ಶಿವ ಮಂದಿರ ಒಡೆಯಲು ದಿಲ್ಲಿ ಹೈಕೋರ್ಟ್ ಆದೇಶ

ಯಮುನಾ ನದಿಯ ದಡದಲ್ಲಿ ತಾಜ್ ಎನ್‍ಕ್ಲೇವ್ ಗೀತಾ ಕಾಲೋನಿಯಲ್ಲಿ ಅಕ್ರಮವಾಗಿ ಕಟ್ಟಿರುವ ಶಿವ ಮಂದಿರವನ್ನು ಕೆಡವಲು ದಿಲ್ಲಿ ಉಚ್ಚ ನ್ಯಾಯಾಲಯವು ಕಟ್ಟಳೆ ಇಟ್ಟಿತು.
ಯಮುನಾ ನದಿಯ ದಡದಲ್ಲಿನ ಅಕ್ರಮ ಕಟ್ಟುಗೆಗಳನ್ನು ತೆರವುಗೊಳಿಸಿದರೆ ಶಿವನೂ ಸಂತೋಷ ಪಡುತ್ತಾನೆ. ಶಿವನಿಗೆ ನಮ್ಮ ರಕ್ಷಣೆಯ ಅಗತ್ಯವಿಲ್ಲ. ನಮಗೆ ಶಿವನ ರಕ್ಷಣೆ ಆಶೀರ್ವಾದ ಬೇಕು ಅಷ್ಟೆ. ಮೊದಲು ಅಕ್ರಮ ಕಟ್ಟಡಗಳು ತೆರವಾಗಲಿ ಎಂದು ದಿಲ್ಲಿ ಉಚ್ಚ ನ್ಯಾಯಾಲಯದ ಜಸ್ಟಿಸ್ ಧರ್ಮೇಶ್ ಶರ್ಮಾ ಮಂದಿರ ಒಡೆಯಲು ಆಜ್ಞಾಪಿಸಿದರು.
ಪ್ರಾಚೀನ್ ಶಿವ ಮಂದಿರ ಏವಂ ಆಖಾಡಾವು ಇಲ್ಲಿನ ಶಿವ ಮಂದಿರ ಒಡೆಯದಂತೆ ಅರ್ಜಿ ಸಲ್ಲಿಸಿತ್ತು. ಕೋರ್ಟು ಅದನ್ನು ವಜಾಗೊಳಿಸಿತು.
