HomeUncategorizedಆನೆಗುಂದಿಶ್ರೀಗಳವರ ಪಟ್ಟಾಭಿಷೇಕ ವರ್ಧಂತಿ ಮೇ 12ರಂದು – ಚಂಡಿಕಾ ಯಾಗ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಆನೆಗುಂದಿಶ್ರೀಗಳವರ ಪಟ್ಟಾಭಿಷೇಕ ವರ್ಧಂತಿ ಮೇ 12ರಂದು – ಚಂಡಿಕಾ ಯಾಗ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಪಡುಕುತ್ಯಾರು:ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 16ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ವರ್ಧಂತ್ಯುತ್ಸವವು ಇದೇ ಬರುವ 2026ರ ಮೇ 12ರಂದು ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ಭಕ್ತಿಭಾವಪೂರ್ಣವಾಗಿ ನಡೆಯಲಿದೆ.

ವರ್ಧಂತಿ ಉತ್ಸವದ ಅಂಗವಾಗಿ ಸಾಮೂಹಿಕ ಚಂಡಿಕಾ ಯಾಗ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆ, ವಾಸ್ತುಶಿಲ್ಪ ಮತ್ತು ಶಿಲ್ಪಕಲೆ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಆನೆಗುಂದಿಶ್ರೀ ಪ್ರಶಸ್ತಿ ವಿತರಣೆ ಹಾಗೂ ಯುವ ಶಿಲ್ಪಿಗಳಿಗೆ ಅಭಿನಂದನಾ ಕಾರ್ಯಕ್ರಮಗಳು ನಡೆಯಲಿವೆ.

ಅಂದು ಬೆಳಿಗ್ಗೆ ಕಟಪಾಡಿಯ ಶ್ರೀ ಮಹಾಸಂಸ್ಥಾನದಲ್ಲಿ ಜಗದ್ಗುರುಗಳವರಿಂದ ಪಟ್ಟಾಭಿಷೇಕ ವರ್ಧಂತಿಗೆ ಸಂಬಂಧಿಸಿದ ವೈದಿಕ ವಿಧಿವಿಧಾನಗಳು ನೆರವೇರಲಿವೆ. ಶ್ರೀಕರಾರ್ಚಿತ ದೇವತಾ ಪೂಜೆಯ ಬಳಿಕ, ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನದಲ್ಲಿ ಪೂಜೆ ನಡೆಯಲಿದೆ. ನಂತರ ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗಶಾಲೆಯಲ್ಲಿ ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ ಹಾಗೂ ಸಾಮೂಹಿಕ ಶ್ರೀ ಚಂಡಿಕಾ ಯಾಗ ಪೂರ್ಣಾಹುತಿ ನಡೆಯಲಿದೆ.

ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಜಗದ್ಗುರುಗಳವರ ಪಾದಪೂಜೆ ಬಳಿಕ, ಮಹಾಸಂಸ್ಥಾನದ ಪ್ರಥಮ ವಿಶ್ವಸ್ಥರಾಗಿರುವ ದೇವಸ್ಥಾನಗಳ ಧರ್ಮದರ್ಶಿಗಳಿಂದ ಆಯಾ ದೇವಸ್ಥಾನಗಳ ವಾರ್ಷಿಕ ಗುರುಕಾಣಿಕೆ ಸಮರ್ಪಣೆ ಮತ್ತು ಫಲ ನ್ಯಾಸ ಕಾರ್ಯಕ್ರಮಗಳು ವಾಡಿಕೆಯಂತೆ ನಡೆಯಲಿವೆ.

ಇದೇ ಸಂದರ್ಭದಲ್ಲಿ ಜಗದ್ಗುರುಗಳವರ 50ನೇ ಜನ್ಮವರ್ಧಂತಿ ವರ್ಷಾಚರಣೆಯ ಅಂಗವಾಗಿ ಒಂದು ವರ್ಷದ ಕಾಲ ನಡೆಯಲಿರುವ ವಿವಿಧ ಮಹತ್ವದ ಕಾರ್ಯಕ್ರಮಗಳಿಗೆ ಔಪಚಾರಿಕ ಚಾಲನೆ ನೀಡಲಾಗುವುದು. ಕುಲಗುರು ಪೀಠ ಜಾಗೃತಿ ಹಾಗೂ ಸಾಂಸ್ಕೃತಿಕ ಪಂಚಪ್ರಬೋಧನ ಸಂಕಲ್ಪದ ‘ಸುವರ್ಣ ಸಂಕಲ್ಪ ಅಭಿಯಾನ’ ಪ್ರಾರಂಭೋತ್ಸವವೂ ನಡೆಯಲಿದೆ.

ಪಡುಕುತ್ಯಾರು ಸಮೀಪದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಸರಸ್ವತೀ ಹೌಸಿಂಗ್ ಸೊಸೈಟಿ ಯೋಜನೆಯ ಲೋಕಾರ್ಪಣೆಯೂ ಇದೇ ಸಂದರ್ಭದಲ್ಲಿ ನೆರವೇರಲಿದೆ.

ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಚಾಳುಕ್ಯ ಶಿಲ್ಪಿ ಲಿಪಿಕಾರ ಶ್ರೀ ಅಕ್ಷರಮೇರು ದಾಮೋದರಾಚಾರಿ ಸಾಹಿತ್ಯ ಸರಸ್ವತೀ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ:
ಈ. ಭೀಮಸೇನ ಬಡಿಗೇರ, ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ, ವಿದ್ಯಾನಗರ, ಹುಬ್ಬಳ್ಳಿ

ಮಹಾಶಿಲ್ಪಿ ಶ್ರೀ ಗುಂಡನ್ ಅನಿವಾರಿತಾಚಾರಿ ತ್ರಿಭುವನಾಚಾರಿ ರಾಷ್ಟ್ರೀಯ ಪ್ರಶಸ್ತಿ:
ಡಾ. ಮಾನಯ್ಯ ಎನ್. ಬಡಿಗೇರ, ಹಿರಿಯ ಶಿಲ್ಪಿ ಸ್ಥಪತಿಗಳು, ಕೊತ್ತನೂರು, ಕಲ್ಬುರ್ಗಿ

ಹೊಯ್ಸಳ ಮಹಾಶಿಲ್ಪಿ ಮಲ್ಲಿಂತಮ ರಾಷ್ಟ್ರೀಯ ಪ್ರಶಸ್ತಿ:
ಶ್ರೀ ಹೊನ್ನಪ್ಪಾಚಾರ್, ಲೋಹ ಶಿಲ್ಪಿ, ಬೆಂಗಳೂರು

ವಾಸ್ತು ಪಿತಾಮಹ ಸ್ವರ್ವಸಿದ್ಧಿ ಆಚಾರಿ ರಾಷ್ಟ್ರೀಯ ಪ್ರಶಸ್ತಿ:
ಡಾ. ಪ್ರಭಾಕರ ಗೋವಿಂದ ಆಚಾರ್ಯ, ಅಂತರಾಷ್ಟ್ರೀಯ ಖ್ಯಾತಿಯ ಸ್ಥಪತಿಗಳು, ಕುಂಭಕೋಣಂ

ಈ ಪ್ರಶಸ್ತಿಗಳನ್ನು ಎಸ್.ಕೆ.ಎಫ್. ಸಮೂಹ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಕಳೆದ ಎರಡು ವರ್ಷಗಳಿಂದ ಪ್ರದಾನ ಮಾಡಲಾಗುತ್ತಿದ್ದು, ಡಾ. ಜಿ. ರಾಮಕೃಷ್ಣ ಆಚಾರ್ ಅವರ ಅಧ್ಯಕ್ಷತೆಯ ರಾಷ್ಟ್ರೀಯ ಪ್ರಶಸ್ತಿ ಸಮಿತಿ ಮತ್ತು ಡಾ. ಬಿ. ಶ್ರೀಕಂಠಾಚಾರ್ ಅವರ ಸಂಚಾಲಕತ್ವದಲ್ಲಿ ಆಯ್ಕೆ ಮಾಡಲಾಗಿದೆ.

ಆನೆಗುಂದಿಶ್ರೀ ಪ್ರಶಸ್ತಿ ಪ್ರದಾನ

ಮಹಾಸಂಸ್ಥಾನದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಆನೆಗುಂದಿಶ್ರೀ ಪ್ರಶಸ್ತಿ ನೀಡಲಾಗುತ್ತಿದೆ:

ವೇ.ಬ್ರ. ಶ್ರೀನಾಗಭೂಷಣ ಆಚಾರ್ಯ, ತುಮಕೂರು (ಶಿಲ್ಪ)

ಜ್ಯೋತಿಷಿ ಸಿ.ವಿ. ಪೊದುವಾಳ್, ಮಂಗಳೂರು (ಜ್ಯೋತಿಷ್ಯ)

ಶ್ರೀ ವಾದಿರಾಜ ಆಚಾರ್ಯ, ನೇಜಾರು (ಸಾಮಾಜಿಕ ಸೇವೆ)

ಡಾ. ಎಸ್.ಪಿ. ಗುರುದಾಸ್, ಮಂಗಳೂರು (ಹರಿದಾಸ ಸೇವೆ)

ವೇ.ಬ್ರ. ಶ್ರೀ ವಿಘ್ನೇಶ್ವರ ಪುರೋಹಿತ್, ಮೂಡಬಿದ್ರೆ (ವೈದಿಕ)

ಡಾ. ಕೃಷ್ಣ ಆಚಾರ್ಯ ನಕ್ರೆ ಕಾರ್ಕಳ
(ಶಿಲಾ ಶಿಲ್ಪ ವಿಭಾಗ)

ಶಿಲ್ಪಿ ದೇವಿದಾಸ್ ಆಚಾರ್ಯ, ತ್ರಿಶೂರು, ಕೇರಳ (ವಾಸ್ತುಶಿಲ್ಪ)

ಯುವ ಪ್ರತಿಭೆಗಳಿಗೆ ಅಭಿನಂದನೆ

ಶ್ರೀ ಪ್ರಮೋದ್ ಸಿ.ಕೆ., ಕಡೂರು

ಶ್ರೀ ಮನೋಜ್ಞ ಟಿ. ಆಚಾರ್ಯ, ಪುತ್ತೂರು

ಮಹಾದಾನಿಗಳಿಗೆ ಅಭಿನಂದನೆ

ಧಾರ್ಮಿಕ ಸಭೆ ಮತ್ತು ಗಣ್ಯರ ಉಪಸ್ಥಿತಿ

ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಶ್ರೀ ವಿ. ಶ್ರೀಧರ ಆಚಾರ್ಯ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ:
ಶ್ರೀ ಪಿ. ಸುಜ್ಞಾನ ಮೂರ್ತಿ, ಶ್ರೀ ಸುರೇಶ್ ಶೆಟ್ಟಿ ಗುರ್ಮೆ (ಶಾಸಕರು), ಶ್ರೀ ವಿನಯ್ ಕುಮಾರ್ ಸೊರಕೆ ಮಾಜಿ ಸಚಿವರು ಕರ್ನಾಟಕ ಸರಕಾರ,ಡಾ. ನಿಲೇಶ್ ವಿಶ್ವಕರ್ಮ, ಪ್ರೊ. ಪ್ರಿಯಾಂಕ ನಿಲೇಶ್ ವಿಶ್ವಕರ್ಮ ಭಾಗವಹಿಸಲಿದ್ದಾರೆ.

ವಿಶೇಷ ಆಹ್ವಾನಿತರು ಹಾಗೂ ಗೌರವ ಉಪಸ್ಥಿತಿ ಈ ಮಹೋತ್ಸವದಲ್ಲಿ ವಿಶೇಷ ಆಹ್ವಾನಿತರಾಗಿ ಹಾಗೂ ಗೌರವ ಉಪಸ್ಥಿತಿಯಾಗಿ ಕೆಳಗಿನ ಗಣ್ಯರು ಭಾಗವಹಿಸಲಿದ್ದಾರೆ:
ಶ್ರೀ ಶ್ರೀಧರ ವಿ. ಆಚಾರ್ಯ, ಮುಂಬಯಿ (ಹಿರಿಯ ಸ್ವರ್ಣೋದ್ಯಮಿ);
ಶ್ರೀ ರವೀಶ್ ಜಿ. ಆಚಾರ್ಯ, ಮುಂಬಯಿ (ಅಧ್ಯಕ್ಷರು, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್, ಮುಂಬಯಿ);
ಶ್ರೀ ತುಕಾರಾಮ ಆಚಾರ್ಯ, ಬೆಂಗಳೂರು (ಅಧ್ಯಕ್ಷರು, ದ.ಕ. ವಿಶ್ವ ಬ್ರಾಹ್ಮಣ ಸಂಘ, ಬೆಂಗಳೂರು);
ಶ್ರೀ ವಿ.ಎಸ್. ಮೋಹನ ಆಚಾರ್ಯ, ಬೆಂಗಳೂರು (ಅಧ್ಯಕ್ಷರು, ವಿಶ್ವಕರ್ಮ ಸಮಾಜ ವೇದಿಕೆ, ಬೆಂಗಳೂರು);
ಶ್ರೀ ಯು.ಎಸ್. ಗಿರೀಶ್ ಆಚಾರ್ಯ, ಕೊಯಂಬತ್ತೂರು (ಅಧ್ಯಕ್ಷರು, ದ.ಕ. ವಿಶ್ವಕರ್ಮ ಸಭಾ);
ಶ್ರೀ ಹೇಮಚಂದ್ರ ಆಚಾರ್ಯ, ಕಣಂದೂರು, ಕೊಯಂಬತ್ತೂರು (ಅಧ್ಯಕ್ಷರು, ವಿಶ್ವ ಶಿಲ್ಪ ಸಂಘ);
ಶ್ರೀ ಜನಾರ್ದನ ಆಚಾರ್ಯ, ಕಳತ್ತೂರು (ಅಧ್ಯಕ್ಷರು, ಕುತ್ಯಾರು ಗ್ರಾಮ ಪಂಚಾಯತ್);
ಡಾ. ಎಸ್.ಆರ್. ಹರೀಶ್ ಆಚಾರ್, ಮಂಗಳೂರು (ಅಧ್ಯಕ್ಷರು, ವಿಶ್ವಕರ್ಮ ಸಹಕಾರ ಬ್ಯಾಂಕ್);
ಶ್ರೀ ಉಪೇಂದ್ರ ಆಚಾರ್ಯ, ಪೆರ್ಡೂರು (ಅಧ್ಯಕ್ಷರು, ಎಸ್.ಕೆ. ಗೋಲ್ಡ್ ಸ್ಮಿತ್ ಸೊಸೈಟಿ, ಮಂಗಳೂರು).
ಆಸ್ಥಾನ ವಿದ್ವಾಂಸರಾಗಿ:
ವಿದ್ವಾನ್ ಮಹಾಮಹೋಪಾಧ್ಯಾಯ ಪಂಜ ಭಾಸ್ಕರ ಭಟ್;
ಅಂತರಾಷ್ಟ್ರೀಯ ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ, ಪಡೀಲು;
ವಿದ್ವಾನ್ ವೇ.ಬ್ರ. ಶ್ರೀ ಶಂಕರ ಆಚಾರ್ಯ ಕಡ್ಲಾಸ್ಕರ್ (ಪಂಡಿತ್), ಹುಬ್ಬಳ್ಳಿ.
ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಿತಿಯ ಪದಾಧಿಕಾರಿಗಳು:
ಡಾ. ಜಿ. ರಾಮಕೃಷ್ಣ ಆಚಾರ್, ಅಧ್ಯಕ್ಷರು;
ಡಾ. ಬಿ. ಶ್ರೀಕಂಠಾಚಾರ್, ಸಂಚಾಲಕರು;
ಶ್ರೀ ಪಿ.ವಿ. ಗಂಗಾಧರ ಆಚಾರ್ಯ, ಗೌರವಾಧ್ಯಕ್ಷರು, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ;
ಶ್ರೀ ದಿನೇಶ್ ಆಚಾರ್ಯ, ಅಧ್ಯಕ್ಷರು, ಪಂಚಸಿಂಹಾಸನ ವಿಕಾಸ ಸಮಿತಿ, ಪಡುಬಿದ್ರಿ;
ಶ್ರೀ ನಾಗರಾಜ ಆಚಾರ್ಯ, ಕಾಡಬೆಟ್ಟು.
ದೇವಸ್ಥಾನಗಳ ಧರ್ಮದರ್ಶಿಗಳು:
ಶ್ರೀ ಕಳಿ ಚಂದ್ರಯ್ಯ ಆಚಾರ್ಯ, ಉಪ್ರಳ್ಳಿ;
ಶ್ರೀ ಕೆ. ಪ್ರಭಾಕರ ಆಚಾರ್ಯ, ಮಧೂರು;
ಶ್ರೀ ಮಧುಕರ ಚಂದ್ರಶೇಖರ ಆಚಾರ್ಯ, ಗೋಕರ್ಣ;
ಶ್ರೀ ಬಾಲಕೃಷ್ಣ ಆಚಾರ್ಯ, ಮೂಡಬಿದ್ರೆ;
ಶ್ರೀ ಮುರಹರಿ ಆಚಾರ್ಯ, ಕಟಪಾಡಿ;
ಶ್ರೀ ರಾಮಚಂದ್ರ ಆಚಾರ್ಯ, ಕಾರ್ಕಳ;
ಶ್ರೀ ಗಣೇಶ ಆಚಾರ್ಯ, ಕಾಪು;
ಶ್ರೀ ಕೆ. ಸುಧಾಕರ ಆಚಾರ್ಯ, ಕೊಲಕಾಡಿ;
ಶ್ರೀ ಸುಂದರ ಆಚಾರ್ಯ, ಕೋಟೆಕಾರು;
ಶ್ರೀ ಬಿ.ಎಂ. ಯದುನಂದನ ಆಚಾರ್ಯ, ಬಂಗ್ರಮಂಜೇಶ್ವರ;
ಶ್ರೀ ಜನಾರ್ದನ ಆಚಾರ್ಯ, ಆರಿಕ್ಕಾಡಿ;
ಶ್ರೀ ಪ್ರಭಾಕರ ಆಚಾರ್ಯ, ಕೋಟೆಕಾರು–ಮಧೂರು;
ಶ್ರೀ ಪುರುಷೋತ್ತಮ ಆಚಾರ್ಯ, ಕಾಞಂಗಾಡು;
ಶ್ರೀ ಗಜಾನನ ಆರ್. ಆಚಾರ್ಯ, ಭಟ್ಕಳ;
ಶ್ರೀ ಸಿ.ಎ. ಶ್ರೀಧರ ಆಚಾರ್ಯ, ಪನ್ವೇಲ್, ಮುಂಬಯಿ;
ಶ್ರೀ ಚಿಕ್ಕಣ್ಣ ಆಚಾರ್, ಬೆಂಗಳೂರು;
ಶ್ರೀ ನಾಗರಾಜ ಹಾವನೂರ, ಹಳೇ ಹುಬ್ಬಳ್ಳಿ;
ಶ್ರೀ ದತ್ತಾ ಎಂ. ಆಚಾರ್ಯ, ಅಂಕೋಲ;
ಶ್ರೀ ಜಗದೀಶ್ ಆಚಾರ್ಯ, ಪಡುಪಣಂಬೂರು;
ಶ್ರೀ ಗುರುನಾಥ ಪಟ್ಟಣಕೋಡಿ, ಧಾರವಾಡ.
ಮಹಾಸಂಸ್ಥಾನದ ವಿವಿಧ ಸಮಿತಿಗಳ ಪ್ರಮುಖರು:
ಶ್ರೀ ಬಿ. ಸೂರ್ಯಕುಮಾರ್ ಆಚಾರ್ಯ, ಹಳೆಯಂಗಡಿ;
ಶ್ರೀ ಗಣೇಶ್ ಆಚಾರ್ಯ, ಕೆಮ್ಮಣ್ಣು;
ಶ್ರೀ ಸುಂದರ ಆಚಾರ್ಯ, ಬೆಳುವಾಯಿ;
ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ, ಉಡುಪಿ;
ಶ್ರೀ ಹರಿಶ್ಚಂದ್ರ ಎನ್. ಆಚಾರ್ಯ, ಬೆಂಗಳೂರು (ಶಾಖಾ ಮಠ ಸಮಿತಿ ಅಧ್ಯಕ್ಷರು);
ಶ್ರೀ ಕೃಷ್ಣ ವಿ. ಆಚಾರ್ಯ, ಮುಂಬಯಿ;
ಶ್ರೀ ಶುಭಕರ ಎನ್. ಆಚಾರ್ಯ, ಕೊಯಂಬತ್ತೂರು.

ಕರಾವಳಿ, ಬೆಂಗಳೂರು, ಹುಬ್ಬಳ್ಳಿ, ಮುಂಬಯಿ ಹಾಗೂ ಇತರೆ ಪ್ರದೇಶಗಳ ಕಾಳಿಕಾಂಬಾ ದೇವಾಲಯಗಳ ಧರ್ಮದರ್ಶಿಗಳು, ಮಹಾಸಂಸ್ಥಾನದ ವಿವಿಧ ಸಮಿತಿಗಳ ಪ್ರಮುಖರು ಹಾಗೂ ಅನೇಕ ಸಂಘ-ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿರಲಿದ್ದಾರೆ.

ಸಮಾಜದ ಸಮಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆನೆಗುಂದಿ ಪ್ರತಿಷ್ಠಾನವು ಮನವಿ ಮಾಡಿದೆ ಎಂದು
ಪ್ರಧಾನ ಕಾರ್ಯದರ್ಶಿಲೋಕೇಶ್ ಎಂ.ಬಿ. ಆಚಾರ್ ಕಂಬಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments