ಬಯಸಿದರು ಮೇಲೊಂದು ಕಾರು ;ನಡುವೆ ಶವವಾಗಿ ಉರುಳಿದಳು ಮಾನಸಿ
RELATED ARTICLES
