ಅತಿ ಹೆಚ್ಚು ಹಂದಿ ಮಾಂಸ ಉತ್ಪಾದಿಸುವ ದೇಶ ಚೀನಾ, ಅತಿ ಹೆಚ್ಚು ತಲಾವಾರು ಪೋರ್ಕ್ ತಿನ್ನುವ ದೇಶ ಕ್ರೋಶಿಯಾ. ಚೀನಾ ಲೋಕದ 48 ಶೇಕಡಾ, ಯೂರೋಪು ಒಕ್ಕೂಟ 18 ಶೇಕಡಾ, ಯುಎಸ್ಎ 11 ಶೇಕಡಾ ಹಂದಿ ಮಾಂಸ ಉತ್ಪಾದಿಸುವ ದೇಶವಾಗಿದೆ. ಅಗ್ರ ಪೋರ್ಕ್ ಉತ್ಪಾದಕ ದೇಶಗಳು ಇವು.ಚೀನಾ 5.9 ಕೋಟಿ ಟನ್, ಇಯು 2.2 ಕೋಟಿ ಟನ್, ಯುಎಸ್ಎ 1.52 ಕೋಟಿ ಟನ್, ಬ್ರೆಜಿಲ್ 48 ಲಕ್ಷ ಟನ್, ರಶಿಯಾ 42 ಲಕ್ಷ ಟನ್, ವಿಯೆಟ್ನಾಂ 40 ಲಕ್ಷ ಟನ್, ಕೆನಡಾ 21.5 ಲಕ್ಷ ಟನ್, ದಕ್ಷಿಣ ಕೊರಿಯಾ 14.3 ಲಕ್ಷ ಟನ್, ಮೆಕ್ಸಿಕೋ 13.7 ಲಕ್ಷ ಟನ್, ಜಪಾನ್ 12.8 ಲಕ್ಷ ಟನ್; ಅಗ್ರ ಪೋರ್ಕ್ ಉತ್ಪಾದಕ ದೇಶಗಳು.

ಪ್ರಪಂಚದ ಒಟ್ಟು ಹಂದಿ ಮಾಂಸ ಸೇವನೆಯ ಅರೆ ಪಾಲು ಚೀನಾದಲ್ಲಿ ಆಗುತ್ತದೆ. ಆದರೆ ತಲಾ ಹೆಚ್ಚು ಪೋರ್ಕ್ ತಿನ್ನುವ ಅಗ್ರ ದೇಶ ಕ್ರೋಶಿಯಾ ಆಗಿದೆ. ಇಲ್ಲಿನ ಜನರು ಪ್ರತಿ ವರುಷ ತಲಾ 57 ಕಿಲೋ ಹಂದಿ ಮಾಂಸ ಭುಂಜಿಸುವರು. ಕ್ರಮವಾಗಿ ಬಳಿಕದ ಸ್ಥಾನಗಳಲ್ಲಿ ಸ್ಪೆಯಿನ್, ಮಾಂಟೆನೆಗ್ರೊ, ಹಾಂಗ್ ಕಾಂಗ್, ಪೋಲೆಂಡ್ ದೇಶಗಳು ಇವೆ. ಈ ದೇಶಗಳವರು ಪ್ರತಿ ವರುಷ ತಲಾ 55 ಕಿಲೋದ ಆಚೀಚೆ ಹಂದಿ ಮಾಂಸ ಉಣ್ಣುತ್ತಾರೆ.


