ಡೆತ್ ನೋಟ್ ಬರೆದಿಟ್ಟು ಬಾಲಕ ಆತ್ಮಹತ್ಯೆ

ಹತ್ತನೇ ತರಗತಿ ಬಾಲಕನೋರ್ವ “ನಾನು ಒತ್ತಡದಲ್ಲಿದ್ದೇನೆ ನನ್ನನ್ನು ಕ್ಷಮಿಸಿ ತಂದೆ ತಾಯಿ ಹಾಗೂ ಕೋಚ್ ಎಂಬುದಾಗಿ ಆಂಗ್ಲ ಬಾಷೆಯಲ್ಲಿ ಡೆತ್ ನೋಟ್ ಬರೆದಿಟ್ಟು ನಂದಿಕೂರು ಸಮೀಪ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮೃತ ಬಾಲಕ ಬೆಳ್ಮಣ್ ಜಂತ್ರ ಸದಾಶಿವ ಆಚಾರ್ಯರ ಪುತ್ರ ಆದರ್ಶ್ ಆಚಾರ್ಯ(17), ನಾಲ್ವರು ಮಕ್ಕಳಲ್ಲಿ ಕೊನೆಯವನಾಗಿದ್ದ ಈತ ಸೂಡಾ ಸರ್ಕಾರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ, ಕಲಿಕೆಯಲ್ಲಿ ತರಗತಿಯಲ್ಲೇ ಪ್ರಥಮ ಸಾಲಿನಲ್ಲಿದ್ದ ಈತ ಕ್ರಿಕೆಟ್ ಕೋಚಿಂಗ್ ಕೂಡಾ ಪಡೆದುಕೊಳ್ಳುತ್ತಿದ್ದ ಈತನಿಗೆ ಒತ್ತಡ ಏನು ಎಂಬುದೇ ಯಜ್ಷಪ್ರಶ್ನೆ. ಈತನ ದೇಹ ರೈಲಿ ನಡಿಗೆ ಬಿದ್ದು ಛಿದ್ರಗೊಂಡಿದ್ದು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
