ಸಂಪೂರ್ಣವಾಗಿ ಹದಗೆಟ್ಟಿರುವ ಚಾಮರಾಜನಗರ ಹೆದ್ದಾರಿ : ರಸ್ತೆಯ ಗುಂಡಿ ಮುಚ್ಚುವಂತೆ ಒತ್ತಾಯಿಸಿ ಮನವಿ
ಚಾಮರಾಜನಗರ ಹೆದ್ದಾರಿಯು ಹದಗೆಟ್ಟುಹೋಗಿದ್ದ ಕುರಿತು ಸವಿವಿಸ್ತಾರವಾಗಿ ಸುದ್ದಿಯನ್ನ ಪ್ತಸಾರ ಮಾಡಲಾಗಿತ್ತು. ಸುದ್ದಿ ಬಿತ್ತರದ ಬೆನ್ನಲ್ಲೇ ಕರುನಾಡು ಯುವಶಕ್ತಿ ಸಂಘಟನಾ ಸದಸ್ಯರು ತಾಲೂಕು ಅಧ್ಯಕ್ಷ ಮುನೀರ್ ಪಾಷ ಅವರೊಂದಿಗೆ ಲೋಕೋಪಯೋಗಿ ಇಲಾಖೆಗೆ ತೆರಳಿ ರಸ್ತೆಯಲ್ಲಿನ ಗುಂಡಿಗಳನ್ನ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷರು ಈಶ್ವರ್ ಮಾತನಾಡಿದ ರಸ್ತೆಯ ಗುಂಡಿ ಮುಚ್ಚಲು ರಾಹುಲ್ ಗಾಂಧಿ, ಮೋದಿ, ಆಮಿತ್ ಶಾ ಅವರೇ ಬರಬೇಕಾ ಎಂದು ಪ್ರಶ್ನಿಸಿದ್ದ ಅವರು, ಆ ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲು ಹರಸಾಹಸ ಪಡುತಿದ್ದಾರೆ. ಇನ್ನು ಒಂದು ವಾರದಲ್ಲಿ ರಸ್ತೆ ಸರಿಪಡಿಸಬೇಕು ಇಲ್ಲವಾದಲ್ಲಿ ನಿಮ್ಮ ಕಚೇರಿ ಮುಂಭಾಗ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
ಇಂದೆ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಮುನೀರ್ ಪಾಷಾ, ಶಿವಕುಮಾರ್ ಜಿಲ್ಲಾ ಯುವ ಘಟಕದ ಅಧ್ಯಕ್ಷ, ಅನ್ವರ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ, ರಹಮತ್ ಉಲ್ಲಾಖಾನ್ ಮೊದಲಾದವರು ಹಾಜರಿದ್ದರು.