ಇಳಿದ ಮಹಿಳಾ ಸಂಸದೆಯರ ಸಂಖ್ಯೆ

2019ರ 17ನೇ ಲೋಕಸಭೆಯಲ್ಲಿ ಅತಿ ಹೆಚ್ಚು 78 ಮಹಿಳಾ ಸಂಸದೆಯರು ಇದ್ದರು. ಈ ಬಾರಿ ಸಂಸದೆಯರಾಗಿ ಗೆದ್ದವರ ಸಂಖ್ಯೆಯು 73ಕ್ಕೆ ಇಳಿದಿದೆ.ಶೇಕಡಾವಾರು 14 ಇದ್ದುದು ಈ ಸಲ 13 ಶೇಕಡಾಕ್ಕೆ ಇಳಿಕೆಯಾಗಿದೆ. ಒಟ್ಟು 797 ಮಂದಿ ಮಹಿಳೆಯರು ಸ್ಪರ್ಧೆಯಲ್ಲಿ ಇದ್ದರು; ಗೆದ್ದವರು 73 ಮಹಿಳೆಯರು. 2014ರಲ್ಲಿ ಬರೇ 64 ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗಿದ್ದರು.
ಬಿಜೆಪಿಯಿಂದ 69 ಮಂದಿ ಸ್ಪರ್ಧಿಸಿ 30 ಮಂದಿ ಮತ್ತು ಕಾಂಗ್ರೆಸ್ಸಿನಿಂದ 41 ಸ್ಪರ್ಧಿಸಿ 14 ಮಂದಿ ಮಹಿಳೆಯರು ಗೆದ್ದಿದ್ದಾರೆ. ಅತಿ ಹೆಚ್ಚು ಹೆಣ್ಣುಮಕ್ಕಳು ಆಯ್ಕೆ ಆದ ರಾಜ್ಯ ಪಡುವಣ ಬಂಗಾಳ ಮತ್ತು ಅತಿ ಹೆಚ್ಚು ಮಹಿಳೆಯರನ್ನು ಒಂದೇ ರಾಜ್ಯದಲ್ಲಿ ಹೊಂದಿರುವುದು. ತೃಣಮೂಲ ಕಾಂಗ್ರೆಸ್. ಆ ಪಕ್ಷವು 11 ಹೆಣ್ಣುಮಕ್ಕಳನ್ನು ನಿಲ್ಲಿಸಿ ಗೆಲ್ಲಿಸಿಕೊಂಡಿದೆ. ಉಳಿದಂತೆ ಸಮಾಜವಾದಿ ಪಕ್ಷದಿಂದ 4 ಮತ್ತು ಡಿಎಂಕೆಯಿAದ 3 ಮಂದಿ ಮಹಿಳೆಯರು ಗೆದ್ದಿದ್ದಾರೆ. ಎನ್‌ಸಿಪಿ ಮೊದಲಾದವುಗಳಲ್ಲಿ ಒಬ್ಬೊಬ್ಬರು ಗೆದ್ದಿದ್ದಾರೆ.

ಕರ್ನಾಟಕದಲ್ಲಿ ಚಿಕ್ಕೋಡಿಯಿಂದ ಪ್ರಿಯಾಂಕಾ ಜಾರಕಿಹೊಳಿ, ದಾವಣಗೆರೆಯಿಂದ ಪ್ರಭಾ ಮಲ್ಲಿಕಾರ್ಜುನ ಕಾಂಗ್ರೆಸ್ಸಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದು, ಮೊದಲ ಬಾರಿಗೆ ಗೆದ್ದವರು. ಹಳಬರೆಂದರೆ ಬೆಂಗಳೂರು ಉತ್ತರದಿಂದ ಗೆದ್ದಿರುವ ಶೋಭಾ ಕರಂದ್ಲಾಜೆಯವರು.ಕಂಗನಾ ರನೌತ್ ಮೊದಲಾದ ಮಹಿಳೆಯರೂ ಗೆದ್ದಿದ್ದಾರೆ. ನಟಿಯರೂ ಗೆದ್ದಿದ್ದಾರೆ.
