ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಆರಂಭವಾದ ಸರಕಾರಗಳ ಕೃತಕ ಉಪಗ್ರಹಗಳ ಶಕೆಯು ಇಂದು ಕಾಸಗಿ ವಾಣಿಜ್ಯ ಆಗಿದೆ.

ಸೋವಿಯತ್ ಯೂನಿಯನ್, ಅಮೆರಿಕ ಸಂಯುಕ್ತ ಸಂಸ್ಥಾನದ ಬೆನ್ನಿಗೆ ಭಾರತ ಸಹಿತ ಹಲವು ದೇಶಗಳು ಸಾರ್ವಜನಿಕ ಹಿತಾಸಕ್ತಿಯ ಉಪಗ್ರಹಗಳನ್ನು ಕಕ್ಷೆಗೆ ಏರಿಸತೊಡಗಿದವು. ಈಗ ವಾಣಿಜ್ಯ ಉದ್ದೇಶದ್ದು ಮೇಲುಗೈ, ಹಾಗಾಗಿ ಬಾಹ್ಯಾಕಾಶವು ಈಗ ಕಾಸಗಿ ವಲಯವಾಗಿದೆ.

ಸ್ಪೇಸ್ ಎಕ್ಸ್ ಸ್ಪೇಸ್ ಸಾಮ್ರಾಟ ಆಗಿದೆ. ಅದರ ಉಪಗ್ರಹಗಳ ಸಂಖ್ಯೆಯು ಎರಡನೆಯ ಸ್ಥಾನದ ಕಂಪೆನಿಗಿಂತ ಹದಿನಾರು ಪಟ್ಟು ಹೆಚ್ಚು. ಕಾಸಗಿ ವಾಣಿಜ್ಯ ಉದ್ದೇಶದೆದುರು ಸಾರ್ವಜನಿಕ ಹಿತಾಸಕ್ತಿಯ ಉಪಗ್ರಹಗಳ ಪ್ರಮಾಣ ೧೨ಕ್ಕೆ ೧ ಆಗಿದೆ.

ಕೃತಕ ಉಪಗ್ರಹ ವಿಷಯದಲ್ಲಿ ಮೊದಲ ಹತ್ತು ಸ್ಥಾನ ಹಿಡಿದಿರುವ ಸಂಸ್ಥೆಗಳು ಹಾಗೂ ಅವುಗಳ ಉಪಗ್ರಹಗಳ ಸಂಖ್ಯೆ ಕೆಳಗಿನಂತೆ ಇದೆ.

ಸ್ಪೇಸ್ ಎಕ್ಸ್ ೧೦,೨೬೨, ಒನ್ ವೆಬ್ ೨೩೨, ನ್ಯಾಶನಲ್ ರೀಕಾನೈಸೆನ್ಸ್ ಆಫೀಸ್ ೨೮೫, ಯುಎಸ್‌ಎ ಮಿಲಿಟರಿ ೨೪೪, ಚೀನೀ ಮಿಲಿಟರಿ ೧೬೮, ಪ್ಲಾನೆಟ್ ಲ್ಯಾಬ್ ೧೪೪, ರಶಿಯಾ ಮಿಲಿಟರಿ ೧೦೭, ನಾಸಾ ೯೦, ಇರಿಡಿಯಂ ೮೦, ಗ್ಲೋಬಲ್ ಸ್ಟಾರ್ ೨೬.
