HomeFresh Newsಕಬಡ್ಡಿ ವಿಶ್ವಕಪ್ ಚಾಂಪಿಯನ್ ತಂಡದ ಆಟಗಾತಿ೯ ಧನಲಕ್ಷ್ಮೀ ಪೂಜಾರಿಗೆ ಆಳ್ವಾಸ್ ನಲ್ಲಿ ಅಭಿನಂದನೆ

ಕಬಡ್ಡಿ ವಿಶ್ವಕಪ್ ಚಾಂಪಿಯನ್ ತಂಡದ ಆಟಗಾತಿ೯ ಧನಲಕ್ಷ್ಮೀ ಪೂಜಾರಿಗೆ ಆಳ್ವಾಸ್ ನಲ್ಲಿ ಅಭಿನಂದನೆ

ಮೂಡುಬಿದಿರೆ: ಕಬಡ್ಡಿ ವಿಶ್ವಕಪ್ ಚಾಂಪಿಯನ್ ತಂಡದ ಆಟಗಾರ್ತಿ, ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಧನಲಕ್ಷ್ಮಿ ಪೂಜಾರಿಯವರಿಗೆ ಮಂಗಳೂರು ಹಾಗೂ ಮೂಡುಬಿದಿರೆಯಲ್ಲಿ ಶನಿವಾರ ಭವ್ಯವಾದ ಸ್ವಾಗತ ಕೋರಲಾಯಿತು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ದ.ಕ ಜಿಲ್ಲಾ ಕಬಡ್ಡಿ ಅಸೋಶಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ, ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ಸ್ವಾಗತಿಸಿ, ಅಭಿನಂದಿಸಿದರು.

ಬಳಿಕ ಎಡಪದವಿನಲ್ಲಿ ವಿವೇಕಾನಂದ ಪಿಯು ಕಾಲೇಜು ವತಿಯಿಂದ ಅಭಿನಂದಿಸಲಾಯಿತು.

ಮೂಡುಬಿದಿರೆ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಕ್ಯಾಂಪಸ್‌ನಲ್ಲಿ ಧನಲಕ್ಷ್ಮೀ ಅವರನ್ನು ಸ್ವಾಗತಿಸಿ, ಗೌರವಿಸಲಾಯಿತು. ಆ ಬಳಿಕ ಮೂಡುಬಿದಿರೆ ಸ್ವರಾಜ್ಯ ಮೈದಾನ ಬಳಿ ಇರುವ ಆಳ್ವಾಸ್ ಕಾರ್ಯಾಲಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದರು.

ಈ ಸಂದರ್ಭ ಮೂಡುಬಿದಿರೆ ಬಿಲ್ಲವ ಸಂಘದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ, ಕಾರ್ಯದರ್ಶಿ ಗಿರೀಶ್ ಕುಮಾರ್ ಹಂಡೇಲು, ಉಪಾಧ್ಯಕ್ಷರಾದ ರವೀಂದ್ರ ಕರ್ಕೇರ, ಕೋಶಧಿಕಾರಿ ಜಗದೀಶ್ ಪೂಜಾರಿ ಸಹಿತ ಪದಾಧಿಕಾರಿಗಳು, ಆಳ್ವಾಸ್ ಕಬಡ್ಡಿ ಕೋಚ್ ಹಂಸವತಿ, ದೈಹಿಕ ಶಿಕ್ಷಣ ನಿರ್ದೇಶಕರು, ಆಳ್ವಾಸ್ ಕ್ರೀಡಾಪಟುಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments